• ಹೋಂ
 • »
 • ನ್ಯೂಸ್
 • »
 • Jobs
 • »
 • Banking Jobs: ರಿಟೈರ್ಡ್ ಆಗಿ ಮನೆಯಲ್ಲಿ ಕೂತಿದ್ದೀರಾ? SBIನಲ್ಲಿದೆ ಬಂಪರ್ ಉದ್ಯೋಗ- ಈಗಲೇ ಅಪ್ಲೈ ಮಾಡಿ

Banking Jobs: ರಿಟೈರ್ಡ್ ಆಗಿ ಮನೆಯಲ್ಲಿ ಕೂತಿದ್ದೀರಾ? SBIನಲ್ಲಿದೆ ಬಂಪರ್ ಉದ್ಯೋಗ- ಈಗಲೇ ಅಪ್ಲೈ ಮಾಡಿ

SBI

SBI

ಅರ್ಹ ಅಭ್ಯರ್ಥಿಗಳು ನೀಡಿರುವ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಮಾರ್ಚ್ 2023 ಆಗಿರುತ್ತದೆ.

 • News18 Kannada
 • 4-MIN READ
 • Last Updated :
 • New Delhi, India
 • Share this:

SBI Recruitment 2023: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶೀಘ್ರದಲ್ಲೇ ಖಾಲಿ ಇರುವ ಕೆಲವು ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ. ಇದಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯು ಬ್ಯುಸಿನೆಸ್ ರೆಪ್ರೆಸೆಂಟೇಟೀವ್ ಫೆಸಿಲಿಟೇಟರ್(Business Representative Facilitator) ಹುದ್ದೆಗಳಿಗೆ ಇರುತ್ತದೆ. ಅರ್ಹ ಅಭ್ಯರ್ಥಿಗಳು ನೀಡಿರುವ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಮಾರ್ಚ್ 2023 ಆಗಿರುತ್ತದೆ.


ಈ ಹುದ್ದೆಗಳಿಗೆ ನೇಮಕಾತಿ:
ಬ್ಯುಸಿನೆಸ್ ರೆಪ್ರೆಸೆಂಟೇಟೀವ್ ಫೆಸಿಲಿಟೇಟರ್
ಒಟ್ಟು ಹುದ್ದೆ - 868
ವೇತನ: ಮಾಸಿಕ ₹ 40,000
ಬೆಂಗಳೂರಿನಲ್ಲಿ  32 ಹುದ್ದೆಗಳು ಖಾಲಿ ಇವೆ


ಇದನ್ನೂ ಓದಿ: Job Alert: ಬಳ್ಳಾರಿ & ತುಮಕೂರಿನಲ್ಲಿ ರಾಜ್ಯ ಸರ್ಕಾರದ ಹುದ್ದೆಗಳಿಗೆ ಅರ್ಜಿ ಆಹ್ವಾನ- ಆಸಕ್ತರು ಅಪ್ಲೈ ಮಾಡಿ


ಶೈಕ್ಷಣಿಕ ಅರ್ಹತೆ ಮತ್ತು ಅನುಭವ:


ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ ಪದವಿವರೆಗಿನ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.


ಅಭ್ಯರ್ಥಿಯು ಎಸ್‌ಬಿಐನಿಂದ ನಿವೃತ್ತ ಅಧಿಕಾರಿಯಾಗಿರಬೇಕು.


ಅಲ್ಲದೆ ಅಧಿಸೂಚನೆಯಲ್ಲಿ ನೀಡಿರುವ ಎಲ್ಲಾ ಅರ್ಹತೆಗಳನ್ನು ಹೊಂದಿರುವುದು ಅವಶ್ಯಕ.


ಅಭ್ಯರ್ಥಿಗಳು ಸಂಬಂಧಿತ ಹುದ್ದೆಯ ಕನಿಷ್ಠ ಅನುಭವವನ್ನು ಹೊಂದಿರಬೇಕು.


ಅಭ್ಯರ್ಥಿಗಳು ಹುದ್ದೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಪೂರೈಸಿರಬೇಕು.


ವಯಸ್ಸಿನ ಮಿತಿ:


ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 63 ವರ್ಷದಿಂದ 65 ವರ್ಷ ವಯಸ್ಸಿನವರಾಗಿರಬೇಕು.


ಇದನ್ನೂ ಓದಿ: Belagavi: ರಾಣಿ ಚೆನ್ನಮ್ಮ ಯೂನಿವರ್ಸಿಟಿಯಲ್ಲಿ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಅಗತ್ಯ ದಾಖಲಾತಿಗಳು:
ರೆಸ್ಯೂಮ್ (ಬಯೋಡೇಟಾ)
10ನೇ, 12ನೇ ಮತ್ತು ಪದವಿ ಪ್ರಮಾಣಪತ್ರಗಳು
ಶಾಲೆ ಬಿಡುವ ಪ್ರಮಾಣಪತ್ರ
ಜಾತಿ ಪ್ರಮಾಣಪತ್ರ (ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ)
ಗುರುತಿನ ಚೀಟಿ (ಆಧಾರ್ ಕಾರ್ಡ್, ಪರವಾನಗಿ)
ಪಾಸ್ಪೋರ್ಟ್ ಅಳತೆಯ ಭಾವಚಿತ್ರ


ನೋಟಿಫಿಕೇಶನ್​ ಇಲ್ಲಿದೆ- SBI- ನೋಟಿಫಿಕೇಶನ್


ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲಿಗೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.


ನಂತರ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

Published by:Latha CG
First published: