• Home
  • »
  • News
  • »
  • jobs
  • »
  • Banking Jobs: ಎಂಜಿನಿಯರಿಂಗ್ ಪದವೀಧರರಿಗೆ ಇಲ್ಲಿದೆ ಉದ್ಯೋಗ-ಮಾಸಿಕ ವೇತನ 63,000

Banking Jobs: ಎಂಜಿನಿಯರಿಂಗ್ ಪದವೀಧರರಿಗೆ ಇಲ್ಲಿದೆ ಉದ್ಯೋಗ-ಮಾಸಿಕ ವೇತನ 63,000

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​​ ನೇಮಕಾತಿ ಅಧಿಸೂಚನೆ ಪ್ರಕಾರ, ಐಟಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 22-32 ವರ್ಷದೊಳಗೆ ಇರಬೇಕು.

  • News18 Kannada
  • Last Updated :
  • New Delhi, India
  • Share this:

    Nainital Bank Limited Recruitment 2022: ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಐಟಿ ಆಫೀಸರ್(IT Officer) ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಹಾಕಬಹುದು. ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ನವೆಂಬರ್ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​/ಪೋಸ್ಟ್​ ಮೂಲಕ ಅರ್ಜಿ ಹಾಕಬೇಕು. ನವೆಂಬರ್ 15, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆನೈನಿತಾಲ್​​ ಬ್ಯಾಂಕ್​ ಲಿಮಿಟೆಡ್
    ಹುದ್ದೆಯ ಹೆಸರುಐಟಿ ಆಫೀಸರ್
    ಒಟ್ಟು ಹುದ್ದೆ10
    ವಿದ್ಯಾರ್ಹತೆಬಿಇ, ಎಂ.ಟೆಕ್, ಎಂಎಸ್ಸಿ
    ಸ್ಥಳನೈನಿತಾಲ್ (ಉತ್ತರಾಖಂಡ)
    ವೇತನಮಾಸಿಕ ₹ 36,000-63,840
    ಅರ್ಜಿ ಸಲ್ಲಿಕೆ ಬಗೆಆಫ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ07/11/2022
    ಅರ್ಜಿ ಸಲ್ಲಿಸಲು ಕೊನೆ ದಿನ15/11/2022


    ಶೈಕ್ಷಣಿಕ ಅರ್ಹತೆ:
    ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​​ ನೇಮಕಾತಿ ಅಧಿಸೂಚನೆ ಪ್ರಕಾರ, ಐಟಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ, ಎಂ.ಟೆಕ್, ಎಂಎಸ್ಸಿ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: Banking Job: ಕರ್ನಾಟಕ ಬ್ಯಾಂಕ್​ನಲ್ಲಿ ಕಂಪನಿ ಸೆಕ್ರೆಟರಿ ಹುದ್ದೆ ಖಾಲಿ-ಮಂಗಳೂರಿನಲ್ಲಿ ಉದ್ಯೋಗ


    ವಯೋಮಿತಿ:
    ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​​ ನೇಮಕಾತಿ ಅಧಿಸೂಚನೆ ಪ್ರಕಾರ, ಐಟಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 22-32 ವರ್ಷದೊಳಗೆ ಇರಬೇಕು.


    ವಯೋಮಿತಿ ಸಡಿಲಿಕೆ:
    ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​​ ನೇಮಕಾತಿ ಅಧಿಸೂಚನೆ ಪ್ರಕಾರ, ಐಟಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ವೇತನ:
    ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​​ ನೇಮಕಾತಿ ಅಧಿಸೂಚನೆ ಪ್ರಕಾರ, ಐಟಿ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 36,000-63,840 ರೂ. ವೇತನ ನೀಡಲಾಗುತ್ತದೆ.


     ಸ್ಥಳ:
    ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​​ ನೇಮಕಾತಿ ಅಧಿಸೂಚನೆ ಪ್ರಕಾರ, ಐಟಿ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉತ್ತರಾಖಂಡದ ನೈನಿತಾಲ್​ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ದಾಖಲಾತಿ ಪರಿಶೀಲನೆ
    ವೈಯಕ್ತಿಕ ಸಂದರ್ಶನ


    ಇದನ್ನೂ ಓದಿ:Central Government Job: ರೈಲ್ವೆ ಇಲಾಖೆಯಲ್ಲಿ ಗ್ರೂಪ್​ ಸಿ, ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


    ದಿ ವೈಸ್ ಪ್ರೆಸಿಡೆಂಟ್ (HRM)
    ನೈನಿತಾಲ್ ಬ್ಯಾಂಕ್ ಲಿಮಿಟೆಡ್
    ಮುಖ್ಯ ಕಚೇರಿ
    7 ಓಕ್ಸ್​ ಬಿಲ್ಡಿಂಗ್
    ಮಲ್ಲಿತಾಲ್
    ನೈನಿತಾಲ್-263001


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 15/11/2022

    Published by:Latha CG
    First published: