• Home
  • »
  • News
  • »
  • jobs
  • »
  • JOB ALERT: ನೀವು ಬಿಇ, ಬಿ ಟೆಕ್ ಮಾಡಿದ್ದೀರಾ? ಇಲ್ಲಿದೆ ಉದ್ಯೋಗಾವಕಾಶ- ತಿಂಗಳಿಗೆ 55 ಸಾವಿರ ಸಂಬಳ

JOB ALERT: ನೀವು ಬಿಇ, ಬಿ ಟೆಕ್ ಮಾಡಿದ್ದೀರಾ? ಇಲ್ಲಿದೆ ಉದ್ಯೋಗಾವಕಾಶ- ತಿಂಗಳಿಗೆ 55 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಪ್ರಾಜೆಕ್ಟ್​ ಎಂಜಿನಿಯರ್-1 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನವೆಂಬರ್ 1, 2022ಕ್ಕೆ ಗರಿಷ್ಠ 32 ವರ್ಷ ಮೀರಿರಬಾರದು.

  • Share this:

    BEL Recruitment 2022: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharat Electronics Limited -BEL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿಇಎಲ್​ನಲ್ಲಿ(BEL) ಒಟ್ಟು 5 ಪ್ರಾಜೆಕ್ಟ್​ ಎಂಜಿನಿಯರ್-1 (Project Engineer) ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಬಿಇ/ಬಿ.ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ಬಿಇಎಲ್(BEL)​ನ ಅಧಿಕೃತ ವೆಬ್​ಸೈಟ್​ bel-india.inಗೆ ಭೇಟಿ ನೀಡಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್
    ಹುದ್ದೆಯ ಹೆಸರುಪ್ರಾಜೆಕ್ಟ್​ ಎಂಜಿನಿಯರ್-1
    ಒಟ್ಟು ಹುದ್ದೆ5
    ಸ್ಥಳಬೆಂಗಳೂರು, ಚೆನ್ನೈ ಮುಂಬೈ, ಕೊಚ್ಚಿ
    ವಿದ್ಯಾರ್ಹತೆಬಿಇ, ಬಿ.ಟೆಕ್
    ವೇತನಮಾಸಿಕ ₹ 40,000-55,000
    ಅರ್ಜಿ ಸಲ್ಲಿಕೆ ಬಗೆಆಫ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ09/11/2022
    ಅರ್ಜಿ ಸಲ್ಲಿಸಲು ಕೊನೆ ದಿನ24/11/2022


    ವಿದ್ಯಾರ್ಹತೆ:
    ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಪ್ರಾಜೆಕ್ಟ್​ ಎಂಜಿನಿಯರ್-1 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ/ ಇನ್ಫರ್ಮೇಶನ್ ಟೆಕ್ನಾಲಜಿ/ಕಂಪ್ಯೂಟರ್ ಸೈನ್ಸ್‌ನಲ್ಲಿ  B.E ಅಥವಾ B.Tech ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: Railway Jobs: 10ನೇ ತರಗತಿ, ITI ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ-ಈಗಲೇ Apply ಮಾಡಿ


    ವಯೋಮಿತಿ:
    ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಪ್ರಾಜೆಕ್ಟ್​ ಎಂಜಿನಿಯರ್-1 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನವೆಂಬರ್ 1, 2022ಕ್ಕೆ ಗರಿಷ್ಠ 32 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು-3 ವರ್ಷ
    ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    PWD ಅಭ್ಯರ್ಥಿಗಳು- 10 ವರ್ಷ


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
    ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 400 ರೂ. ಅರ್ಜಿ ಶುಲ್ಕ
    ಪಾವತಿಸುವ ಬಗೆ: SBI ಕಲೆಕ್ಟ್​


    ಆಯ್ಕೆ ಪ್ರಕ್ರಿಯೆ:
    ಶೈಕ್ಷಣಿಕ ಅರ್ಹತೆ
    ಅನುಭವ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 24, 2022ಕ್ಕೆ ಮುನ್ನ ಕಳುಹಿಸಬೇಕು.


    ಸೀನಿಯರ್ ಡೆಪ್ಯುಟಿ ಜನರಲ್ ಮ್ಯಾನೇಜರ್(HR)
    ನಾವಲ್ ಸಿಸ್ಟಮ್ಸ್​ SBU
    ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್
    ಜಾಲಹಳ್ಳಿ ಪೋಸ್ಟ್​
    ಬೆಂಗಳೂರು-560013


    ಇದನ್ನೂ ಓದಿ: IOCL Recruitment 2022: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 24/11/2022

    Published by:Latha CG
    First published: