BEL Recruitment 2021: 35,000 ರೂ ಸಂಬಳ, ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆ... ಅರ್ಜಿ ಹಾಕೋದು ಹೀಗೆ

ಬಿಇಎಲ್​ನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಅರ್ಹತೆಗೆ ಅನುಗುಣವಾಗಿ ಆನ್​​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಿಇಎಲ್​​ ನೋಟಿಫಿಕೇಶನ್​-2021 ಡೌನ್​ಲೋಡ್​​ ಮಾಡಿಕೊಳ್ಳಬಹುದು.

BEL

BEL

  • Share this:
    BEL Recruitment 2021: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ‘ಪ್ರಾಜೆಕ್ಟ್​ ಎಂಜಿನಿಯರ್​​‘ ಪೋಸ್ಟ್​​ಗೆ ನೇಮಕಾತಿ ನೋಟಿಫಿಕೇಶನ್​ನ್ನು ಬಿಡುಗಡೆ ಮಾಡಿದೆ. ಒಟ್ಟು 7 ಪೋಸ್ಟ್​​ಗಳು ಖಾಲಿ ಇವೆ. ಬಿಇಎಲ್​ನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಅರ್ಹತೆಗೆ ಅನುಗುಣವಾಗಿ ಆನ್​​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಿಇಎಲ್​​ ನೋಟಿಫಿಕೇಶನ್​-2021 ಡೌನ್​ಲೋಡ್​​ ಮಾಡಿಕೊಳ್ಳಬಹುದು.

    BEL Recruitment 2021: ಅರ್ಜಿ ಸಲ್ಲಿಸುವುದು ಹೇಗೆ?

    ಖಾಲಿ ಇರುವ ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗಳಿಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಸೆಪ್ಟೆಂಬರ್ 25ರ ಬೆಳಗ್ಗೆ 10 ಗಂಟೆಯಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 8, 2021. ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೂ ಮುನ್ನ ಅರ್ಜಿ ಸಲ್ಲಿಸಬೇಕು. ಆನ್​ಲೈನ್​ ಹೊರತುಪಡಿಸಿ ಬೇರೆ ಮಾರ್ಗದಲ್ಲಿ ಅರ್ಜಿ ಸಲ್ಲಿಸಿದರೆ ಅವುಗಳನ್ನು ಸ್ವೀಕರಿಸಲಾಗುವುದಿಲ್ಲ.

    BEL Notification 2021: ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿದೆ



























    ಬೋರ್ಡ್ ಹೆಸರು



    ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್

    ಹುದ್ದೆಯ ಹೆಸರು

    ಪ್ರಾಜೆಕ್ಟ್​ ಎಂಜಿನಿಯರ್

    ಒಟ್ಟು ಹುದ್ದೆಗಳು 07
    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ

    25/09/2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

    08/10/2021



    ಸ್ಟೇಟಸ್



    ನೋಟಿಫಿಕೇಶನ್ ರಿಲೀಸ್ ಆಗಿದೆ




    BEL Recruitment 2021: ಅರ್ಹತಾ ಮಾನದಂಡಗಳೇನು?

    ವಯೋಮಿತಿ:

    ಪ್ರಾಜೆಕ್ಟ್​ ಎಂಜಿನಿಯರ್​​​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಆಗಸ್ಟ್​ 1, 2021ಕ್ಕೆ 28 ವರ್ಷಗಳಾಗಿರಬೇಕು. ಇದು ಜನರಲ್ ಮತ್ತು ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ ಅನ್ವಯವಾಗುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್​​ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

    ಇದನ್ನೂ ಓದಿ:BEL Recruitment 2021: ತಿಂಗಳಿಗೆ 1.20 ಲಕ್ಷ ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನ; ಈ ವಿದ್ಯಾರ್ಹತೆ ಉಳ್ಳವರು ಅರ್ಜಿ ಹಾಕಿ

    ವಿದ್ಯಾರ್ಹತೆ:

    ಪ್ರಾಜೆಕ್ಟ್​ ಮ್ಯಾನೇಜರ್​ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟೆಕ್​​ (4 ವರ್ಷ) ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ/ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​​ & ಕಮ್ಯುನಿಕೇಶನ್/ ಇ&ಟಿ/ ಟೆಲಿಕಮ್ಯುನಿಕೇಷನ್​ ವಿಭಾಗದಲ್ಲಿ ಬಿಇ/ಬಿಟೆಕ್​ ಉತ್ತೀರ್ಣರಾಗಿರಬೇಕು. ಸಾಮಾನ್ಯ ವರ್ಗ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು​ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು, ಹಾಗೂ ಎಸ್​ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳು ಜಸ್ಟ್ ಪಾಸ್ ಆಗಿರಬೇಕು.

    ಅನುಭವ ಎಷ್ಟು ವರ್ಷ?

    ಅಭ್ಯರ್ಥಿಯು ಸಂಬಂಧಿತ ಇಂಡಸ್ಟ್ರಿ/ ಕಂಪನಿಯಲ್ಲಿ 2 ವರ್ಷ ಅನುಭವವನ್ನು ಹೊಂದಿರಬೇಕು. ಜೊತೆಗೆ ಕಣ್ಗಾವಲು /ಮಾಹಿತಿ ತಂತ್ರಜ್ಞಾನ/ ನೆಟ್​ವರ್ಕ್​​ ಪ್ರಾಜೆಕ್ಟ್​​ಗಳಲ್ಲಿ ಕನಿಷ್ಠ 6 ತಿಂಗಳು ಅನುಭವವನ್ನು ಹೊಂದಿರಬೇಕು.

    ಸಂಬಳ ಎಷ್ಟು?

    ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಮೊದಲ ವರ್ಷ ಪ್ರತೀ ತಿಂಗಳು 35,000 ರೂ. ಸಂಬಳ ಪಡೆಯುತ್ತಾರೆ. ಎರಡನೇ ವರ್ಷ 40,000 , 3ನೇ ವರ್ಷ 45,000 ಹಾಗೂ 4ನೇ ವರ್ಷಕ್ಕೆ 50 ಸಾವಿರ ಸಂಬಳ ನೀಡಲಾಗುತ್ತದೆ.

    ಆಯ್ಕೆ ಪ್ರಕ್ರಿಯೆ ಹೇಗೆ?

    ಶಾರ್ಟ್​ ಲಿಸ್ಟ್​ ಮಾಡಿಕೊಂಡ ಅಭ್ಯರ್ಥಿಗಳನ್ನು ಸಂದರ್ಶನ ಮಾಡಲಾಗುತ್ತದೆ. ಅಭ್ಯರ್ಥಿಗಳು ಕಾಲ್​ ಲೆಟರ್​ನ್ನು ಪ್ರಿಂಟ್ ತೆಗೆದುಕೊಂಡು ಅಲ್ಲಿ ಸೂಚಿಸಿರುವ ಸೂಚನೆಗಳನ್ನು ಪಾಲಿಸಬೇಕು.

    ಅರ್ಜಿ ಶುಲ್ಕ ಎಷ್ಟು?

    ಅರ್ಜಿ ಶುಲ್ಕವನ್ನು ಎಸ್​​ಬಿಐ ಬ್ಯಾಂಕ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. ಅಭ್ಯರ್ಥಿಗಳು ಶುಲ್ಕ ಪಾವತಿಸುವಾಗ ವಿವರವಾದ ಮಾಹಿತಿಯನ್ನು ಓದಬೇಕು ಹಾಗೂ ಪೇಮೆಂಟ್​ನ ಸ್ಕ್ರೀನ್​ಶಾಟ್ ತೆಗೆದುಕೊಳ್ಳಬೇಕು. ಪ್ರಾಜೆಕ್ಟ್​ ಎಂಜಿನಿಯರ್​ಗೆ ಅರ್ಜಿ ಸಲ್ಲಿಸಲು 500 ರೂಪಾಯಿ ಶುಲ್ಕ. ಪಿಡಬ್ಲ್ಯೂಡಿ, ಎಸ್​ಸಿ ಮತ್ತು ಎಸ್​ಟಿ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

    ಅರ್ಜಿ ಸಲ್ಲಿಸುವುದು ಹೇಗೆ?

    1. ಮೊದಲು ಬಿಇಎಲ್​ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.

    2. ಹೋಮ್​ ಪೇಜ್​ನಲ್ಲಿ Advertisements ಸೆಕ್ಷನ್​ನಲ್ಲಿ Recruitmentನ್ನು ಆಯ್ಕೆ ಮಾಡಿ.

    3. ಅಲ್ಲಿ Recruitment for the Post of Project Engineer -MILCOM SBU, Bengaluru Unit ಇದನ್ನು ಸೆಲೆಕ್ಟ್ ಮಾಡಿ.

    4.Apply Online ಮೇಲೆ ಕ್ಲಿಕ್ ಮಾಡಿ, ಅರ್ಜಿಯನ್ನು ತುಂಬಿರಿ.

    5. ಸರ್ಜಿ ಶುಲ್ಕ ಪಾವತಿಸಿ ಹಾಗೂ ಅಲ್ಲಿ ಕೇಳಿರುವ ಅಗತ್ಯ ದಾಖಲಾತಿಗಳನ್ನು ಒದಗಿಸಿ.

    6. ಬಳಿಕ ರಿಜಿಸ್ಟ್ರೇಶನ್ ಫಾರ್ಮ್​ನ್ನು ಪ್ರಿಂಟ್​ ತೆಗೆದುಕೊಳ್ಳಿ.
    Published by:Latha CG
    First published: