Union Bank Recruitment 2023: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(Union Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 42 ಚಾರ್ಟರ್ಡ್ ಅಕೌಂಟೆಂಟ್(Chartered Accountant), ಕ್ರೆಡಿಟ್ ಆಫೀಸರ್(Credit Officer) ಹುದ್ದೆಗಳು ಖಾಲಿ ಇದ್ದು, ಅಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಫೆಬ್ರವರಿ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಈಗಲೇ ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ |
ಹುದ್ದೆ | ಚಾರ್ಟರ್ಡ್ ಅಕೌಂಟೆಂಟ್, ಕ್ರೆಡಿಟ್ ಆಫೀಸರ್ |
ಒಟ್ಟು ಹುದ್ದೆ | 42 |
ವಿದ್ಯಾರ್ಹತೆ | ಸಿಎ, ಪದವಿ |
ವೇತನ | ತಿಂಗಳಿಗೆ 48,170- 89,890 ರೂ. |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 12, 2023 |
ವಿದ್ಯಾರ್ಹತೆ:
ಚೀಫ್ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್)- ಸಿಎ
ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- ಪದವಿ
ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- ಪದವಿ
ಇದನ್ನೂ ಓದಿ: JOB Alert: ಕೆಲಸ ಹುಡುಕ್ತಿದ್ರೆ ಇಲ್ಲಿ ಅರ್ಜಿ ಹಾಕಿ- 70,000 ಸಂಬಳದ ಹುದ್ದೆ ಖಾಲಿ ಇದೆ
ವಯೋಮಿತಿ:
ಚೀಫ್ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್)- 25 ರಿಂದ 40 ವರ್ಷ
ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- 35 ರಿಂದ 35 ವರ್ಷ
ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- 22 ರಿಂದ 35 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PWD ಅಭ್ಯರ್ಥಿಗಳು- 10 ವರ್ಷ
ವೇತನ:
ಚೀಫ್ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್)- ತಿಂಗಳಿಗೆ 76,010-89,890 ರೂ.
ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- ತಿಂಗಳಿಗೆ 63,840- 78,230 ರೂ.
ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- ತಿಂಗಳಿಗೆ 48,170- 69,810 ರೂ.
ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳು-150 ರೂ.
OBC ಅಭ್ಯರ್ಥಿಗಳು- 850 ರೂ.
ಪಾವತಿಸುವ ಬಗೆ- ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಆನ್ಲೈನ್ ಎಕ್ಸಾಂ
ಗ್ರೂಪ್ ಡಿಸ್ಕಶನ್
ವೈಯಕ್ತಿಕ ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 12, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ