• Home
  • »
  • News
  • »
  • jobs
  • »
  • Bengaluru Jobs: ಬೆಂಗಳೂರಿನ ನಿಮ್ಹಾನ್ಸ್​ನಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 78,000 ಸಂಬಳ-ಇಲ್ಲಿ Apply ಮಾಡಿ

Bengaluru Jobs: ಬೆಂಗಳೂರಿನ ನಿಮ್ಹಾನ್ಸ್​ನಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 78,000 ಸಂಬಳ-ಇಲ್ಲಿ Apply ಮಾಡಿ

ನಿಮ್ಹಾನ್ಸ್​

ನಿಮ್ಹಾನ್ಸ್​

ರಿಸರ್ಚ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು.

  • Share this:

    NIMHANS Recruitment 2022: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ರಿಸರ್ಚ್​ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 19, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು
    ಹುದ್ದೆರಿಸರ್ಚ್​ ಅಸಿಸ್ಟೆಂಟ್
    ಒಟ್ಟು ಹುದ್ದೆ3
    ವಿದ್ಯಾರ್ಹತೆಸ್ನಾತಕೋತ್ತರ ಪದವಿ, ಪಿಎಚ್​ಡಿ
    ವೇತನಮಾಸಿಕ ₹ 78,000
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ05/11/2022
    ಅರ್ಜಿ ಸಲ್ಲಿಸಲು ಕೊನೆ ದಿನ19/11/2022


    ಹುದ್ದೆಯ ಮಾಹಿತಿ:
    ರಿಸರ್ಚ್​ ಅಸಿಸ್ಟೆಂಟ್ (ಸೀನಿಯರ್)-1
    ರಿಸರ್ಚ್​ ಅಸಿಸ್ಟೆಂಟ್ (ಜೂನಿಯರ್)-2


    ಇದನ್ನೂ ಓದಿ: Government Job: ಬೆಂಗಳೂರಿನಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗಿಯಾಗಿ, ಕೇಂದ್ರ ಸರ್ಕಾರದ ಕೆಲಸ ಗಿಟ್ಟಿಸಿಕೊಳ್ಳಿ!


    ವಿದ್ಯಾರ್ಹತೆ:
    ರಿಸರ್ಚ್​ ಅಸಿಸ್ಟೆಂಟ್ (ಸೀನಿಯರ್)- ಸೈಕಿಯಾಟ್ರಿಯಲ್ಲಿ ಎಂಡಿ, ಕ್ಲಿನಿಕಲ್ ಸೈಕಾಲಜಿ/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್​/ ಸೈಕಿಯಾಟ್ರಿಕ್ ನರ್ಸಿಂಗ್ ಪ್ರೊಫೆಸಿಯೆನ್ಸಿಯಲ್ಲಿ ಪಿಎಚ್​ಡಿ
    ರಿಸರ್ಚ್​ ಅಸಿಸ್ಟೆಂಟ್ (ಜೂನಿಯರ್)- ಕ್ಲಿನಿಕಲ್ ಸೈಕಾಲಜಿ/ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್​ನಲ್ಲಿ ಎಂ.ಫಿಲ್, ಸೈಕಿಯಾಟ್ರಿಕ್ ನರ್ಸಿಂಗ್/ಸೈಕಾಲಜಿಯಲ್ಲಿ ಎಂಎಸ್ಸಿ‘


    ವಯೋಮಿತಿ:
    ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ರಿಸರ್ಚ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಅರ್ಜಿ ಶುಲ್ಕ:
    ಯಾವುದೇ ಅರ್ಜಿ ಶುಲ್ಕ ಇಲ್ಲ


    ಇದನ್ನೂ ಓದಿ: HAL Recruitment: ನೀವು SSLC, PUC ಪಾಸಾಗಿದ್ರೆ ತುಮಕೂರಿನಲ್ಲಿದೆ ಬಂಪರ್ ಉದ್ಯೋಗ, ತಿಂಗಳಿಗೆ 21,000 ಸಂಬಳ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ವೇತನ:
    ರಿಸರ್ಚ್​ ಅಸಿಸ್ಟೆಂಟ್ (ಸೀನಿಯರ್)- ಮಾಸಿಕ ₹78,000
    ರಿಸರ್ಚ್​ ಅಸಿಸ್ಟೆಂಟ್ (ಜೂನಿಯರ್)-ಮಾಸಿಕ ₹39,000


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 19/11/2022

    Published by:Latha CG
    First published: