YES Bank Recruitment 2023: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಗುಡ್ನ್ಯೂಸ್ (Good News) ಇದೆ. ಯೆಸ್ ಬ್ಯಾಂಕ್ (YES Bank) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಅಸಿಸ್ಟೆಂಟ್ ಮ್ಯಾನೇಜರ್, ಸೇಲ್ಸ್ ಆಫೀಸರ್ ಹುದ್ದೆಗಳು ಖಾಲಿ ಇವೆ. ಇದೇ ಮಾರ್ಚ್ 31, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ (Online) ಮೂಲಕ ಅರ್ಜಿ ಹಾಕಬೇಕು. ಯೆಸ್ ಬ್ಯಾಂಕ್ನಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಯೆಸ್ ಬ್ಯಾಂಕ್ |
ಹುದ್ದೆ | ಅಸಿಸ್ಟೆಂಟ್ ಮ್ಯಾನೇಜರ್, ಸೇಲ್ಸ್ ಆಫೀಸರ್ |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಕೆ ಬಗೆ | ಆನ್ಲೈನ್ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 31, 2023 |
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಇದನ್ನೂ ಓದಿ: Banking Jobs: ಸೆಂಟ್ರಲ್ ಬ್ಯಾಂಕ್ನಲ್ಲಿ 5000 ಅಪ್ರೆಂಟಿಸ್ ಹುದ್ದೆಗಳ ನೇಮಕ- ಡಿಗ್ರಿ ಪಾಸಾದವರು ಅಪ್ಲೈ ಮಾಡಿ
ವೇತನ:
ನಿಗದಿಪಡಿಸಿಲ್ಲ
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು & ನೋಟಿಫಿಕೇಶನ್ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ ಹಾಗೂ ಇತರೆ ವಿವರಗಳಿಗಾಗಿ ನೋಟಿಫಿಕೇಶನ್ ಪರಿಶೀಲಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ