• Home
  • »
  • News
  • »
  • jobs
  • »
  • BEL Recruitment 2022: ಬಿಇ/ಬಿ.ಟೆಕ್ ಆಗಿದ್ರೆ BELನಲ್ಲಿದೆ ಕೆಲಸ, ತಿಂಗಳಿಗೆ ₹55,000 ಸಂಬಳ

BEL Recruitment 2022: ಬಿಇ/ಬಿ.ಟೆಕ್ ಆಗಿದ್ರೆ BELನಲ್ಲಿದೆ ಕೆಲಸ, ತಿಂಗಳಿಗೆ ₹55,000 ಸಂಬಳ

BEL

BEL

ಡಿಸೆಂಬರ್ 22, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೊಚ್ಚಿ, ಮುಂಬೈ, ಬೆಂಗಳೂರು, ವಿಶಾಖಪಟ್ಟಣಂನಲ್ಲಿ ಉದ್ಯೋಗ ನೀಡಲಾಗುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

    BEL Recruitment 2022: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharath Electronics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 41 ಪ್ರಾಜೆಕ್ಟ್​ ಎಂಜಿನಿಯರ್(Project Engineer), ಟ್ರೇನಿ ಎಂಜಿನಿಯರ್(Trainee Engineer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 22, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೊಚ್ಚಿ, ಮುಂಬೈ, ಬೆಂಗಳೂರು, ವಿಶಾಖಪಟ್ಟಣಂನಲ್ಲಿ ಉದ್ಯೋಗ ನೀಡಲಾಗುತ್ತದೆ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್
    ಹುದ್ದೆಪ್ರಾಜೆಕ್ಟ್​ ಎಂಜಿನಿಯರ್, ಟ್ರೇನಿ ಎಂಜಿನಿಯರ್
    ಒಟ್ಟು ಹುದ್ದೆ41
    ವೇತನಮಾಸಿಕ ₹ 30,000-55,000
    ವಿದ್ಯಾರ್ಹತೆಬಿಇ/ಬಿ.ಟೆಕ್


    ಹುದ್ದೆಯ ಮಾಹಿತಿ:
    ಪ್ರಾಜೆಕ್ಟ್​ ಎಂಜಿನಿಯರ್-I - 37 ಹುದ್ದೆಗಳು
    ಟ್ರೇನಿ ಎಂಜಿನಿಯರ್-I- 4 ಹುದ್ದೆಗಳು


    ವಿದ್ಯಾರ್ಹತೆ:
    ಪ್ರಾಜೆಕ್ಟ್​ ಎಂಜಿನಿಯರ್-I - ಕಂಪ್ಯೂಟರ್ ಸೈನ್ಸ್​/ಐಟಿ/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ ಟೆಲಿಕಮ್ಯುನಿಕೇಶನ್ಸ್/ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್​ನಲ್ಲಿ ಬಿಇ/ಬಿ.ಟೆಕ್, ಬಿಎಸ್ಸಿ
    ಟ್ರೇನಿ ಎಂಜಿನಿಯರ್-I- ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ ಟೆಲಿಕಮ್ಯುನಿಕೇಶನ್ಸ್​ನಲ್ಲಿ ಬಿಇ/ ಬಿ.ಟೆಕ್


    ವಯೋಮಿತಿ:
    ಪ್ರಾಜೆಕ್ಟ್​ ಎಂಜಿನಿಯರ್-I - 32 ವರ್ಷ
    ಟ್ರೇನಿ ಎಂಜಿನಿಯರ್-I- 28 ವರ್ಷ


    ವಯೋಮಿತಿ ಸಡಿಲಿಕೆ:
    ಒಬಿಸಿ(NLC) ಅಭ್ಯರ್ಥಿಗಳು- 3 ವರ್ಷ
    SC/ST ಅಭ್ಯರ್ಥಿಗಳು-5 ವರ್ಷ
    PWD ಅಭ್ಯರ್ಥಿಗಳು- 10 ವರ್ಷ


    ಇದನ್ನೂ ಓದಿ: Union Bank Recruitment 2022: ಯೂನಿಯನ್​ ಬ್ಯಾಂಕ್​ನಲ್ಲಿ 33 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ


    ಅರ್ಜಿ ಶುಲ್ಕ:
    SC/ST/PWD ಅಭ್ಯರ್ಥಿಗಳು- ಇಲ್ಲ
    ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗೆ 400 ರೂ.
    ಟ್ರೇನಿ ಎಂಜಿನಿಯರ್ ಹುದ್ದೆಗೆ 150 ರೂ.
    ಅರ್ಜಿ ಶುಲ್ಕ ಪಾವತಿಸುವ ಬಗೆ- ಆನ್​ಲೈನ್


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ವೇತನ:
    ಪ್ರಾಜೆಕ್ಟ್​ ಎಂಜಿನಿಯರ್- ಮಾಸಿಕ 40,000-55,000
    ಟ್ರೇನಿ ಎಂಜಿನಿಯರ್-ಮಾಸಿಕ ₹30,000-40,000


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


    ಸೀನಿಯರ್ ಡೆಪ್ಯುಟಿ ಜನರಲ್ ಮ್ಯಾನೇಜರ್(HR),
    ನಾವಲ್ ಸಿಸ್ಟಮ್ಸ್ SBU
    ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
    ಜಾಲಹಳ್ಳಿ ಪೋಸ್ಟ್
    ಬೆಂಗಳೂರು-560013


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/12/2022
    ಅರ್ಜಿ ಸಲ್ಲಿಸಲು ಕೊನೆಯ ದಿನ: 22/12/2022

    Published by:Latha CG
    First published: