BIMS Recruitment: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಡೇಟಾ ಎಂಟ್ರಿ ಆಪರೇಟರ್​ ಸೇರಿದಂತೆ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ತಾತ್ಕಲಿಕ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಯಲಿದೆ. ಈ ಹುದ್ದೆ ನೇಮಕಾತಿ ಪ್ರಕ್ರಿಯೆ ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಕೆಳಗಿನಂತಿದೆ. 

 ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗೆ ಅರ್ಜಿ ಹಾಕಿ

  • Share this:
    ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (Belagavi Institute of Medical Sciences) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಲ್ಯಾಬೋರೇಟರಿ ಟೆಕ್ನಿಷಿಯನ್​, ಡೇಟಾ ಎಂಟ್ರಿ ಆಪರೇಟರ್, ರಿಸರ್ಚ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿಯನ್ನು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 27 ಆಗಿದೆ.

    ತಾತ್ಕಲಿಕ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಯಲಿದೆ. ಈ ಹುದ್ದೆ ನೇಮಕಾತಿ ಪ್ರಕ್ರಿಯೆ ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಕೆಳಗಿನಂತಿದೆ.

    ಸಂಸ್ಥೆಯ ಹೆಸರು: ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (BIMS ಬೆಳಗಾವಿ)
    ಹುದ್ದೆಗಳ ಸಂಖ್ಯೆ: 10
    ಉದ್ಯೋಗ ಸ್ಥಳ: ಬೆಳಗಾವಿ
    ಹುದ್ದೆಯ ಹೆಸರು: ಪ್ರಯೋಗಾಲಯ ತಂತ್ರಜ್ಞ, ಡೇಟಾ ಎಂಟ್ರಿ ಆಪರೇಟರ್, ಸಂಶೋಧನಾ ಸಹಾಯಕ
    ಸಂಬಳ: 14000-60000 ರೂ ಪ್ರತಿ ತಿಂಗಳು







































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
    ಸಂಶೋಧನಾ ಸಹಾಯಕ1ವೈದ್ಯಕೀಯ ಮೈಕ್ರೋಬಯಾಲಜಿಯಲ್ಲಿ ಎಂಎಸ್ಸಿ40000 ರೂ ಮಾಸಿಕ
    ಪ್ರಯೋಗಾಲಯ ತಂತ್ರಜ್ಞ:5ಬಿಎಸ್ಸಿ, ಎಂಎಲ್​ಟಿ, ಡಿಎಂಎಲ್​ಟಿ20000 ರೂ ಮಾಸಿಕ
    ಡೇಟಾ ಎಂಟ್ರಿ ಆಪರೇಟರ್2ಪಿಯುಸಿ14000 ರೂ ಮಾಸಿಕ
    ಅಪಘಾತ ವೈದ್ಯಕೀಯ ಅಧಿಕಾರಿ:1ಎಂಬಿಬಿಎಸ್​​, ಮೆಡಿಸಿನ್/ಸರ್ಜರಿ/ಆರ್ಥೋ-ಪೀಡಿಯಾಟ್ರಿಕ್ಸ್/ಒಬಿಸಿ/ಎಮರ್ಜೆನ್ಸಿ ಮೆಡಿಸಿನ್‌ನಲ್ಲಿ ಸ್ನಾತಕೋತ್ತರ ಪದವಿ60000 ರೂ ಮಾಸಿಕ
    ಬಯೋಮೆಡಿಕಲ್ ಇಂಜಿನಿಯರ್1ಬಯೋಮೆಡಿಕಲ್ ಇಂಜಿನಿಯರ್.30000 ರೂ ಮಾಸಿಕ

    ವಯೋಮಿತಿ ; ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿಯಮಗಳ ಪ್ರಕಾರ ಅಭ್ಯರ್ಥಿಯು 45 ವರ್ಷಗಳನ್ನು ಮೀರಿರಬಾರದು.

    ಇದನ್ನು ಓದಿ: ವಾಣಿಜ್ಯ ಸಚಿವಾಲಯದಲ್ಲಿ 65 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

    ವಯಸ್ಸಿನ ಸಡಿಲಿಕೆ:
    ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿಯಮಗಳ ಪ್ರಕಾರ

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಅರ್ಜಿ ಸಲ್ಲಿಕೆ: ಆಫ್ಲೈನ್​ ಮುಖಾಂತರ

    ಪ್ರಮುಖ ದಿನಾಂಕ
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಜೂನ್ 2022
    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ವೆಬ್‌ಸೈಟ್: bimsbelgaum.karnataka.gov.in

    ಇದನ್ನು ಓದಿ: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ ಟೈಪಿಸ್ಟ್​, ಜವಾನ ಹುದ್ದೆಗೆ ಅರ್ಜಿ ಆಹ್ವಾನ

    ಅರ್ಜಿ ಸಲ್ಲಿಕೆ ವಿಧಾನ:

    -ನೇಮಕಾತಿ ಅಧಿಸೂಚನೆ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    -ನಿಗದಿತ ಅರ್ಜಿ ನಮೂನೆಯಲ್ಲಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

    -ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ ಈ ​ ವಿಳಾಸಕ್ಕೆ ಕಳುಹಿಸಬೇಕು.

    ಸಹಾಯಕ ಆಡಳಿತಾಧಿಕಾರಿ, ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಳಗಾವಿ - 590001
    Published by:Seema R
    First published: