• ಹೋಂ
 • »
 • ನ್ಯೂಸ್
 • »
 • Jobs
 • »
 • Banking Jobs: ತಿಂಗಳಿಗೆ 63 ಸಾವಿರ ಸಂಬಳ, ಸೌತ್ ಇಂಡಿಯನ್ ಬ್ಯಾಂಕ್​​ನಲ್ಲಿ ಕೆಲಸ- ಈಗಲೇ ಅರ್ಜಿ ಹಾಕಿ

Banking Jobs: ತಿಂಗಳಿಗೆ 63 ಸಾವಿರ ಸಂಬಳ, ಸೌತ್ ಇಂಡಿಯನ್ ಬ್ಯಾಂಕ್​​ನಲ್ಲಿ ಕೆಲಸ- ಈಗಲೇ ಅರ್ಜಿ ಹಾಕಿ

ಸೌತ್ ಇಂಡಿಯನ್ ಬ್ಯಾಂಕ್

ಸೌತ್ ಇಂಡಿಯನ್ ಬ್ಯಾಂಕ್

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಟೋಲ್ ಫ್ರೀ ಕಸ್ಟಮರ್ ಕೇರ್ ನಂಬರ್ 1800-425-1809/1800-102-9408 ಗೆ ಕರೆ ಮಾಡಬಹುದು. ಅಥವಾ ಇ-ಮೇಲ್ ಐಡಿ careers@sib.co.in ಗೆ ಸಂಪರ್ಕಿಸಿ.

 • News18 Kannada
 • 5-MIN READ
 • Last Updated :
 • New Delhi, India
 • Share this:

South Indian Bank Ltd Recruitment 2023: ಸೌತ್​ ಇಂಡಿಯನ್ ಬ್ಯಾಂಕ್ ಲಿಮಿಟೆಡ್​​ನಲ್ಲಿ (South Indian Bank Ltd) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಅನೇಕ ಪ್ರೊಬೆಶನರಿ ಆಫೀಸರ್​ ಹುದ್ದೆಗಳನ್ನು(Posts) ಭರ್ತಿ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಹಾಕಲು ಮಾರ್ಚ್​ 19, 2023 (ಇಂದು) ಕೊನೆಯ ದಿನಾಂಕ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತರು ಈ ಕೂಡಲೇ ಅರ್ಜಿ ಹಾಕಿ, ಬ್ಯಾಂಕಿಂಗ್ ಉದ್ಯೋಗ ಗಿಟ್ಟಿಸಿಕೊಳ್ಳಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಸೌತ್​ ಇಂಡಿಯನ್ ಬ್ಯಾಂಕ್ ಲಿಮಿಟೆಡ್
ಹುದ್ದೆಪ್ರೊಬೆಶನರಿ ಆಫೀಸರ್
ವಯೋಮಿತಿ28 ವರ್ಷ
ವಿದ್ಯಾರ್ಹತೆCMA, ICWA
ವೇತನಮಾಸಿಕ ₹ 36,000-63,840
ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್​ 19, 2023 (ಇಂದು)

ವಿದ್ಯಾರ್ಹತೆ:
ಸೌತ್​ ಇಂಡಿಯನ್ ಬ್ಯಾಂಕ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ CMA, ICWA ಪೂರ್ಣಗೊಳಿಸಿರಬೇಕು.


ಇದನ್ನೂ ಓದಿ: RDPR Karnataka: ಓಂಬುಡ್ಸ್​ಪರ್ಸನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಗ್ರಾಮೀಣಾಭಿವೃದ್ಧಿ & ಪಂಚಾಯತ್​ ರಾಜ್​ ಇಲಾಖೆ


ವಯೋಮಿತಿ:
ಸೌತ್​ ಇಂಡಿಯನ್ ಬ್ಯಾಂಕ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 28, 2023ಕ್ಕೆ ಗರಿಷ್ಠ 28 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ


South Indian Bank- ನೋಟಿಫಿಕೇಶನ್


ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು- 200 ರೂ.
ಸಾಮಾನ್ಯ ಅಭ್ಯರ್ಥಿಗಳು- 800 ರೂ.
ಪಾವತಿಸುವ ಬಗೆ- ಆನ್​ಲೈನ್


ವೇತನ:
ಮಾಸಿಕ ₹ 36,000-63,840




ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ


ಆಯ್ಕೆ ಪ್ರಕ್ರಿಯೆ:
ಆನ್​ಲೈನ್ ಟೆಸ್ಟ್​
ಗುಂಪು ಚರ್ಚೆ
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 19, 2023 (ಇಂದು)


ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಟೋಲ್ ಫ್ರೀ ಕಸ್ಟಮರ್ ಕೇರ್ ನಂಬರ್ 1800-425-1809/1800-102-9408 ಗೆ ಕರೆ ಮಾಡಬಹುದು. ಅಥವಾ ಇ-ಮೇಲ್ ಐಡಿ careers@sib.co.in ಗೆ ಸಂಪರ್ಕಿಸಿ.

Published by:Latha CG
First published: