• Home
  • »
  • News
  • »
  • jobs
  • »
  • Banking Jobs: ಡಿಗ್ರಿ ಪಾಸಾಗಿದ್ರೆ SBIನಲ್ಲಿ ಬಂಪರ್ ಉದ್ಯೋಗ, ತಿಂಗಳಿಗೆ 63 ಸಾವಿರ ಸಂಬಳ

Banking Jobs: ಡಿಗ್ರಿ ಪಾಸಾಗಿದ್ರೆ SBIನಲ್ಲಿ ಬಂಪರ್ ಉದ್ಯೋಗ, ತಿಂಗಳಿಗೆ 63 ಸಾವಿರ ಸಂಬಳ

SBI

SBI

ಸರ್ಕಲ್ ಬೇಸ್ಡ್ ಆಫೀಸರ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 36,000-63,840 ರೂ. ವೇತನ ನೀಡಲಾಗುತ್ತದೆ.

  • News18 Kannada
  • Last Updated :
  • New Delhi, India
  • Share this:

    SBI Recruitment 2022: ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ(State Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1422 ಸರ್ಕಲ್ ಬೇಸ್ಡ್ ಆಫೀಸರ್(Circle Based Officer) ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 7, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಉದ್ಯೋಗಾಂಕ್ಷಿಗಳು ಹೆಚ್ಚಿನ ಮಾಹಿತಿಗಾಗಿ ಎಸ್​ಬಿಐನ ಅಧಿಕೃತ ವೆಬ್​ಸೈಟ್​ sbi.co.in ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
    ಹುದ್ದೆಯ ಹೆಸರುಸರ್ಕಲ್ ಬೇಸ್ಡ್ ಆಫೀಸರ್(CBO)
    ಒಟ್ಟು ಹುದ್ದೆ1422
    ವಿದ್ಯಾರ್ಹತೆಯಾವುದೇ ಪದವಿ
    ಸ್ಥಳಆಲ್​ ಓವರ್ ಇಂಡಿಯಾ
    ವೇತನಮಾಸಿಕ ₹ 36,000-63,840
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ18/10/2022
    ಅರ್ಜಿ ಸಲ್ಲಿಸಲು ಕೊನೇ ದಿನ07/11/2022


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/PWD- ಯಾವುದೇ ಅರ್ಜಿ ಶುಲ್ಕ ಇಲ್ಲ
    ಜನರಲ್/EWS/ಒಬಿಸಿ- 750 ರೂ.


    ಇದನ್ನೂ ಓದಿ: JOB ALERT: ಬೆಂಗಳೂರಿನಲ್ಲಿ ಲೈಬ್ರರಿಯನ್ ಹುದ್ದೆ ಖಾಲಿ, ತಿಂಗಳಿಗೆ 2.18 ಲಕ್ಷ ಸಂಬಳ


    ಹುದ್ದೆಯ ಮಾಹಿತಿ:
    ಸರ್ಕಲ್ ಬೇಸ್ಡ್ ಆಫೀಸರ್​ -ರೆಗ್ಯುಲರ್ ಹುದ್ದೆಗಳು-1400
    ಸರ್ಕಲ್ ಬೇಸ್ಡ್ ಆಫೀಸರ್​-ಬ್ಯಾಕ್​ಲಾಗ್ ಹುದ್ದೆಗಳು-22
    ಒಟ್ಟು 1422 ಹುದ್ದೆಗಳು


    ವಿದ್ಯಾರ್ಹತೆ:
    ಸರ್ಕಲ್ ಬೇಸ್ಡ್ ಆಫೀಸರ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.


    ವಯೋಮಿತಿ:
    ಅಭ್ಯರ್ಥಿಗಳ ವಯಸ್ಸು ಸೆಪ್ಟೆಂಬರ್ 30, 2022ಕ್ಕೆ ಕನಿಷ್ಠ 21 ವರ್ಷ ಗರಿಷ್ಠ 30 ವರ್ಷ ಇರಬೇಕು.


    ಉದ್ಯೋಗದ ಸ್ಥಳ:
    ಸರ್ಕಲ್ ಬೇಸ್ಡ್ ಆಫೀಸರ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.


    ವೇತನ:
    ಸರ್ಕಲ್ ಬೇಸ್ಡ್ ಆಫೀಸರ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 36,000-63,840 ರೂ. ವೇತನ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಆನ್​ಲೈನ್ ಪರೀಕ್ಷೆ
    ಸ್ಕ್ರೀನಿಂಗ್
    ಸಂದರ್ಶನ


    ಇದನ್ನೂ ಓದಿ:Jobs In Serial: ಟಿ ಎನ್ ಸೀತಾರಾಮ್ ಬಳಿ ಕೆಲಸ ಮಾಡೋಕೆ ಇಲ್ಲಿದೆ ಚಾನ್ಸ್!


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/11/2022

    Published by:Latha CG
    First published: