Job Alert: ಮಂಗಳೂರು ಗ್ರಾ. ಪಂನಲ್ಲಿ 14 ಹುದ್ದೆಗೆ ನೇಮಕಾತಿ; ಮಾಸಿಕ 17000 ರೂ ವೇತನ

ಈ ಹುದ್ದೆಗೆ ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದಾರೆ

 ಗ್ರಾಮ ಪಂಚಾಯತ್

ಗ್ರಾಮ ಪಂಚಾಯತ್

  • Share this:
    ಮಹಾತ್ಮ ಗಾಂಧಿ ನರೇಗಾ (MNERGA) ಯೋಜನೆಯಡಿ ಮಂಗಳೂರು ಗ್ರಾಮ ಪಂಚಾಯತಿಯಲ್ಲಿ (Mangalore Grama Panchayat)  14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್​ಗಳಲ್ಲಿ ಕೆಲಸ ಮಾಡಲು ಬೇರ್​ ಫುಟ್​​​ ಟೆಕ್ನಿಷಿಯನ್ (Bare Foot Technician)​ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಸ್ಥಳೀಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಎಸ್​ಎಸ್​ಎಲ್​ಸಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಅರ್ಜಿಯನ್ನು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 15 ಆಗಿದೆ.

    ಈ ಹುದ್ದೆಗೆ ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದಾರೆ. ಅಭ್ಯರ್ಥಿಗಳು ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಹಿಂದಿನ 3 ಅಥವಾ 2 ವರ್ಷಗಳಲ್ಲಿ 25 ದಿನಗಳಿಗೆ ಕಡಿಮೆ ಇಲ್ಲದಷ್ಟ ಕೂಲಿಗಾರರಾಗಿ ಕೆಲಸ ಮಾಡಿರಬೇಕು.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಮಂಗಳೂರು ಗ್ರಾಮ ಪಂಚಾಯಿತಿ
    ಹುದ್ದೆಬೇರ್​ ಫುಟ್​​​ ಟೆಕ್ನಿಷಿಯನ್​
    ಹುದ್ದೆಗಳ ಸಂಖ್ಯೆ14
    ಕಾರ್ಯ ನಿರ್ವಹಣೆ ಸ್ಥಳಮಂಗಳೂರು
    ವೇತನ17000 ರೂ ಮಾಸಿಕ

    ವಿದ್ಯಾರ್ಹತೆ
    ಅಧಿಸೂಚನೆ ಪ್ರಕಾರ ಅಭ್ಯರ್ಥಿಯೂ 10ನೇ ತರಗತಿAdd Newಯನ್ನು ಪಾಸ್​ ಮಾಡಿರಬೇಕು.

    ವಯಸ್ಸಿನ ಮಿತಿ: ಅಧಿಸೂಚನೆ ಅನುಸಾರ ಅಭ್ಯರ್ಥಿಯು ಕನಿಷ್ಠ 18 ಮತ್ತು ಗರಿಷ್ಠ 45 ವರ್ಷ ಮೀರಿರಬಾರದು.

    ಇದನ್ನು ಓದಿ: ಕೆನರಾ ಬ್ಯಾಂಕ್​ನಲ್ಲಿದೆ ಉದ್ಯೋಗಾವಕಾಶ; ಬೆಂಗಳೂರಿನಲ್ಲಿ ಕೆಲಸ

    ವಿಶೇಷ ಸೂಚನೆ:

    ಈ ಹುದ್ದೆಗೆ ಎಲ್ಲಾ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಗಳಿಗೆ ಪ್ರಾಧ್ಯಾನ್ಯತೆ ಇರಲಿದೆ.

    ಅರ್ಜಿ ಸಲ್ಲಿಕೆ ವಿಧಾನ : ಆಫ್​ಲೈನ್ ಮುಖಾಂತರ​

    ಅರ್ಜಿ ಶುಲ್ಕ: ವಿನಾಯಿತಿ ನೀಡಲಾಗಿದೆ

    ಪ್ರಮುಖ ದಿನಾಂಕ:
    ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: ಜುಲೈ 4, 2022
    ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ, 2022

    ಇದನ್ನು ಓದಿ: ಪಿಯುಸಿ ಆದವರಿಗೆ ಇಂಡಿಯನ್​ ಆಯಿಲ್​ನಲ್ಲಿದೆ ಉದ್ಯೋಗ; ಮಾಸಿಕ 78000ದವರೆಗೆ ವೇತನ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ
    -ಈ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕೆಳಗಿನ ವಿಳಾಸಕ್ಕೆ ಖುದ್ದು ಹೋಗಿ ಅರ್ಜಿ ಸಲ್ಲಿಸಬೇಕು.
    -ಅರ್ಜಿ ಪಡೆಯ ಸ್ಥಳ: ಮಂಗಳೂರು ನಗರದ ಉರ್ವ ಸ್ಟೋರ್​ನಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿರುವ ಅಭಿವೃದ್ಧಿ ಶಾಖೆಯಲ್ಲಿ ಸಿಗುವ ನಿಗದಿತ ಅರ್ಜಿಯನ್ನು ಅಭ್ಯರ್ಥಿಗಳು ಭರ್ತಿ ಮಾಡಿ ಸಲ್ಲಿಸಬೇಕು.
    -ಅರ್ಜಿಯಲ್ಲಿ ಅಭ್ಯರ್ಥಿ ವಿವರ, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆಯನ್ನು ನಮೂದಿಸಬೇಕು.
    -ಅರ್ಜಿ ಭರ್ತಿ ವೇಳೆ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ ವಿವರವನ್ನು ನೀಡಬೇಕು.
    -ಜಾತಿ ಮೀಸಲಾತಿ ಪ್ರಮಾಣ ಪತ್ರವಿದ್ದಲ್ಲಿ ಆ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

    ಅಭ್ಯರ್ಥಿ ಈ ದಾಖಲೆ ಹೊಂದಿರುವುದು ಅವಶ್ಯ
    ಎಸ್​ಎಸ್​ಎಲ್​ಸಿ ಅಂಕಪಟ್ಟಿ
    ನರೇಗಾ ಜಾಬ್​ ಕಾರ್ಡ್​
    ಜಾತಿ ಪ್ರಮಾಣ ಪತ್ರ
    Published by:Seema R
    First published: