ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ನಲ್ಲಿ (Broadcast Engineering Consultants India Limited) 36 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಟಾಫ್ ನರ್ಸ್, ವಾರ್ಡ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ಅಖಿಲ ಭಾರತೀಯ ಆಯುರ್ವೇದ ಸಂಸ್ಥೆಯಲ್ಲಿ ಕಾರ್ಯ ನಿರ್ವಹಣೆಗೆ ಈ ಹುದ್ದೆ ಭರ್ತಿ ಮಾಡಲಾಗುವುದು. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 10 ಆಗಿದೆ.
ಈ ಹುದ್ದೆಗಳನ್ನು ಆರು ತಿಂಗಳ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಲಾಗುವುದು. ಈ ಹುದ್ದೆ ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಇನ್ನಿತರ ವಿವರಗಳಿ ಈ ಕೆಳಗಿನಂತಿದೆ
ಸಂಸ್ಥೆಯ ಹೆಸರು: ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL)
ಹುದ್ದೆಯ ಹೆಸರು: ಸ್ಟಾಫ್ ನರ್ಸ್, ವಾರ್ಡ್ ಅಟೆಂಡೆಂಟ್
ಹುದ್ದೆಗಳ ಸಂಖ್ಯೆ: 36
ಉದ್ಯೋಗ ಸ್ಥಳ: ನವದೆಹಲಿ
ವೇತನ: 20000-50000 ರೂ ಪ್ರತಿ ತಿಂಗಳು
ಹುದ್ದೆ |
ಹುದ್ದೆ ಸಂಖ್ಯೆ |
ವಿದ್ಯಾರ್ಹತೆ |
ವಯೋಮಿತಿ |
ವೇತನ |
ತಾಂತ್ರಿಕ ಅಧಿಕಾರಿ |
1 |
ಆಯುರ್ವೇದದಲ್ಲಿ ಎಂಡಿ ಪದವಿ |
35 |
50 ಸಾವಿರ ರೂ ಮಾಸಿಕ |
ಸ್ಟಾಫ್ ನರ್ಸ್ |
20 |
ಡಿಪ್ಲೊಮಾ, ನರ್ಸಿಂಗ್ನಲ್ಲಿ ಬಿಎಸ್ಸಿ, ಎಂಎಸ್ಸಿ |
45 |
37.500 ರೂ ಮಾಸಿಕ |
ಮಿಡ್ ವೈಫ್ |
1 |
ಡಿಪ್ಲೊಮಾ, ನರ್ಸಿಂಗ್ನಲ್ಲಿ ಬಿಎಸ್ಸಿ, ಎಂಎಸ್ಸಿ |
45 |
37.500 ರೂ ಮಾಸಿಕ |
ಆಪರೇಷನ್ ಥಿಯೇಟರ್ ನರ್ಸ್ |
3 |
ಡಿಪ್ಲೊಮಾ, ನರ್ಸಿಂಗ್ನಲ್ಲಿ ಬಿಎಸ್ಸಿ, ಎಂಎಸ್ಸಿ |
45 |
37.500 ರೂ ಮಾಸಿಕ |
ದಂತ ನೈರ್ಮಲ್ಯ ತಜ್ಞರು |
1 |
ಜೀವಶಾಸ್ತ್ರದಲ್ಲಿ 12ನೇ ತರಗತಿ, ಡೆಂಟಲ್ ಹೈಜೀನ್ನಲ್ಲಿ ಡಿಪ್ಲೊಮಾ |
35 |
30 ಸಾವಿರ ರೂ ಮಾಸಿಕ |
ಆಡಿಯೋವಿಶುವಲ್ ಗ್ರಾಫಿಕ್ಸ್ |
|
12 ನೇ, ಎಲೆಕ್ಟ್ರಾನಿಕ್ ಮೆಕ್ಯಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ನಿರ್ವಹಣೆ, ಇನ್ಸ್ಟ್ರುಮೆಂಟ್ಸ್ ಮೆಕ್ಯಾನಿಕ್ಸ್ನಲ್ಲಿ ITI, ಡಿಪ್ಲೊಮಾ |
35 |
20 ಸಾವಿರ ಮಾಸಿಕ |
ವಾರ್ಡ್ ಅಡೆಂಡಂಟ್ |
9 |
8ನೇ ತರಗತಿ |
45 |
BECIL ನಿಯಮ ಅನುಸಾರ |
ವಯಸ್ಸಿನ ಸಡಿಲಿಕೆ:
ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ನಿಯಮಗಳ ಪ್ರಕಾರ
ಇದನ್ನು ಓದಿ: MSW ಪದವೀಧರರಿಗೆ ನಿಮ್ಹಾನ್ಸ್ನಲ್ಲಿದೆ ಉದ್ಯೋಗಾವಕಾಶ; ಬೇಗ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ:
ಪ.ಜಾ, ಪ.ಪಂ, ವಿಕಲಚೇತನ ಅಭ್ಯರ್ಥಿಗಳು: 450 ರೂ
ಸಾಮಾನ್ಯ/ಒಬಿಸಿ/ಮಹಿಳೆ/ಮಾಜಿ ಸೈನಿಕ ಅಭ್ಯರ್ಥಿಗಳು: 750 ರೂ
ಪಾವತಿ ವಿಧಾನ: ಆನ್ಲೈನ್
ಅರ್ಜಿ ಸಲ್ಲಿಕೆ: ಇಮೇಲ್ ಮುಖಾಂತರ
ಇಮೇಲ್ ವಿಳಾಸ:
hrsection@becil.com
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24 ಜೂನ್ 2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಜುಲೈ 2022
ಇದನ್ನು ಓದಿ: ಡಿಆರ್ಡಿಒನಲ್ಲಿ 630 ಹುದ್ದೆಗಳಿಗೆ ನೇಮಕಾತಿ; ಬಿಇ ಆಗಿದ್ರೆ ಅರ್ಜಿ ಸಲ್ಲಿಸಿ
ಅಧಿಸೂಚನೆ ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್:
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: becil.com
ಅರ್ಜಿ ಸಲ್ಲಿಕೆ ವಿಧಾನ
ನೇಮಕಾತಿ ಅಧಿಸೂಚನೆ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ವೆಬ್ಸೈಟ್ನಲ್ಲಿ ಲಭ್ಯವರಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಭರ್ತಿ ಮಾಡಿ ನಿಗದಿತ ದಿನಾಂಕದೊಳಗೆ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.
-ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ ಮೇಲ್ಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ