BEL Recruitment 2021: ಮಾಸಿಕ ವೇತನ ₹50 ಸಾವಿರ, ಬಿಇ/ಬಿ.ಟೆಕ್ ಫ್ರೆಶರ್ಸ್​​ ಅಭ್ಯರ್ಥಿಗಳಿಗೆ ಉದ್ಯೋಗ

ಒಟ್ಟು 88 ಹುದ್ದೆಗಳು ಖಾಲಿ ಇವೆ. ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವುದು ಹೇಗೆ?, ಅರ್ಹತಾ ಮಾನದಂಡ, ಅಂತಿಮ ವರ್ಷದ ಅರ್ಹತೆ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

BEL

BEL

  • Share this:
ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharat Electronics Limited -BEL) ಖಾಲಿ ಇರುವ ಟ್ರೈನಿ ಎಂಜಿನಿಯರ್(Trainee Engineer), ಪ್ರಾಜೆಕ್ಟ್​ ಎಂಜಿನಿಯರ್(Engineer)​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬಿಇಎಲ್(BEL)​ ಮುಖ್ಯವಾಗಿ ಫ್ರೆಶರ್ಸ್​​ಗೆ(Fresher's) ಮಣೆ ಹಾಕಿದ್ದು, ಭಾರತದಾದ್ಯಂತ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಹುಡುಕಾಟ ನಡೆಸುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬಿಇಎಲ್​ ಕಂಪನಿಯಲ್ಲಿ ಖಾಲಿ ಇರುವ ಟ್ರೈನಿ ಎಂಜಿನಿಯರ್ ಹಾಗೂ ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಟ್ಟು 88 ಹುದ್ದೆಗಳು ಖಾಲಿ ಇವೆ. ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವುದು ಹೇಗೆ?, ಅರ್ಹತಾ ಮಾನದಂಡ, ಅಂತಿಮ ವರ್ಷದ ಅರ್ಹತೆ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

BEL Recruitment 2021: ಹುದ್ದೆಯ ಮಾಹಿತಿ































ಹುದ್ದೆಯ ಹೆಸರು ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಟ್ರೈನಿ ಎಂಜಿನಿಯರ್
ವಿದ್ಯಾರ್ಹತೆ ಬಿ.ಇ/ಬಿ.ಟೆಕ್
ಒಟ್ಟು ಹುದ್ದೆಗಳು 88
ಅನುಭವ ಫ್ರೆಶರ್ಸ್​​
ಸಂಬಳ ₹25,000-50,000​
ಉದ್ಯೋಗದ ಸ್ಥಳ ಪಂಚ್ಕುಲ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27/10/2021



ಬಿಇಎಲ್​​ನಲ್ಲಿ​ ಖಾಲಿ ಇರುವ ಟ್ರೈನಿ ಎಂಜಿನಿಯರ್​ ಹುದ್ದೆಗಳಿಗೆ ಫ್ರೆಶರ್ಸ್​ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ 4 ವರ್ಷಗಳ ಪೂರ್ಣಾವಧಿ ಬಿ.ಇ/ಬಿ.ಟೆಕ್ ಕೋರ್ಸ್​ನ್ನು ಈ ಕೆಳಕಂಡ ವಿಷಯಗಳಲ್ಲಿ​ ಓದಿರಬೇಕು.

ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ & ಕಮ್ಯನಿಕೇಷನ್/ ಎಲೆಕ್ಟ್ರಾನಿಕ್ಸ್​​ & ಟೆಲಿ ಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್/ಕಮ್ಯುನಿಕೇಷನ್/ಮೆಕ್ಯಾನಿಕಲ್-ಈ ಕೋರ್ಸ್​​ಗಳಲ್ಲಿ ಬಿ.ಇ/ಬಿ.ಟೆಕ್ ಪದವಿ​ ಪಡೆದಿರಬೇಕು.

ಸಾಮಾನ್ಯ ವರ್ಗ, ಒಬಿಸಿ & ಇಡಬ್ಲ್ಯೂಎಸ್ ಅಭ್ಯರ್ಥಿಗಳು​​- ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

ಎಸ್​ಸಿ, ಎಸ್​ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳು ಜಸ್ಟ್ ಪಾಸಾಗಿರಬೇಕು.

ಅನುಭವ:

ಟ್ರೈನಿ ಎಂಜಿನಿಯರ್: ಫ್ರೆಶ್​ ಎಂಜಿನಿಯರಿಂಗ್ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಾಜೆಕ್ಟ್​ ಎಂಜಿನಿಯರ್: 2 ವರ್ಷಗಳ ಅನುಭವ ಇರಬೇಕು.



ಇದನ್ನೂ ಓದಿ:Create a Perfect Resume: ಬೇಗನೇ ಕೆಲಸ ಸಿಗಬೇಕು ಅಂದ್ರೆ ನಿಮ್ಮ ರೆಸ್ಯೂಮ್​ ಹೀಗಿರಲಿ..!

ವಯೋಮಿತಿ:

ಪ್ರಾಜೆಕ್ಟ್​ ಎಂಜಿನಿಯರ್: 28 ವರ್ಷ

ಟ್ರೈನಿ ಎಂಜಿನಿಯರ್: 25 ವರ್ಷ

ಒಟ್ಟು ಹುದ್ದೆಗಳು

ಪ್ರಾಜೆಕ್ಟ್​ ಎಂಜಿನಿಯರ್-33 ಹುದ್ದೆ

ಸಾಮಾನ್ಯ ವರ್ಗ-15
ಇಡಬ್ಲ್ಯೂಎಸ್​-3
ಒಬಿಸಿ-8
ಎಸ್​ಸಿ-5
ಎಸ್​ಟಿ-2

ಟ್ರೈನಿ ಎಂಜಿನಿಯರ್-55 ಹುದ್ದೆಗಳು

ಸಾಮಾನ್ಯ ವರ್ಗ-22
ಇಡಬ್ಲ್ಯೂಎಸ್​-06
ಒಬಿಸಿ-15
ಎಸ್​ಸಿ-8
ಎಸ್​ಟಿ-4

ಸಂಬಳ

ಪ್ರಾಜೆಕ್ಟ್​ ಎಂಜಿನಿಯರ್-₹ 35,000+ ವೈದ್ಯಕೀಯ ಸೇರಿ
ಟ್ರೈನಿ ಎಂಜಿನಿಯರ್-₹ 25,000+ವೈದ್ಯಕೀಯ ಸೇರಿ

ಈ ನೇಮಕಾತಿ ಗುತ್ತಿಗೆ ಆಧಾರಿತವಾಗಿರುತ್ತದೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
Published by:Latha CG
First published: