• Home
  • »
  • News
  • »
  • jobs
  • »
  • BEML Recruitment 2022: ಡಿಪ್ಲೋಮಾ ಪಾಸಾಗಿದ್ರೆ 80 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಹಾಕಿ-ಬೆಂಗಳೂರಿನಲ್ಲಿ ಉದ್ಯೋಗ

BEML Recruitment 2022: ಡಿಪ್ಲೋಮಾ ಪಾಸಾಗಿದ್ರೆ 80 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಹಾಕಿ-ಬೆಂಗಳೂರಿನಲ್ಲಿ ಉದ್ಯೋಗ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಭಾರತ್ ಅರ್ಥ್ ಮೂವರ್ಸ್​​ ಲಿಮಿಟೆಡ್​​ನಲ್ಲಿ ಉದ್ಯೋಗ(Job) ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ಆಸಕ್ತರು ನವೆಂಬರ್ 21, 2022ಕ್ಕೆ ಮುಂಚೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

  • News18 Kannada
  • Last Updated :
  • Bangalore [Bangalore], India
  • Share this:

    BEML Recruitment 2022: ಭಾರತ್ ಅರ್ಥ್ ಮೂವರ್ಸ್​ ಲಿಮಿಟೆಡ್​​(Bharat Earth Movers Limited)ನಲ್ಲಿ 80 ಗ್ರಾಜುಯೇಟ್ & ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಬಿಇಎಂಎಲ್​ನ(BEML) ಅಧಿಕೃತ ನೋಟಿಫಿಕೇಶನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾರತ್ ಅರ್ಥ್ ಮೂವರ್ಸ್​​ ಲಿಮಿಟೆಡ್​​ನಲ್ಲಿ ಉದ್ಯೋಗ(Job) ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ಆಸಕ್ತರು ನವೆಂಬರ್ 21, 2022ಕ್ಕೆ ಮುಂಚೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತ್ ಅರ್ಥ್ ಮೂವರ್ಸ್​ ಲಿಮಿಟೆಡ್
    ಹುದ್ದೆಯ ಹೆಸರುಗ್ರಾಜುಯೇಟ್ & ಟೆಕ್ನಿಷಿಯನ್ ಅಪ್ರೆಂಟಿಸ್
    ಒಟ್ಟು ಹುದ್ದೆ80
    ವಿದ್ಯಾರ್ಹತೆಡಿಪ್ಲೋಮಾ/ ಪದವಿ
    ವೇತನನಿಯಮಾನುಸಾರ
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ04/11/2022
    ಅರ್ಜಿ ಸಲ್ಲಿಸಲು ಕೊನೆ ದಿನ21/11/2022


    ಹುದ್ದೆಯ ಮಾಹಿತಿ:
    ಆಟೋಮೊಬೈಲ್​ ಎಂಜಿನಿಯರಿಂಗ್- 5
    ಸಿವಿಲ್ ಎಂಜಿನಿಯರಿಂಗ್- 5
    ಕಂಪ್ಯೂಟರ್ ಸೈನ್ಸ್​ & ಎಂಜಿನಿಯರಿಂಗ್-5
    ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್-10
    ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಷನ್ ಎಂಜಿನಿಯರಿಂಗ್-5
    ಮೆಕ್ಯಾನಿಕಲ್ ಎಂಜಿನಿಯರಿಂಗ್-50
    ಒಟ್ಟು 80 ಹುದ್ದೆಗಳು


    ಇದನ್ನೂ ಓದಿ: KHPT Recruitment 2022: ಪದವೀಧರರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ-ಈಗಲೇ ಅಪ್ಲೈ ಮಾಡಿ


    ಶೈಕ್ಷಣಿಕ ಅರ್ಹತೆ:
    ಭಾರತ್ ಅರ್ಥ್ ಮೂವರ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಗ್ರಾಜುಯೇಟ್ & ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಡಿಪ್ಲೋಮಾ/ ಪದವಿ ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಭಾರತ್ ಅರ್ಥ್ ಮೂವರ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಗ್ರಾಜುಯೇಟ್ & ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು BEML ನಿಯಮಾನುಸಾರ ಇರಬೇಕು.


    ವಯೋಮಿತಿ ಸಡಿಲಿಕೆ:
    ಭಾರತ್ ಅರ್ಥ್ ಮೂವರ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಗ್ರಾಜುಯೇಟ್ & ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ BEML ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್​ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


    ಎಜಿಎಂ (ಟ್ರೇನಿಂಗ್)
    BEML ಲಿಮಿಟೆಡ್
    ಬೆಂಗಳೂರು ಕಾಂಪ್ಲೆಕ್ಸ್​
    ಹೊಸ ತಿಪ್ಪಸಂದ್ರ ಪೋಸ್ಟ್​
    ಬೆಂಗಳೂರು- 560075


    ಇದನ್ನೂ ಓದಿ: NIMHANS Recruitment 2022: ಬೆಂಗಳೂರಿನಲ್ಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆ ಖಾಲಿ ಇದೆ, ತಿಂಗಳಿಗೆ ₹ 18,000 ಸಂಬಳ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/11/2022
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 21/11/2022

    Published by:Latha CG
    First published: