• ಹೋಂ
  • »
  • ನ್ಯೂಸ್
  • »
  • Jobs
  • »
  • BBMP Recruitment: ಬಿಬಿಎಂಪಿಯಲ್ಲಿ ನೇಮಕಾತಿ; ಅರ್ಜಿ ಸಲ್ಲಿಕೆಗೆ ಜೂನ್​ 10 ಕಡೆಯ ದಿನ

BBMP Recruitment: ಬಿಬಿಎಂಪಿಯಲ್ಲಿ ನೇಮಕಾತಿ; ಅರ್ಜಿ ಸಲ್ಲಿಕೆಗೆ ಜೂನ್​ 10 ಕಡೆಯ ದಿನ

ಬಿಬಿಎಂಪಿ

ಬಿಬಿಎಂಪಿ

ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

  • Share this:

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (Bruhat Bengaluru Mahanagara Palike) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾನೂನು ಕೋಶದ ಮುಖ್ಯಸ್ಥರ (Head of the Legal Cell) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜೂನ್​ 10 ಕಡೆಯ ದಿನಾಂಕವಾಗಿದೆ.


ಕಾನೂನು ವಿಷಯದಲ್ಲಿ ಪರಿಣಿತಿ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಯೂ ಒಂದು ವರ್ಷದ ಅವಧಿ ಆಗಿರುತ್ತದೆ. ಅಭ್ಯರ್ಥಿಯ ಕಾರ್ಯಕ್ಷಮತೆಯನ್ನು ಆಧರಿಸಿ ಹುದ್ದೆಯನ್ನು 1ರಿಂದ 3 ವರ್ಷದವರೆಗೆ ವಿಸ್ತರಿಸಲಾಗುವುದು.


ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಸಂಸ್ಥೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
ಹುದ್ದೆಕಾನೂನು ಕೋಶದ ಮುಖ್ಯಸ್ಥ
ಹುದ್ದೆ ಸಂಖ್ಯೆನಿರ್ದಿಷ್ಟ ಪಡಿಸಿಲ್ಲ
ಉದ್ಯೋಗ ಸ್ಥಳಬೆಂಗಳೂರು
ವೇತನಬಿಬಿಎಂಪಿ ನಿಯಮ ಅನುಸಾರ

ವಿದ್ಯಾರ್ಹತೆ: ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಾನೂನು ಪದವಿ ಹೊಂದಿರಬೇಕು ಸೇವಾ ವಿಷಯಗಳಲ್ಲಿ, ಕಾರ್ಮಿಕರ ಕಾನೂನು, ಭೂ ಕಾನೂನು ಸೇರಿದಂತೆ ಇತರೆ ಕಾನೂನು ವಿಷಯಗಳಲ್ಲಿ ಪರಿಣಿಸಿತ ಹೊಂದಿರಬೇಕು.


ಅನುಭವ
ಅಭ್ಯರ್ಥಿಯು ರಾಜ್ಯದಲ್ಲಿ ಕನಿಷ್ಠ 10 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಮಾಡಿದ ಅನುಭವ ಹೊಂದಿರಬೇಕು.


ಇದನ್ನು ಓದಿ: ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ 33 ಹುದ್ದೆಗೆ ಅರ್ಜಿ ಆಹ್ವಾನ


ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಯು 67 ವರ್ಷ ವಯೋಮಿತಿಯನ್ನು ಮೀರಿರಬಾರದು.


ಅರ್ಜಿ ಸಲ್ಲಿಕೆ ವಿಧಾನ
ಆಫ್​ಲೈನ್​


ಆಯ್ಕೆ ವಿಧಾನ
ಸಂದರ್ಶನ ಮೂಲಕ


ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 26, 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್​ 10, 2022


ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ವೆಬ್‌ಸೈಟ್: bbmp.gov.in


ಅರ್ಜಿ ಸಲ್ಲಿಕೆ ಪ್ರಕ್ರಿಯೆ
ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


ಇದನ್ನು ಓದಿ: ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ 61 ಹುದ್ದೆಗಳಿಗೆ ನೇಮಕಾತಿ


-ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವದ ದಾಖಲಾತಿ ಅರ್ಜಿಯನ್ನು ಕೆಳಕಂಡ ವಿಳಾಸಕ್ಕೆ ಸಲ್ಲಿಸಬೇಕು.


-ಮಾನ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್.ಆರ್.ಚೌಕ್, ಬೆಂಗಳೂರು - 560002.


-ಈ ಅರ್ಜಿಗಳನ್ನು ಜೂನ್​ 10ರೊಳಗೆ ಅಂಚೆ, ಸ್ಪೀಡ್​ ಪೋಸ್ಟ್​ ಮೂಲಕ ಅಥವಾ ಖುದ್ದಾಗಿ ಮೇಲ್ಕಂಡ ವಿಳಾಸಕ್ಕೆ ಸಲ್ಲಿಸಬಹುದಾಗಿದೆ.

top videos
    First published: