ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ (Banking Jobs) ಹುಡುಕುತ್ತಿರುವವರಿಗೆ ಮುಖ್ಯವಾದ ಸುದ್ದಿ ಇಲ್ಲಿದೆ. ದೇಶದ ಪ್ರತಿಷ್ಟಿತ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇಮಕಾತಿಗೆ ಮುಂದಾಗಿದೆ. ಖಾಲಿ ಇರುವ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತಿವುಳ್ಳ, ಅರ್ಹ ಅಭ್ಯರ್ಥಿಗಳು ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಇದೇ ತಿಂಗಳು 12ನೇ ತಾರೀಖಿನೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಸಂಸ್ಥೆ: | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) |
ಹುದ್ದೆ: | ಮ್ಯಾನೇಜರ್ |
ಹುದ್ದೆಗಳ ಸಂಖ್ಯೆ: | 60 |
ವಯೋಮಿತಿ: | 25ರಿಂದ 35 ವರ್ಷ |
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: | 12-12-2022 |
ಅರ್ಜಿ ಸಲ್ಲಿಕೆ ಹೇಗೆ : | ಇಲ್ಲಿ ಕ್ಲಿಕ್ ಮಾಡಿ |
ಮ್ಯಾನೇಜರ್ (ಕ್ರೆಡಿಟ್ ವಿಶ್ಲೇಷಕ) –- 55 ಹುದ್ದೆಗಳು
ಮ್ಯಾನೇಜರ್ (ಪ್ರಾಜೆಕ್ಟ್ ಡಿಜಿಟಲ್ ಪಾವತಿಗಳು) - 5
ಮ್ಯಾನೇಜರ್ (ಪ್ರಾಡೆಕ್ಟ್ ಡಿಜಿಟಲ್ ಪ್ಲಾಟ್ ಫಾರ್ಮ್ಗಳು) - 2
ಮ್ಯಾನೇಜರ್ ( ಪ್ರಾಡೆಕ್ಟ್ ಡಿಜಿಟಲ್ ಪಾವತಿಗಳು ) – 2
ಇದನ್ನೂ ಓದಿ: SSR Recruitment 2022: ಬರೋಬ್ಬರಿ 1,400 ಹುದ್ದೆಗಳ ಭರ್ತಿಗೆ ಭಾರತೀಯ ನೌಕಾಪಡೆಯಿಂದ ಅರ್ಜಿ ಆಹ್ವಾನ
ವಿದ್ಯಾರ್ಹತೆ
MBA/ MMS (ಹಣಕಾಸು)/ PGDBA/ PGDBM/ CA/ CFA/ ICWA ಪದವಿ ಹೊಂದಿರಬೇಕು
ವಯೋಮಿತಿ ಸಡಿಲಿಕೆ
ಮೀಸಲಾತಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ಅವಕಾಶವಿದೆ.
ಅರ್ಜಿ ಸಲ್ಲಿಕೆ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳು : 750 ರೂ.
SC/ST ಅಭ್ಯರ್ಥಿಗಳು: ಶುಲ್ಕ ಇಲ್ಲ
ಇವುಗಳನ್ನು ಮರೆಯದಿರಿ
ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ.
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ