SBI Recruitment 2023: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಪೆಷಲಿಸ್ಟ್ ಆಫೀಸರ್ (SBI Recruitment 2023) ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಪೋಸ್ಟ್‌ಗಳಿಗೆ (SBI Recruitment) ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು SBI ನ ಅಧಿಕೃತ ವೆಬ್‌ಸೈಟ್ sbi.co.in ಮೂಲಕ ಅರ್ಜಿ ಸಲ್ಲಿಸಬಹುದು.
ಭಾರತೀಯ ಸ್ಟೇಟ್ ಬ್ಯಾಂಕ್ 2023ರ ಅರ್ಜಿ ಸಲ್ಲಿಕೆಯು ಏಪ್ರಿಲ್ 29 ರಿಂದ ಪ್ರಾರಂಭವಾಗಿದೆ. ಮೇ 19, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಈ ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ ಒಟ್ಟು 217 ಪೋಸ್ಟ್‌ಗಳನ್ನು ಭರ್ತಿ ಮಾಡಲಾಗುತ್ತದೆ. ಈ ಪೋಸ್ಟ್‌ಗಳಲ್ಲಿ (Government Job) ಕೆಲಸ ಪಡೆಯಲು ಬಯಸುವ ಅಭ್ಯರ್ಥಿಗಳು, ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳಿಗಾಗಿ ಕೆಳಗೆ ಓದಿ.
ಸಂಸ್ಥೆ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ |
ಹುದ್ದೆ | ರೆಗ್ಯುಲರ್, ಕಾಂಟ್ರ್ಯಾಕ್ಸ್ |
ಒಟ್ಟು ಹುದ್ದೆ | 217 |
ವೇತನ | ನಿಗದಿಪಡಿಸಿಲ್ಲ |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮೇ 19, 2023 |
ರೆಗ್ಯುಲರ್ ಹುದ್ದೆಗಳು: 182
ಕಾಂಟ್ರ್ಯಾಕ್ಟ್ ಹುದ್ದೆಗಳು: 35
SBI ನೇಮಕಾತಿ-ಅರ್ಹತೆಯ ಮಾನದಂಡ
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಲಾದ ವಿವರವಾದ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು.
ಇದನ್ನೂ ಓದಿ: Government Jobs 2023: ಆಯುರ್ವೇದಿಕ್ ಮೆಡಿಕಲ್ ಆಫೀಸರ್ ಹುದ್ದೆಗಳ ನೇಮಕಾತಿ- 45 ಸಾವಿರ ಸಂಬಳ
SBI ನೇಮಕಾತಿ- ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಏಪ್ರಿಲ್ 29, 2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 19, 2023
ಆಯ್ಕೆ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆಯು ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಬ್ಯಾಂಕಿನಿಂದ ರಚಿಸಲಾದ ಶಾರ್ಟ್‌ಲಿಸ್ಟಿಂಗ್ ಸಮಿತಿಯು ಶಾರ್ಟ್‌ಲಿಸ್ಟಿಂಗ್ ಪ್ಯಾರಾಮೀಟರ್ಗಳನ್ನು ನಿರ್ಧರಿಸುತ್ತದೆ. ನಂತರ ಬ್ಯಾಂಕ್ ನಿರ್ಧರಿಸಿದಂತೆ ಸಾಕಷ್ಟು ಸಂಖ್ಯೆಯ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವ ಬ್ಯಾಂಕ್‌ನ ನಿರ್ಧಾರವೇ ಅಂತಿಮವಾಗಿರುತ್ತದೆ. 100 ಅಂಕಗಳಿಗೆ ಸಂದರ್ಶನ ನಡೆಯಲಿದೆ.
ಇದನ್ನೂ ಓದಿ: UPSC Recruitment 2023: ಡಿಪ್ಲೊಮಾ, ಎಂಜಿನಿಯರಿಂಗ್ ಆದವರಿಗೆ UPSC ಉದ್ಯೋಗ- ಈಗಲೇ ಅಪ್ಲೈ ಮಾಡಿ
ಅರ್ಜಿ ಲಿಂಕ್ ಮತ್ತು ಅಧಿಸೂಚನೆಯನ್ನು ಇಲ್ಲಿ ನೋಡಿ
ಅರ್ಜಿ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ.
SBI ನೇಮಕಾತಿ -ಅರ್ಜಿ ಶುಲ್ಕ
ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಮತ್ತು ಸೂಚನೆ ಶುಲ್ಕಗಳು ₹750/-
SC/ST/PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.
ಸ್ಕ್ರೀನ್ ಮೇಲೆ ಕೇಳಿದ ಮಾಹಿತಿಯನ್ನು ಒದಗಿಸುವ ಮೂಲಕ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಇಂಟರ್ನೆಟ್ ಬ್ಯಾಂಕಿಂಗ್ ಇತ್ಯಾದಿಗಳನ್ನು ಬಳಸಿಕೊಂಡು ಪಾವತಿ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ