• Home
  • »
  • News
  • »
  • jobs
  • »
  • Job in Bengaluru: ಬೆಂಗಳೂರಿನ ಬೌನ್ಸ್​ ಕಂಪನಿಯಲ್ಲಿದೆ ಉದ್ಯೋಗ; ಡಿಗ್ರಿ ಆಗಿದ್ರೆ ಸಾಕು

Job in Bengaluru: ಬೆಂಗಳೂರಿನ ಬೌನ್ಸ್​ ಕಂಪನಿಯಲ್ಲಿದೆ ಉದ್ಯೋಗ; ಡಿಗ್ರಿ ಆಗಿದ್ರೆ ಸಾಕು

ಬೌನ್ಸ್

ಬೌನ್ಸ್

ಸಂಸ್ಥೆಯ ನಿರ್ವಹಣೆ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಪದವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

  • Share this:

    ಸ್ಟಾರ್ಟ್​ ಅಪ್​ ಉದ್ದಿಮೆಗಳಿಗೆ ಅವಕಾಶದ ಹೆಬ್ಬಾಗಿರಲಾಗಿರುವ ಬೆಂಗಳೂರಿನಲ್ಲಿ 2018ರಲ್ಲಿ ಆರಂಭವಾದ ಬೌನ್ಸ್​ -ಬಾಡಿಗೆ ಬೈಕ್​ ಸೇವಾ ಸಂಸ್ಥೆ (Bounce- Rental Bike Service) ಇದೀಗ ಹೆಮ್ಮೆರವಾಗಿ ಬೆಳೆದಿದೆ. ಬೆರಳೆಣಿಕೆ ಜನರಿಂದ ಆರಂಭವಾದ ಕಂಪನಿಯಲ್ಲಿ ಇಂದು ಅನೇಕರು ಉದ್ಯೋಗ (Job) ಕಂಡು ಕೊಳ್ಳುವಂತಾಗಿದೆ. ಇನ್ನು ಅನೇಕ ಉದ್ಯೋಗ ಆಕಾಂಕ್ಷಿಗಳಿಗೆ ಕೆಲಸದ ಭರವಸೆ ನೀಡುತ್ತಿದೆ. ಇದೀಗ ಮತ್ತೊಮ್ಮೆ ಅಂತಹ ಅವಕಾಶವನ್ನು ಬೌನ್ಸ್​ ನೀಡಿದೆ. ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆಗೆ ಸಿದ್ದವಾಗಿರುವ ಪದವಿ ಅಭ್ಯರ್ಥಿಗಳಿಗೆ ಸಂಸ್ಥೆ ಅರ್ಜಿ ಆಹ್ವಾನಿಸಿದೆ.


    ಸಂಸ್ಥೆಯ ನಿರ್ವಹಣೆ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಪದವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೌನ್ಸ್​ನಂತಹ ಪ್ರತಿಷ್ಠಿತ, ವಿಶ್ವಾಸನೀಯ ಕಂಪನಿಯಲ್ಲಿ ಕೆಲಸ ಮಾಡುವ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಮಾಹಿತಿ, ಅರ್ಜಿ ಸಲ್ಲಿಕೆ ವಿಧಾನ, ಹುದ್ದೆಯ ಕಾರ್ಯ ಮತ್ತು ಜವಾಬ್ದಾರಿ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.


    ಸಂಸ್ಥೆ : ಬೌನ್ಸ್​ (Bounce)
    ಹುದ್ದೆಗಳು: ‘ಮ್ಯಾನೇಜರ್​
    ಒಟ್ಟು ಹುದ್ದೆಗಳು: 5
    ಕಾರ್ಯ ನಿರ್ವಹಣೆ ಸ್ಥಳ: ಬೆಂಗಳೂರು
    ವೇತನ: ಕಂಪನಿ ನಿಯಮ ಅನುಸಾರ

    ಹುದ್ದೆಹುದ್ದೆ ವಿಭಾಗವಿದ್ಯಾರ್ಹತೆಅನುಭವ
    ಕಾರ್ಯ ನಿರ್ವಾಹಕ ಅಧಿಕಾರಿಮ್ಯಾನೇಜರ್​ಯಾವುದೇ ಪದವಿ2ರಿಂದ 5 ವರ್ಷ

    ಅರ್ಜಿ ಸಲ್ಲಿಕೆ ವಿಧಾನ (Apply Method)
    ಇಮೇಲ್​ ಮೂಲಕ


    ಇಮೇಲ್​ ವಿಳಾಸ: careers@bounceshare.com
    ಅಧಿಕೃತ ವೆಬ್‌ಸೈಟ್: bounceshare.com


    ವಿಶೇಷ ಸೂಚನೆ (Special Instructions)
    ಅಭ್ಯರ್ಥಿಗಳು ಕಂಪನಿ ಮತ್ತು ಹುದ್ದೆಯ ಜವಾಬ್ದಾರಿಗಳ ಕುರಿತು ಸಂಪೂರ್ಣವಾಗಿ ತಿಳಿಯಬೇಕು.
    ಸಾಸ್​ ಪರಿಸರದ ಕುರಿತು ಅರಿವನ್ನು ಹೊಂದಿರಬೇಕು
    ಗ್ರಾಹಕ ಯಶಸ್ಸಿನ ವ್ಯವಸ್ಥಾಪಕ, ಆಟೋ ಮೊಬೈಲ್​ ಅನುಭವ ತಿಳಿದಿರಬೇಕು.
    ಆಟೋಮೊಬೈಲ್ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.


    ಹುದ್ದೆಯ ಜವಾಬ್ದಾರಿ (Job Roles and Responsibility)
    ಸಂಸ್ಥೆಯ ಉತ್ಪನ್ನ ಕೊಡುಗೆಗಳ ಸಂಪೂರ್ಣ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಿ ಮತ್ತು ವಿತರಕರನ್ನು ವಿವರಿಸಬೇಕು
    ಆಗ್ಗಿಂದಾಗೆ ವಿತರಕರ ತಂಡ ಭೇಟಿ ಮಾಡಿ, ಅವರಿಗೆ ತರಬೇತಿ ನೀಡಬೇಕು.
    ಡೀಲರ್​ ಮತ್ತು ಡಿಎಂಎಸ್​ ಕಂಪನಿ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು.


    ಇದನ್ನು ಓದಿ: ಬೌನ್ಸ್​ ಸಂಸ್ಥೆಯಲ್ಲಿದೆ ಉದ್ಯೋಗಾವಕಾಶ; ಇಲ್ಲಿದೆ ಸಂಪೂರ್ಣ ಮಾಹಿತಿ


    ಅರ್ಜಿ ಸಲ್ಲಿಕೆ ವಿಧಾನ (How To Apply)


    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.


    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.

    Published by:Seema R
    First published: