• Home
  • »
  • News
  • »
  • jobs
  • »
  • Bengaluru Jobs: ಪದವಿ ಆಗಿದ್ರೆ ಮುಳಿಯ ಜ್ಯುವೆಲ್ಸ್​ನಲ್ಲಿದೆ ಬಂಪರ್ ಉದ್ಯೋಗ, ಈಗಲೇ ಅಪ್ಲೈ ಮಾಡಿ

Bengaluru Jobs: ಪದವಿ ಆಗಿದ್ರೆ ಮುಳಿಯ ಜ್ಯುವೆಲ್ಸ್​ನಲ್ಲಿದೆ ಬಂಪರ್ ಉದ್ಯೋಗ, ಈಗಲೇ ಅಪ್ಲೈ ಮಾಡಿ

ಮುಳಿಯ ಜ್ಯುವೆಲ್ಸ್

ಮುಳಿಯ ಜ್ಯುವೆಲ್ಸ್

ಸೇಲ್ಸ್​ ಎಕ್ಸಿಕ್ಯೂಟಿವ್ ಹುದ್ದೆಗೆ ಆಯ್ಕೆಯಾಗುವ ವ್ಯಕ್ತಿಗೆ ಉತ್ತಮ ಸಂಬಳದೊಂದಿಗೆ ಜಾಬ್ ಮಾರ್ಕೆಟ್ ಆಧಾರದ ಮೇಲೆ ಇನ್​ಸೆಂಟಿವ್​ ಕೂಡ ನೀಡಲಾಗುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

    Muliya Jewels Recruitment 2022: ಮುಳಿಯ ಜ್ಯುವೆಲ್ಸ್​​ನಲ್ಲಿ ಸೇಲ್ಸ್​ ಎಕ್ಸಿಕ್ಯೂಟಿವ್(ಪುರುಷ)(Sales Executives) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರರು(Degree Candidates) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಮಡಿಕೇರಿ, ಬೆಳ್ತಂಗಡಿ ಮತ್ತು ಬೆಂಗಳೂರಿನ ಮಳಿಗೆಗಳಲ್ಲಿ ಸೇಲ್ಸ್​ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇವೆ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಮುಳಿಯ ಜ್ಯುವೆಲ್ಸ್
    ಹುದ್ದೆಸೇಲ್ಸ್​ ಎಕ್ಸಿಕ್ಯೂಟಿವ್
    ವೇತನನಿಯಮಾನುಸಾರ
    ಸ್ಥಳಮಡಿಕೇರಿ, ಬೆಳ್ತಂಗಡಿ, ಬೆಂಗಳೂರು
    ವಿದ್ಯಾರ್ಹತೆಪದವಿ
    ಹೆಚ್ಚಿನ ಮಾಹಿತಿಗಾಗಿ9353031916, 8494936916
    ಅಧಿಕೃತ ವೆಬ್​ಸೈಟ್recruitment@muliyajewels.com


    ಅನುಭವ:
    ಈ ಹುದ್ದೆಗಳಿಗೆ ಫ್ರೆಶರ್ಸ್​ ಕೂಡ ಅರ್ಜಿ ಹಾಕಬಹುದು. ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


    ವೇತನ:


    ಸೇಲ್ಸ್​ ಎಕ್ಸಿಕ್ಯೂಟಿವ್ ಹುದ್ದೆಗೆ ಆಯ್ಕೆಯಾಗುವ ವ್ಯಕ್ತಿಗೆ ಉತ್ತಮ ಸಂಬಳದೊಂದಿಗೆ ಜಾಬ್ ಮಾರ್ಕೆಟ್ ಆಧಾರದ ಮೇಲೆ ಇನ್​ಸೆಂಟಿವ್​ ಕೂಡ ನೀಡಲಾಗುತ್ತದೆ.


    ಇದನ್ನೂ ಓದಿ: Job Alert: ಚಿಕ್ಕಬಳ್ಳಾಪುರ ಡಿಸಿ ಆಫೀಸ್​ನಲ್ಲಿ ಪಿಜಿ ಆದವರಿಗೆ ಬಂಪರ್ ಉದ್ಯೋಗ, ತಿಂಗಳಿಗೆ ₹ 48,000 ಸಂಬಳ


    ವಿದ್ಯಾರ್ಹತೆ:
    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಹೀಗಾಗಿ ಪದವೀಧರರು ಈಗಲೇ ಅರ್ಜಿ ಸಲ್ಲಿಸಿ.


    ಉದ್ಯೋಗ ಎಲ್ಲಿ?


    ಆಯ್ಕೆಯಾಗುವ ವ್ಯಕ್ತಿಗೆ ಮಡಿಕೇರಿ, ಬೆಳ್ತಂಗಡಿ ಮತ್ತು ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.


    ಇತರೆ ಸೌಲಭ್ಯ:


    ಸೇಲ್ಸ್​ ಎಕ್ಸಿಕ್ಯೂಟಿವ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗೆ ಸಂಬಳ, ESI, PF ಜೊತೆಗೆ ಊಟ ಮತ್ತು ವಸತಿ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ.


    ಹೆಚ್ಚಿನ ಮಾಹಿತಿಗಾಗಿ:


    ಹೆಚ್ಚಿನ ಮಾಹಿತಿಗಾಗಿ recruitment@muliyajewels.com ಗೆ ಭೇಟಿ ನೀಡಿ. ಅಥವಾ ಮೊಬೈಲ್ ನಂಬರ್- 9353031916, 8494936916 ಗೆ ಕರೆ ಮಾಡಿ.


    ಮುಳಿಯ ಜ್ಯುವೆಲ್ಸ್​ನ ಮಳಿಗೆಗಳು ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪ ಮತ್ತು ಬೆಂಗಳೂರಿನಲ್ಲಿವೆ.

    Published by:Latha CG
    First published: