BECIL Recruitment 2022: 500 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರು Apply ಮಾಡಿ

ಜನವರಿ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು

BECIL

BECIL

  • Share this:
BECIL Recruitment 2022: ಬ್ರಾಡ್​ಕಾಸ್ಟ್​ ಎಂಜಿನಿಯರಿಂಗ್​ ಕನ್ಸಲ್ಟೆಂಟ್ಸ್​ ಇಂಡಿಯಾ ಲಿಮಿಟೆಡ್(The Broadcast Engineering Consultants India Ltd)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 500 ವಿವಿಧ ತನಿಖಾಧಿಕಾರಿಗಳು, ಮೇಲ್ವಿಚಾರಕರ ಹುದ್ದೆಗಳು ಖಾಲಿ ಇದ್ದು, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು becil.com ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.































ಸಂಸ್ಥೆಬ್ರಾಡ್​ಕಾಸ್ಟ್​ ಎಂಜಿನಿಯರಿಂಗ್​ ಕನ್ಸಲ್ಟೆಂಟ್ಸ್​ ಇಂಡಿಯಾ ಲಿಮಿಟೆಡ್​​
ಹುದ್ದೆಯ ಹೆಸರುವಿವಿಧ ತನಿಖಾಧಿಕಾರಿಗಳು, ಮೇಲ್ವಿಚಾರಕರ ಹುದ್ದೆಗಳು
ಒಟ್ಟು ಹುದ್ದೆಗಳು500
ವಿದ್ಯಾರ್ಹತೆಪದವಿ
ವೇತನನಿಯಮಾನುಸಾರ
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ25/01/2022

ಹುದ್ದೆಯ ಮಾಹಿತಿ:
ತನಿಖಾಧಿಕಾರಿಗಳು- 350 ಹುದ್ದೆ
ಮೇಲ್ವಿಚಾರಕರು- 150 ಹುದ್ದೆ

ಇದನ್ನೂ ಓದಿ:KPTCL Recruitment 2022: 1492 ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹ 73,000 ಸಂಬಳ, ಈಗಲೇ Apply ಮಾಡಿ

ವಿದ್ಯಾರ್ಹತೆ:
ಬ್ರಾಡ್​ಕಾಸ್ಟ್​ ಎಂಜಿನಿಯರಿಂಗ್​ ಕನ್ಸಲ್ಟೆಂಟ್ಸ್​ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ವಿವಿಧ ತನಿಖಾಧಿಕಾರಿಗಳು, ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ವಯೋಮಿತಿ:
ಬ್ರಾಡ್​ಕಾಸ್ಟ್​ ಎಂಜಿನಿಯರಿಂಗ್​ ಕನ್ಸಲ್ಟೆಂಟ್ಸ್​ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ವಿವಿಧ ತನಿಖಾಧಿಕಾರಿಗಳು, ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 50 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
ಅರ್ಜಿ ಶುಲ್ಕವು ಸಾಮಾನ್ಯ, OBC, ಮತ್ತು ಮಾಜಿ ಸೈನಿಕ ವರ್ಗಕ್ಕೆ ₹500SC/ST/EWS/PH ವರ್ಗಕ್ಕೆ ₹350 ಆಗಿರುತ್ತದೆ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆಯು ಸಂದರ್ಶನಗಳನ್ನು ಒಳಗೊಂಡಿರುತ್ತದೆ. ಸ್ಕ್ರೀನಿಂಗ್ ಮತ್ತು ಅಂತಿಮ ಆಯ್ಕೆಗಾಗಿ ಸಂದರ್ಶನಗಳನ್ನು ನಡೆಸಲಾಗುತ್ತದೆ. ಆದಾಗ್ಯೂ, ಲಿಖಿತ ಪರೀಕ್ಷೆಯನ್ನು ನಡೆಸಬೇಕೆಂದು ಭಾವಿಸಿದರೆ ಅದನ್ನು ಅರ್ಜಿದಾರರಿಗೆ ತಿಳಿಸಲಾಗುತ್ತದೆ. ಲಿಖಿತ ಪರೀಕ್ಷೆಯನ್ನು ನಡೆಸಿದರೆ ಅದು ಆನ್‌ಲೈನ್ ಅಥವಾ ಆಫ್‌ಲೈನ್ ಆಗಿರಬಹುದು.
Published by:Latha CG
First published: