• Home
  • »
  • News
  • »
  • jobs
  • »
  • Bengaluru Jobs: ಎಂಜಿನಿಯರಿಂಗ್ ಪಾಸಾಗಿದ್ರೆ BELನಲ್ಲಿದೆ ಉದ್ಯೋಗ, ಮಾಸಿಕ ವೇತನ ₹ 55,000

Bengaluru Jobs: ಎಂಜಿನಿಯರಿಂಗ್ ಪಾಸಾಗಿದ್ರೆ BELನಲ್ಲಿದೆ ಉದ್ಯೋಗ, ಮಾಸಿಕ ವೇತನ ₹ 55,000

BEL

BEL

ನವೆಂಬರ್ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 23 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

    BEL Recruitment 2022: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharat Electronics Limited -BEL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿಇಎಲ್​ನಲ್ಲಿ(BEL) ಒಟ್ಟು 111 ಟ್ರೈನಿ ಎಂಜಿನಿಯರ್-1, ಪ್ರಾಜೆಕ್ಟ್​ ಎಂಜಿನಿಯರ್-1 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಬಿಇ/ಬಿ.ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 23 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ಬಿಇಎಲ್(BEL)​ನ ಅಧಿಕೃತ ವೆಬ್​ಸೈಟ್ ​bel-india.in ಗೆ ಭೇಟಿ ನೀಡಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್
    ಹುದ್ದೆಯ ಹೆಸರುಟ್ರೈನಿ ಎಂಜಿನಿಯರ್-1, ಪ್ರಾಜೆಕ್ಟ್​ ಎಂಜಿನಿಯರ್-1
    ಒಟ್ಟು ಹುದ್ದೆ111
    ವಿದ್ಯಾರ್ಹತೆಬಿಇ, ಬಿ.ಟೆಕ್
    ವೇತನಮಾಸಿಕ ₹ 30,000-55,000
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಬಗೆಆಫ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ09/11/2022
    ಅರ್ಜಿ ಸಲ್ಲಿಸಲು ಕೊನೆ ದಿನ23/11/2022


    ಹುದ್ದೆಯ ಮಾಹಿತಿ:
    ಟ್ರೈನಿ ಇಂಜಿನಿಯರ್-I (PDIC01) -33
    ಪ್ರಾಜೆಕ್ಟ್ ಇಂಜಿನಿಯರ್-I (PDIC02) -39
    ಟ್ರೈನಿ ಇಂಜಿನಿಯರ್-I (COE001) -17
    ಪ್ರಾಜೆಕ್ಟ್ ಇಂಜಿನಿಯರ್-I (COE002)-22
    ಒಟ್ಟು 111 ಹುದ್ದೆಗಳು


    ಇದನ್ನೂ ಓದಿ: HAL ಬೆಂಗಳೂರಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳು ಖಾಲಿ, ಅಪ್ಲಿಕೇಶನ್ ಹಾಕಲು ಇಲ್ಲಿ ಕ್ಲಿಕ್ ಮಾಡಿ


    ವಿದ್ಯಾರ್ಹತೆ:
    ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಟ್ರೈನಿ ಎಂಜಿನಿಯರ್-1, ಪ್ರಾಜೆಕ್ಟ್​ ಎಂಜಿನಿಯರ್-1 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್/ಕಂಪ್ಯೂಟರ್ ಸೈನ್ಸ್‌ನಲ್ಲಿ B.Sc, B.E ಅಥವಾ B.Tech ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಟ್ರೈನಿ ಇಂಜಿನಿಯರ್-I (PDIC01) - ಗರಿಷ್ಠ 28 ವರ್ಷ
    ಪ್ರಾಜೆಕ್ಟ್ ಇಂಜಿನಿಯರ್-I (PDIC02) -ಗರಿಷ್ಠ 32 ವರ್ಷ
    ಟ್ರೈನಿ ಇಂಜಿನಿಯರ್-I (COE001) - ಗರಿಷ್ಠ 28 ವರ್ಷ
    ಪ್ರಾಜೆಕ್ಟ್ ಇಂಜಿನಿಯರ್-I (COE002)-ಗರಿಷ್ಠ 32 ವರ್ಷ


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು-3 ವರ್ಷ
    ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    PWD ಅಭ್ಯರ್ಥಿಗಳು- 10 ವರ್ಷ


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
    ಟ್ರೈನಿ ಇಂಜಿನಿಯರ್-I: ಜನರಲ್, ಒಬಿಸಿ, EWS ಅಭ್ಯರ್ಥಿಗಳಿಗೆ 150 ರೂ. ಅರ್ಜಿ ಶುಲ್ಕ
    ಪ್ರಾಜೆಕ್ಟ್ ಇಂಜಿನಿಯರ್-I ಜನರಲ್, ಒಬಿಸಿ, EWS ಅಭ್ಯರ್ಥಿಗಳಿಗೆ 400 ರೂ. ಅರ್ಜಿ ಶುಲ್ಕ
    ಪಾವತಿಸುವ ಬಗೆ: ಆನ್​ಲೈನ್​


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: Government Job: ಹಾವೇರಿಯಲ್ಲಿ 119 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ Apply ಮಾಡಿ


    ವೇತನ:
    ಟ್ರೈನಿ ಇಂಜಿನಿಯರ್-I (PDIC01) ಮಾಸಿಕ ರೂ.30000-40000/-
    ಪ್ರಾಜೆಕ್ಟ್ ಇಂಜಿನಿಯರ್-I (PDIC02) ಮಾಸಿಕ ರೂ.40000-55000/-
    ಟ್ರೈನಿ ಇಂಜಿನಿಯರ್-I (COE001) ಮಾಸಿಕ ರೂ.30000-40000/-
    ಪ್ರಾಜೆಕ್ಟ್ ಇಂಜಿನಿಯರ್-I (COE002) ಮಾಸಿಕ ರೂ.40000-55000/-


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 23, 2022ಕ್ಕೆ ಮುನ್ನ ಕಳುಹಿಸಬೇಕು.


    ಮ್ಯಾನೇಜರ್ (HR),
    ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರ (PDIC),
    ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್,
    ಪ್ರೊ. U R ರಾವ್ ರಸ್ತೆ,
    ನಾಗಾಲ್ಯಾಂಡ್ ವೃತ್ತದ ಹತ್ತಿರ,
    ಜಾಲಹಳ್ಳಿ ಪೋಸ್ಟ್,
    ಬೆಂಗಳೂರು - 560013,
    ಭಾರತ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 23/11/2022

    Published by:Latha CG
    First published: