ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (Bruhat Bengaluru Mahanagara Palike) ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. 940 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವೈದ್ಯರು, ದಾದಿಯರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ ನಡೆಸಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 10 ಮತ್ತು 11 ರಂದು ನಡೆಯುವ ಈ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.
ಕೇಂದ್ರ ಸರ್ಕಾರದ 15ನೇ ಹಣಕಾಸು ಅಯೋಗದ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದ ಅನುಮೋದನೆಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುವ 'ನಮ್ಮ ಕ್ಲಿನಿಕ್'ಗಳಲ್ಲಿ ಕರ್ತವ್ಯ ನಿರ್ವಹಸಲು ಈ ಹುದ್ದೆಗಳ ನೇಮಕಾತಿ ನಡೆಸಲಾಗುವುದು. ಈ ಹುದ್ದೆಗಳನ್ನು ಒಂದು ವರ್ಷದ ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಲಾಗುವುದು. ಈ ಹುದ್ದೆ ವಿವರ, ಆಯ್ಕೆ ಪ್ರಕ್ರಿಯೆ, ನೇಮಕಾತಿ ಸೇರಿದಂತೆ ಇತರೆ ಮಾಹಿತಿ ಈ ಕೆಳಗಿನಂತಿದೆ.
ಸಂಸ್ಥೆಯ ಹೆಸರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
ಹುದ್ದೆಯ ಹೆಸರು: ವೈದ್ಯಕೀಯ ಅಧಿಕಾರಿ, ದಾದಿಯರು
ಹುದ್ದೆಗಳ ಸಂಖ್ಯೆ: 940
ಉದ್ಯೋಗ ಸ್ಥಳ: ಬೆಂಗಳೂರು
ವೇತನ: 10500-47250 ರೂ. ಪ್ರತಿ ತಿಂಗಳು
ಹುದ್ದೆ |
ಹುದ್ದೆ ಸಂಖ್ಯೆ |
ವಿದ್ಯಾರ್ಹತೆ |
ವೇತನ |
ವೈದ್ಯಕೀಯ ಅಧಿಕಾರಿ |
235 |
ಎಂಬಿಬಿಎಸ್ |
47,250 ರೂ ಮಾಸಿಕ |
ಮಹಿಳಾ ನರ್ಸ್/ದಾದಿಯರು |
235 |
ಬಿಎಸ್ಸಿ, ಡಿಪ್ಲೊಮಾ ಇನ್ ನರ್ಸಿಂಗ್ |
15,750 ರೂ ಮಾಸಿಕ |
ಪ್ರಯೋಗಾಲಯ ತಂತ್ರಜ್ಞರು |
235 |
ಡಿಪ್ಲೊಮಾ, ಬಿಎಂಎಲ್ಟಿ |
14, 609 ರೂ ಮಾಸಿಕ |
ಗ್ರೇಡ್ IV ಉದ್ಯೋಗಿಗಳು |
235 |
ಎಸ್ಎಸ್ಎಲ್ಸಿ |
10,500 ರೂ ಮಾಸಿಕ |
ವಯೋಮಿತಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
ಪ.ಜಾ, ಪ.ಪಂ, ಪ್ರವರ್ಗ-1 ಎ ಅಭ್ಯರ್ಥಿಗಳು: 05 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳು: 03 ವರ್ಷಗಳು
ಇದನ್ನು ಓದಿ: ಆಕ್ಸೆಂಚರ್ನಲ್ಲಿ ಭರ್ಜರಿ ನೇಮಕಾತಿ; ಬಿಇ, ಎಂಎಸ್ಸಿ ಆದವರಿಗೆ ಅವಕಾಶ
ಆಯ್ಕೆ ಪ್ರಕ್ರಿಯೆ
ನೇರ ಸಂದರ್ಶನ
ಅರ್ಜಿ ಶುಲ್ಕ: ವಿನಾಯಿತಿ ನೀಡಲಾಗಿದೆ
ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 03 ಆಗಸ್ಟ್ 2022
ವಾಕ್-ಇನ್ ಸಂದರ್ಶನದ ದಿನಾಂಕ: 10ನೇ ಮತ್ತು 11ನೇ ಆಗಸ್ಟ್ ಬೆಳಗ್ಗೆ 10. 30ರಿಂದ ಸಂಜೆ 4.30ರವರೆಗೆ
ಅಧಿಸೂಚನೆ ಪ್ರಮುಖ ಲಿಂಕ್ಗಳು
ಅಧಿಕೃತ ವೆಬ್ಸೈಟ್:
bbmp.gov.in
ಸಂದರ್ಶನ ನಡೆಯುವ ಸ್ಥಳ
ನೌಕರರ ಭವನ ಸಭಾಂಗಣ, ಬಿಬಿಎಂಪಿ, ಕೇಂದ್ರ ಕಚೇರಿ, ಎನ್ಆರ್ ಚೌಕ
ಇದನ್ನು ಓದಿ:
ರಾಮನ್ ಸಂಶೋಧನಾ ಸಂಸ್ಥೆಯಲ್ಲಿದೆ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆ; ಬಿಇ ಪದವಿ ಆಗಿದ್ರೆ ಸಾಕು
ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ
ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಬಿಬಿಎಂಪಿ ವೆಬ್ಸೈಟ್ನಲ್ಲಿ ಇರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿ ನಮೂನೆಯೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
-ಈ ವೇಳೆ ಎರಡು ಪಾಸಪೋರ್ಸ್ ಸೈಜ್ ಫೋಟೋ
-ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್ಎಸ್ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳನ್ನು ತರುವುದು ಅವಶ್ಯ.
ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಈ ದೂರವಾಣಿ ಸಂಖ್ಯೆ
080-22975516 ಅಥವಾ ಇಮೇಲ್ ಐಡಿ
choph515@gmail.com ಗೆ ಸಂಪರ್ಕಿಸಲು ಸೂಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ