BEL Recruitment 2021: ಬಿಇಎಲ್ ನೇಮಕಾತಿ, ತಿಂಗಳಿಗೆ ₹50,000 ಸಂಬಳ, BE, B. Tech ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಟ್ಟು 88 ಹುದ್ದೆಗಳು ಖಾಲಿ ಇವೆ. ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವುದು ಹೇಗೆ?, ಅರ್ಹತಾ ಮಾನದಂಡ, ಅಂತಿಮ ವರ್ಷದ ಅರ್ಹತೆ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಬಿಇಎಲ್

ಬಿಇಎಲ್

  • Share this:
BEL Recruitment 2021: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharat Electronics Limited -BEL) ಖಾಲಿ ಇರುವ   ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿಇಎಲ್​ನಲ್ಲಿ ಒಟ್ಟು 88 ಟ್ರೈನಿ ಎಂಜಿನಿಯರ್(Trainee Engineer) ಹಾಗೂ ಪ್ರಾಜೆಕ್ಟ್​ ಎಂಜಿನಿಯರ್(Engineer)​ ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಬಿಇಎಲ್(BEL)​ ಮುಖ್ಯವಾಗಿ ಫ್ರೆಶರ್ಸ್​​ಗೆ(Fresher's) ಮಣೆ ಹಾಕಿದ್ದು, ಭಾರತದಾದ್ಯಂತ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಹುಡುಕಾಟ ನಡೆಸುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬಿಇಎಲ್​ ಕಂಪನಿಯಲ್ಲಿ ಖಾಲಿ ಇರುವ ಟ್ರೈನಿ ಎಂಜಿನಿಯರ್ ಹಾಗೂ ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಟ್ಟು 88 ಹುದ್ದೆಗಳು ಖಾಲಿ ಇವೆ. ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವುದು ಹೇಗೆ?, ಅರ್ಹತಾ ಮಾನದಂಡ, ಅಂತಿಮ ವರ್ಷದ ಅರ್ಹತೆ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.







































ಸಂಸ್ಥೆ ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್
ಹುದ್ದೆಯ ಹೆಸರು ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಟ್ರೈನಿ ಎಂಜಿನಿಯರ್
ಒಟ್ಟು ಹುದ್ದೆಗಳು 88
ವಿದ್ಯಾರ್ಹತೆ B.E, B. Tech
ಅನುಭವ ಫ್ರೆಶರ್ಸ್​
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್
ವೇತನ ಮಾಸಿಕ ₹ 25,000- ₹  50,000
ಉದ್ಯೋಗದ ಸ್ಥಳ  ಪಂಚ್ಕುಲ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27/10/2021



ಬಿಇಎಲ್​​ನಲ್ಲಿ​ ಖಾಲಿ ಇರುವ ಟ್ರೈನಿ ಎಂಜಿನಿಯರ್​ ಹುದ್ದೆಗಳಿಗೆ ಫ್ರೆಶರ್ಸ್​ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ:

  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ 4 ವರ್ಷಗಳ ಪೂರ್ಣಾವಧಿ ಬಿ.ಇ/ಬಿ.ಟೆಕ್ ಕೋರ್ಸ್​ನ್ನು ಈ ಕೆಳಕಂಡ ವಿಷಯಗಳಲ್ಲಿ​ ಓದಿರಬೇಕು.

  • ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ & ಕಮ್ಯನಿಕೇಷನ್/ ಎಲೆಕ್ಟ್ರಾನಿಕ್ಸ್​​ & ಟೆಲಿ ಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್/ಕಮ್ಯುನಿಕೇಷನ್/ಮೆಕ್ಯಾನಿಕಲ್-ಈ ಕೋರ್ಸ್​​ಗಳಲ್ಲಿ ಬಿ.ಇ/ಬಿ.ಟೆಕ್ ಪದವಿ​ ಪಡೆದಿರಬೇಕು.

  • ಸಾಮಾನ್ಯ ವರ್ಗ, ಒಬಿಸಿ & ಇಡಬ್ಲ್ಯೂಎಸ್ ಅಭ್ಯರ್ಥಿಗಳು​​- ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

  • ಎಸ್​ಸಿ, ಎಸ್​ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳು ಜಸ್ಟ್ ಪಾಸಾಗಿರಬೇಕು.


ಇದನ್ನೂ ಓದಿ:BMRCL Recruitment 2021: ತಿಂಗಳಿಗೆ ₹2,15,000 ಸಂಬಳ, ಬೆಂಗಳೂರು ಮೆಟ್ರೋದಲ್ಲಿ ಹಿರಿಯರಿಗೆ ಉದ್ಯೋಗ

ಅನುಭವ:

  • ಟ್ರೈನಿ ಎಂಜಿನಿಯರ್: ಫ್ರೆಶ್​ ಎಂಜಿನಿಯರಿಂಗ್ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

  • ಪ್ರಾಜೆಕ್ಟ್​ ಎಂಜಿನಿಯರ್: 2 ವರ್ಷಗಳ ಅನುಭವ ಇರಬೇಕು.




ವಯೋಮಿತಿ:

ಪ್ರಾಜೆಕ್ಟ್​ ಎಂಜಿನಿಯರ್: 28 ವರ್ಷ

ಟ್ರೈನಿ ಎಂಜಿನಿಯರ್: 25 ವರ್ಷ

ಒಟ್ಟು ಹುದ್ದೆಗಳು

ಪ್ರಾಜೆಕ್ಟ್​ ಎಂಜಿನಿಯರ್-33 ಹುದ್ದೆ
ಸಾಮಾನ್ಯ ವರ್ಗ-15, ಇಡಬ್ಲ್ಯೂಎಸ್​-3, ಒಬಿಸಿ-8, ಎಸ್​ಸಿ-5, ಎಸ್​ಟಿ-2

ಟ್ರೈನಿ ಎಂಜಿನಿಯರ್-55 ಹುದ್ದೆಗಳು
ಸಾಮಾನ್ಯ ವರ್ಗ-22, ಇಡಬ್ಲ್ಯೂಎಸ್​-06, ಒಬಿಸಿ-15, ಎಸ್​ಸಿ-8, ಎಸ್​ಟಿ-4

ಇದನ್ನೂ ಓದಿ:BMRCL Recruitment 2021: ನಿವೃತ್ತಿ ಆಗಿರೋ ಹಿರಿಯರಿಗೆ ಬೆಂಗಳೂರು ಮೆಟ್ರೋದಲ್ಲಿ ಕೆಲಸ, ಮಿನಿಮಮ್ 30,000 ಸಂಬಳ ಗ್ಯಾರಂಟಿ

ಸಂಬಳ

ಪ್ರಾಜೆಕ್ಟ್​ ಎಂಜಿನಿಯರ್-₹ 35,000+ ವೈದ್ಯಕೀಯ ಸೇರಿ

ಟ್ರೈನಿ ಎಂಜಿನಿಯರ್-₹ 25,000+ವೈದ್ಯಕೀಯ ಸೇರಿ

ಈ ನೇಮಕಾತಿ ಗುತ್ತಿಗೆ ಆಧಾರಿತವಾಗಿರುತ್ತದೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: