BEL Recruitment 2021: ತಿಂಗಳಿಗೆ 1.20 ಲಕ್ಷ ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನ; ಈ ವಿದ್ಯಾರ್ಹತೆ ಉಳ್ಳವರು ಅರ್ಜಿ ಹಾಕಿ

ಬೆಂಗಳೂರು ಯೂನಿಟ್​​ನಲ್ಲಿಯೂ ಹುದ್ದೆಗಳು ಖಾಲಿ ಇವೆ. ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ನ ಕಾರ್ಯತಂತ್ರದ ಸಂವಹನ ಮತ್ತು ಬೆಂಗಳೂರು ಘಟಕದ ಮಾನವ ರಹಿತ ಸಿಸ್ಟಮ್​ನ ಎಸ್​​ಬಿಯುಗಾಗಿ 3 ವರ್ಷಗಳ ಅವಧಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಬಿಇಎಲ್

ಬಿಇಎಲ್

  • Share this:
    BEL Recruitment 2021: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharat Electronics Limited) ಕಂಪನಿಯು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದ್ದು, ಅದಕ್ಕೂ ಮುನ್ನ ಆ ಕುರಿತ ವಿವರ ನೋಡಬೇಕಿದೆ. 11 ಸೀನಿಯರ್ ಅಸಿಸ್ಟೆಂಟ್​ ಎಂಜಿನಿಯರ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದಾಗಿದೆ. ಭಾರತೀಯ ರಕ್ಷಣಾ ಇಲಾಖೆಗಳಾದ ಸೇನೆ, ವಾಯು ಮತ್ತು ನೌಕಾಪಡೆಯಲ್ಲಿ ಸೇವೆ ಸಲ್ಲಿಸಿರುವ ಮಾಜಿ ಸೈನಿಕರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜೆಸಿಒ ಶ್ರೇಣಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ಇ-1 ಶ್ರೇಣಿಯಲ್ಲಿ ಆಯ್ಕೆಯಾದವರು ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​​​ನಲ್ಲಿ ಕಾರ್ಯನಿರ್ವಹಿಸಬಹುದು.

    ಬೆಂಗಳೂರು ಯೂನಿಟ್​​ನಲ್ಲಿಯೂ ಹುದ್ದೆಗಳು ಖಾಲಿ ಇವೆ. ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ನ ಕಾರ್ಯತಂತ್ರದ ಸಂವಹನ ಮತ್ತು ಬೆಂಗಳೂರು ಘಟಕದ ಮಾನವ ರಹಿತ ಸಿಸ್ಟಮ್​ನ ಎಸ್​​ಬಿಯುಗಾಗಿ 3 ವರ್ಷಗಳ ಅವಧಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರು, ಗುವಾಹಟಿ, ವಾಡ್ಸರ್, ಜೋಧಪುರ, ನವದೆಹಲಿ, ಚಂಡೀಗಢ, ಸಿಲಿಗುರಿ, ಲೇಹ್, ಜೋರ್ಹತ್ ಮತ್ತು ಇತರೆ ಈಶಾನ್ಯ ಭಾರತದ ನಗರಗಳಲ್ಲಿ ಪೋಸ್ಟಿಂಗ್ ಹಾಕಲಾಗುತ್ತದೆ.

    ಇದನ್ನೂ ಓದಿ:IBM Careers India: ಐಬಿಎಂ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ; 3.7 ಲಕ್ಷ ಪ್ಯಾಕೇಜ್, ಅರ್ಜಿ ಸಲ್ಲಿಸಲು ಹೀಗೆ ಮಾಡಿ

    ಈ ಹುದ್ದೆಗಳಿಗೆ ಯಾರ್ಯಾರು ಅರ್ಜಿ ಸಲ್ಲಿಸಬಹುದು?

    ಬಿಇಎಲ್ ಕಂಪನಿಯಲ್ಲಿ ಖಾಲಿ ಇರುವ 11 ಸೀನಿಯರ್ ಅಸಿಸ್ಟೆಂಟ್​ ಎಂಜಿನಿಯರ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಈ ಅರ್ಹತೆಗಳನ್ನು ಹೊಂದಿರಬೇಕು. ಎಲೆಕ್ಟ್ರಾನಿಕ್ಸ್​, ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಶನ್, ಟೆಲಿ ಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್​ & ಟಿಲಿಕಮ್ಯುನಿಕೇಶನ್ ಅಥವಾ ಕಮ್ಯುನಿಕೇಶನ್ ಡಿಸಿಪ್ಲಿನ್ ವಿಭಾಗದಲ್ಲಿ 3 ವರ್ಷಗಳ ಡಿಪ್ಲೋಮಾ ಪದವಿ ಪಡೆದಿರಬೇಕು. ಒಬಿಸಿ ಮತ್ತು ಜನರಲ್ ಕ್ಯಾಟಗರಿಯವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು ಪಾಸಾಗಿರಬೇಕು.

    BEL ನೇಮಕಾತಿ 2021: ಅರ್ಜಿ ಸಲ್ಲಿಸುವುದು ಹೇಗೆ?

    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮ್ಯಾನೇಜರ್(HR/SC&US), ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್, ಜಾಲಹಳ್ಳಿ, ಬೆಂಗಳೂರು-560013 ಈ ವಿಳಾಸಕ್ಕೆ ಸೆಪ್ಟೆಂಬರ್ 25ರ 2021 ರ ಮುಂಚೆ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಬೇಖು. ಅರ್ಜಿ ಶುಲ್ಕ 500 ರೂ.ಗಳನ್ನು ಪಾವತಿಸಬೇಕು. ಪಿಡಬ್ಲ್ಯೂಡಿ, ಎಸ್​ಸಿ ಮತ್ತು ಎಸ್​ಟಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

    ಸಂಬಳ ಎಷ್ಟು?

    ಸೀನಿಯರ್ ಅಸಿಸ್ಟೆಂಟ್​ ಎಂಜಿನಿಯರ್​ ಹುದ್ದೆಗೆ ಬಿಇಎಲ್​ ಉತ್ತಮ ಸಂಬಳ ನೀಡುತ್ತದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 1,20,000 ಸಂಬಳ ಸಿಗಲಿದೆ.

    ಅರ್ಜಿ ಸಲ್ಲಿಸಲು ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಾಗಿ ಕಂಪನಿ ಹೊರಡಿಸಿರುವ ನೇಮಕಾತಿ ವಿವರಗಳನ್ನು ಪರಿಶೀಲಿಸಿ. ವೆಬ್​ಸೈಟ್​ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ.

    ಇದನ್ನೂ ಓದಿ:Indian Navy SSC Recruitment 2021: ಅರ್ಜಿ ಆಹ್ವಾನಿಸಿದ ಭಾರತೀಯ ನೌಕಾಪಡೆ; ತಿಂಗಳಿಗೆ ಸಂಬಳ 1.10 ಲಕ್ಷ ರೂ

    ಆಯ್ಕೆಯಾದ ಅಭ್ಯರ್ಥಿಗೆ ಇರುವ ಜವಾಬ್ದಾರಿಗಳೇನು?

    • ಸ್ಯಾಟ್ಕಾಮ್ ವ್ಯವಸ್ಥೆ, ಬೇಸ್‌ಬ್ಯಾಂಡ್ ವ್ಯವಸ್ಥೆ, OFC ಮಾಧ್ಯಮ ಮತ್ತು ಕಣ್ಗಾವಲು ವ್ಯವಸ್ಥೆಗಳ ಸೇವಾ ಬೆಂಬಲ.

    • ಎಲ್ಲಾ ಸೇವಾ ಬೆಂಬಲ ಚಟುವಟಿಕೆಗಳಿಗೆ ಮಾರಾಟಗಾರರು, ಗ್ರಾಹಕರು ಮತ್ತು SBU ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸಿ ಮತ್ತು ದೋಷ ನಿರ್ವಹಣೆಯ ದಾಖಲೆಗಳ ನಿರ್ವಹಣೆಯನ್ನು ಸೈಟ್ನಲ್ಲಿ ವರದಿ ಮಾಡುವುದು.

    • ದೋಷಪೂರಿತ ಅಥವಾ ರಿಪೇರಿ ಮತ್ತು ಖರೀದಿಸಿದ ಸಲಕರಣೆ ಮಾರಾಟಗಾರ ಮತ್ತು ಸೈಟ್‌ಗಳ ಚಲನೆಗೆ ಲಾಜಿಸ್ಟಿಕ್ ಬೆಂಬಲ.

    • ಪೋಸ್ಟ್ ಮಾಡಿದ ಸೈಟ್‌ನಲ್ಲಿ ಸಿಎಎಮ್‌ಸಿ ನಿರ್ವಹಣೆಗೆ ಬೆಂಬಲ ನೀಡುವುದು

    • ಭಾರತದಾದ್ಯಂತ ಗ್ರಾಹಕ ತಾಣಗಳಲ್ಲಿ ಆನ್‌ಸೈಟ್ ನಿರ್ವಹಣೆ ಬೆಂಬಲದ ಅಗತ್ಯತೆ

    Published by:Latha CG
    First published: