BEL Recruitment 2021: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(Bharat Electronics Limited)ನಲ್ಲಿ 80 ಡಿಪ್ಲೋಮಾ ಅಪ್ರೆಂಟಿಸ್(Diploma Apprentice) ಹುದ್ದೆಗಳು ಖಾಲಿ ಇದ್ದು, ಡಿಪ್ಲೋಮಾ(Diploma Holders) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 25ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ಬಿಇಎಲ್(BEL)ನ ಅಧಿಕೃತ ವೆಬ್ಸೈಟ್ bel-india.in ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ |
ಜಾಹೀರಾತು ಸಂಖ್ಯೆ |
12930/64/HRD/GAD/07 |
ಹುದ್ದೆಯ ಹೆಸರು |
ಡಿಪ್ಲೋಮಾ ಅಪ್ರೆಂಟಿಸ್ |
ಒಟ್ಟು ಹುದ್ದೆಗಳು |
80 |
ವಿದ್ಯಾರ್ಹತೆ |
ಡಿಪ್ಲೋಮಾ |
ಉದ್ಯೋಗದ ಸ್ಥಳ |
ಘಾಜಿಯಾಬಾದ್ |
ಸಂಬಳ |
ಮಾಸಿಕ ₹10,400 |
ಅರ್ಜಿ ಸಲ್ಲಿಸುವ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
25/10/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
15/11/2021 |
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/11/2021
ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ 3 ವರ್ಷಗಳ ಡಿಪ್ಲೋಮಾ ಕೋರ್ಸ್ನ್ನು ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ:Karnataka High Court Recruitment 2021: ತಿಂಗಳಿಗೆ ₹ 63,070 ಸಂಬಳ; 21 ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅಧಿಸೂಚನೆ ಪ್ರಕಟ
ಕೆಲಸದ ಸ್ಥಳ
ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗೆ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಉದ್ಯೋಗ ನೀಡಲಾಗುತ್ತದೆ.
ಸಂಬಳ
ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮಾಸಿಕ 10,400 ವೇತನ ನೀಡುತ್ತದೆ.
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಇದನ್ನೂ ಓದಿ: Southern Railway Recruitment 2021: ಪಿಯುಸಿ ಪಾಸಾದವರಿಗೆ ದಕ್ಷಿಣ ರೈಲ್ವೆಯಲ್ಲಿ ಉದ್ಯೋಗ; ಮಾಸಿಕ ವೇತನ ₹ 30,000
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ bel-india.in ಗೆ ಭೇಟಿ ನೀಡಬೇಕು.
- ಅಲ್ಲಿ ಕಾಣಸಿಗುವ “Recruitment/ Career/ Advertisement menu” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಖಾಲಿ ಇರುವ ಹುದ್ದೆಗಳ ನೋಟಿಫಿಕೇಶನ್ಗಾಗಿ ಸರ್ಚ್ ಮಾಡಿ, ಅದರ ಮೇಲೆ ಕ್ಲಿಕ್ ಮಾಡಿ.
- ಅಧಿಕೃತ ನೋಟಿಫಿಕೇಶನ್ನ ಲಿಂಕ್ನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನೋಟಿಫಿಕೇಶನ್ನಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಸರಿಯಾಗಿ ಓದಿ.
- ಕೆಳಗೆ ನೀಡಲಾಗಿರುವ Official Online Apply/ Registration ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
- ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಸರಿಯಾದ ಫಾರ್ಮ್ಯಾಟ್ ಹಾಗೂ ಸೈಜಿನಲ್ಲಿ ಅಪ್ಲೋಡ್ ಮಾಡಿ.
- ಕೊನೆಯಲ್ಲಿ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಸಬ್ಮಿಟ್ ಕೊಡಿ.
- ಬಳಿಕ ಸಂಸ್ಥೆ ಅರ್ಜಿ ಶುಲ್ಕ ಕೇಳಿದ್ದರೆ, ಪಾವತಿಸಿ.
- ಕೊನೆಯಲ್ಲಿ ಅರ್ಜಿಯನ್ನು ಸಬ್ಮಿಟ್ ಮಾಡಿ, ಒಂದು ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ