• ಹೋಂ
  • »
  • ನ್ಯೂಸ್
  • »
  • Jobs
  • »
  • BEL Recruitment: ಪ್ರಾಜೆಕ್ಟ್​ ಇಂಜಿಯರ್​, ಟ್ರೈನಿ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

BEL Recruitment: ಪ್ರಾಜೆಕ್ಟ್​ ಇಂಜಿಯರ್​, ಟ್ರೈನಿ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

 ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗೆ ಅರ್ಜಿ ಹಾಕಿ

ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

  • Share this:

    ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharat Electronics Limited- BEL)ನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಾಜೆಕ್ಟ್​ ಇಂಜಿಯರ್​, ಟ್ರೈನಿ ಇಂಜಿನಿಯರ್ ಸೇರಿದಂತೆ ಒಟ್ಟು 55 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನ ಜೂನ್​ 1 ಆಗಿದೆ.


    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.


    ಸಂಸ್ಥೆ: ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್
    ಒಟ್ಟು ಹುದ್ದೆ: 55
    ಹುದ್ದೆಗಳು: ಪ್ರಾಜೆಕ್ಟ್​ ಇಂಜಿಯರ್​, ಟ್ರೈನಿ ಇಂಜಿನಿಯರ್
    ವೇತನ: 30,000 – 55,000 ರೂ ಮಾಸಿಕ

    ಹುದ್ದೆಗಳುಹುದ್ದೆ ಸಂಖ್ಯೆಅನುಭವವಯೋಮಿತಿ
    ಪ್ರಾಜೆಕ್ಟ್ ಇಂಜಿನಿಯರ್172 ವರ್ಷಗರಿಷ್ಠ 32
    ಟ್ರೈನಿ ಇಂಜಿನಿಯರ್381 ವರ್ಷಗರಿಷ್ಠ 28

    ವಿದ್ಯಾರ್ಹತೆ
    ಟ್ರೈನಿ ಇಂಜಿನಿಯರ್​: ಎಲೆಕ್ಟ್ರಾನಿಕ್ಸ್ - ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ/ ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ/ ದೂರಸಂಪರ್ಕ/ ಸಂವಹನ, ಮೆಕ್ಯಾನಿಕಲ್​, ಸಿವಿಲ್​ನಲ್ಲಿ ಬಿಇ ಪದವಿ


    ಪ್ರಾಜೆಕ್ಟ್ ಇಂಜಿನಿಯರ್​/ ಆಫೀಸರ್​ ಹುದ್ದೆಗೆ: ಬಿಇ ಪದವಿ ಜೊತೆ 2 ವರ್ಷಗಳ ಎಂಬಿಎ, ಎಂಎಸ್​ಡಬ್ಲ್ಯೂ, ಪಿಜಿಎಚ್​ಆರ್​​ಎಂ (ಎಚ್​​.ಆರ್​ನಲ್ಲಿ)


    ವಯೋಮಿತಿ ಸಡಿಲಿಕೆ
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳವರೆಗೆ
    ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ.


    ಅರ್ಜಿ ಶುಲ್ಕ:
    ಪ್ರಾಜೆಕ್ಟ್ ಇಂಜಿನಿಯರ್ – ರೂ. 472ರೂ
    ಟ್ರೈನಿ ಇಂಜಿನಿಯರ್ – ರೂ. 177 ರೂ
    ವಿಕಲಚೇತನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ


    ಇದನ್ನು ಓದಿ: ಎಸ್​ಎಸ್​ಎಲ್​ಸಿ, ಪಿಯುಸಿ ಆದವರಿಗೆ ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ ಅವಕಾಶ


    ಆಯ್ಕೆ ವಿಧಾನ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ


    ಪ್ರಮುಖ ದಿನಾಂಕ
    ಅರ್ಜಿ ಸಲ್ಲಿಕೆ ಪ್ರಾರಂಭ: ಮೇ 17, 2022
    ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ: ಜೂನ್​ 1, 2022


    ಪ್ರಮುಖ ಲಿಂಕ್​ಗಳು
    ಅಧಿಕೃತ ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ
    ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ಸೈಟ್​​ : https://bel-india.in/Default.aspx


    ಇದನ್ನು ಓದಿ: ಡಿಪ್ಲೋಮಾ, ಬಿಎಸ್ಸಿ ಪದವೀಧರರಿಗೆ ಸುವರ್ಣಾವಕಾಶ; ಬೆಂಗಳೂರಿನ ಐಐಐಟಿಯಲ್ಲಿ ಅರ್ಜಿ ಆಹ್ವಾನ


    ಅರ್ಜಿ ಸಲ್ಲಿಕೆ ವಿಧಾನ
    ಮೇಲಿನ ಲಿಂಕ್​ ಅಥವಾ ಅಧಿಕೃತ ವೆಬ್​ತಾಣಕ್ಕೆ ಭೇಟಿ ನೀಡಿ ಅಧಿಸೂಚನೆಯನ್ನು ಒಮ್ಮೆ ಪರಿಶೀಲಿಸಿ.
    - ಅಭ್ಯರ್ಥಿಗಳು ಎಲ್ಲಾ ಅಗತ್ಯ ಮಾನದಂಡಗಳನ್ನು ಪೂರೈಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ
    ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
    -ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
    ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸುವ ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಸೆರೆ ಹಿಡಿದುಕೊಳ್ಳಿ

    Published by:Seema R
    First published: