Union Bank of India Recruitment 2022: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(Union Bank of India) ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 33 ಎಕ್ಸ್ಟರ್ನಲ್ ಫ್ಯಾಕಲ್ಟಿ, ಇಂಡಸ್ಟ್ರಿ ಅಡ್ವೈಸರ್ಸ್(Industry Advisors) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್ ಕ್ಷೇತ್ರ(Banking Sector)ದಲ್ಲಿ ಉದ್ಯೋಗ ಅರಸುತ್ತಿರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಡಿಸೆಂಬರ್ 27, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹೈದರಾಬಾದ್, ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ |
ಹುದ್ದೆ | ಎಕ್ಸ್ಟರ್ನಲ್ ಫ್ಯಾಕಲ್ಟಿ, ಇಂಡಸ್ಟ್ರಿ ಅಡ್ವೈಸರ್ಸ್ |
ಒಟ್ಟು ಹುದ್ದೆ | 33 |
ಉದ್ಯೋಗದ ಸ್ಥಳ | ಬೆಂಗಳೂರು, ಹೈದರಾಬಾದ್, ಲಕ್ನೋ, ಗುರುಗ್ರಾಮ |
ವೇತನ | ನಿಯಮಾನುಸಾರ |
ಇದನ್ನೂ ಓದಿ: ADA Recruitment 2022: ಎಂಜಿನಿಯರಿಂಗ್ ಆದವರಿಗೆ ಏರೋನಾಟಿಲ್ ಡೆವಲಪ್ಮೆಂಟ್ ಏಜೆನ್ಸಿಯಲ್ಲಿದೆ ಉದ್ಯೋಗಾವಕಾಶ
ವಯೋಮಿತಿ:
ಯುಎಲ್ಎ ಹೆಡ್(ಡಿಜಿಟಲ್ ಟ್ರಾನ್ಸ್ಫರ್ಮೇಶನ್)- 30 ರಿಂದ 60 ವರ್ಷ
ಯುಎಲ್ಎ ಹೆಡ್ (ಸೇಲ್ಸ್ & ಮಾರ್ಕೆಟಿಂಗ್)- 30 ರಿಂದ 60 ವರ್ಷ
ಅಕಾಡೆಮಿಸಿಯನ್ಸ್- 28 ರಿಂದ 60 ವರ್ಷ
ಇಂಡಸ್ಟ್ರಿ ಅಡ್ವೈಸರ್ಸ್-28 ರಿಂದ 60 ವರ್ಷ
ಎಕ್ಸ್ಟರ್ನಲ್ ಫ್ಯಾಕಲ್ಟಿ- 28 ರಿಂದ 60 ವರ್ಷ
ವಿದ್ಯಾರ್ಹತೆ:
ಯುಎಲ್ಎ ಹೆಡ್(ಡಿಜಿಟಲ್ ಟ್ರಾನ್ಸ್ಫರ್ಮೇಶನ್)-ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್.ಡಿ
ಯುಎಲ್ಎ ಹೆಡ್ (ಸೇಲ್ಸ್ & ಮಾರ್ಕೆಟಿಂಗ್)- ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್.ಡಿ
ಅಕಾಡೆಮಿಸಿಯನ್ಸ್- ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್.ಡಿ
ಇಂಡಸ್ಟ್ರಿ ಅಡ್ವೈಸರ್ಸ್-ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್.ಡಿ
ಎಕ್ಸ್ಟರ್ನಲ್ ಫ್ಯಾಕಲ್ಟಿ- ಎಂ.ಫಿಲ್, ಸ್ನಾತಕೋತ್ತರ ಪದವಿ, ಪಿಎಚ್.ಡಿ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 07/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 27/12/2022
ಆಯ್ಕೆ ಪ್ರಕ್ರಿಯೆ:
ಶಾರ್ಟ್ಲಿಸ್ಟಿಂಗ್
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಶುಲ್ಕ:
ಎಸ್ಸಿ/ಎಸ್ಟಿ/ PWD ಅಭ್ಯರ್ಥಿಗಳು- 150 ರೂ.
ಸಾಮಾನ್ಯ/ EWS/OBC ಅಭ್ಯರ್ಥಿಗಳು- 750 ರೂ.
ಪಾವತಿಸುವ ಬಗೆ- ಆನ್ಲೈನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ