SIDBI Recruitment 2023: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ(Small Industries Development Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 19 ಚೀಫ್ ಟೆಕ್ನಿಕಲ್ ಅಡ್ವೈಸರ್, ಆಡಿಟ್ ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಫೆಬ್ರವರಿ 12, 2023ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಬ್ಯಾಂಕಿಂಗ್ ವಲಯದಲ್ಲಿ(Banking Sector) ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ |
ಹುದ್ದೆ | ಚೀಫ್ ಟೆಕ್ನಿಕಲ್ ಅಡ್ವೈಸರ್, ಆಡಿಟ್ ಕನ್ಸಲ್ಟೆಂಟ್ |
ಒಟ್ಟು ಹುದ್ದೆ | 19 |
ವಿದ್ಯಾರ್ಹತೆ | ಪದವಿ, ಎಂಜಿನಿಯರಿಂಗ್ |
ವೇತನ | ನಿಯಮಾನುಸಾರ |
ಉದ್ಯೋಗದ ಸ್ಥಳ | ಮುಂಬೈ, ಚೆನ್ನೈ, ಬೆಂಗಳೂರು, ಲಕ್ನೋ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 12, 2023 |
ಇದನ್ನೂ ಓದಿ: Bank Jobs: ಸೌತ್ ಇಂಡಿಯನ್ ಬ್ಯಾಂಕ್ನಲ್ಲಿ ಪದವೀಧರರಿಗೆ ಬಂಪರ್ ಉದ್ಯೋಗ- 47,000 ಸಂಬಳ
ವಿದ್ಯಾರ್ಹತೆ:
ಚೀಫ್ ಟೆಕ್ನಿಕಲ್ ಅಡ್ವೈಸರ್(CTA)- ಸಿವಿಲ್/ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್
ಡೆಪ್ಯುಟಿ ಚೀಫ್ ಟೆಕ್ನಾಲಜಿ ಆಫೀಸರ್ (ಡೆಪ್ಯುಟಿ CTO)- ಬಿಇ/ಬಿ.ಟೆಕ್, ಎಂಬಿಎ
ಚೀಫ್ ಹ್ಯೂಮನ್ ರಿಸೋರ್ಸ್ ಆಫೀಸರ್ (CHRO)- ಪದವಿ, ಸ್ನಾತಕೋತ್ತರ ಪದವಿ,
ಲೀಗಲ್ ಅಡ್ವೈಸರ್ & ಜನರಲ್ ಕೌನ್ಸಲ್- LLB
ಡೆಪ್ಯುಟಿ ಲೀಗಲ್ ಅಡ್ವೈಸರ್ & ಜನರಲ್ ಕೌನ್ಸಲ್- LLB
ಲೀಗಲ್ ಅಸೀಸಿಯೇಟ್ & ಕೌನ್ಸಲ್ (LAcC)- LLB
ಕನ್ಸಲ್ಟೆಂಟ್ ಸಿಎ (ಕ್ರೆಡಿಟ್ ಅನಾಲಿಸ್ಟ್)- CA/ ICWA, ಪದವಿ, ಎಂಬಿಎ, ಪಿಜಿಡಿಬಿಎಂ
ಆಡಿಟ್ ಕನ್ಸಲ್ಟೆಂಟ್- ICAI, ICWAI
ಕನ್ಸಲ್ಟೆಂಟ್ ಸಿಎ (GP)- ICAI, ICWAI
ಎಕನಾಮಿಕ್ ಅಡ್ವೈಸರ್- ಸ್ನಾತಕೋತ್ತರ ಪದವಿ
SIDBI ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್- ICAI, ICWAI
ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು?
ಚೀಫ್ ಟೆಕ್ನಿಕಲ್ ಅಡ್ವೈಸರ್(CTA)- 50 ವರ್ಷ
ಡೆಪ್ಯುಟಿ ಚೀಫ್ ಟೆಕ್ನಾಲಜಿ ಆಫೀಸರ್ (ಡೆಪ್ಯುಟಿ CTO)- 50 ವರ್ಷ
ಚೀಫ್ ಹ್ಯೂಮನ್ ರಿಸೋರ್ಸ್ ಆಫೀಸರ್ (CHRO)- 50 ರಿಂದ 57 ವರ್ಷ
ಲೀಗಲ್ ಅಡ್ವೈಸರ್ & ಜನರಲ್ ಕೌನ್ಸಲ್- 55 ವರ್ಷ
ಡೆಪ್ಯುಟಿ ಲೀಗಲ್ ಅಡ್ವೈಸರ್ & ಜನರಲ್ ಕೌನ್ಸಲ್- 45 ವರ್ಷ
ಲೀಗಲ್ ಅಸೀಸಿಯೇಟ್ & ಕೌನ್ಸಲ್ (LAcC)- 35 ವರ್ಷ
ಕನ್ಸಲ್ಟೆಂಟ್ ಸಿಎ (ಕ್ರೆಡಿಟ್ ಅನಾಲಿಸ್ಟ್)- 35 ವರ್ಷ
ಆಡಿಟ್ ಕನ್ಸಲ್ಟೆಂಟ್- 35 ವರ್ಷ
ಕನ್ಸಲ್ಟೆಂಟ್ ಸಿಎ (GP)- 35 ವರ್ಷ
ಎಕನಾಮಿಕ್ ಅಡ್ವೈಸರ್- 50 ವರ್ಷ
SIDBI ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್- ನಿಗದಿಪಡಿಸಿಲ್ಲ.
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ ಎಷ್ಟು ಕೊಡಲಾಗುತ್ತೆ?
ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ಸಂಬಳ ಕೊಡುತ್ತದೆ.
ಇದನ್ನೂ ಓದಿ: DCC Bank: ಬೆಂಗಳೂರಿನ ಡಿಸಿಸಿ ಬ್ಯಾಂಕ್ನಲ್ಲಿ 96 ಹುದ್ದೆಗಳು ಖಾಲಿ- SSLC ಪಾಸಾದವರೂ ಅರ್ಜಿ ಹಾಕಿ
ಉದ್ಯೋಗದ ಸ್ಥಳ:
ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮುಂಬೈ, ಚೆನ್ನೈ, ಬೆಂಗಳೂರು, ಲಕ್ನೋದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ recruitment@sidbi.in ಗೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 06/02/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಫೆಬ್ರವರಿ 12, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ