• Home
  • »
  • News
  • »
  • jobs
  • »
  • SBI Recruitment 2023: ನಿವೃತ್ತ ನೌಕರರಿಗೆ SBIನಲ್ಲಿದೆ ಬಂಪರ್ ಉದ್ಯೋಗ- ತಿಂಗಳಿಗೆ 40,000 ಸಂಬಳ

SBI Recruitment 2023: ನಿವೃತ್ತ ನೌಕರರಿಗೆ SBIನಲ್ಲಿದೆ ಬಂಪರ್ ಉದ್ಯೋಗ- ತಿಂಗಳಿಗೆ 40,000 ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಸ್​ಬಿಐನಲ್ಲಿ ನಿವೃತ್ತ ಬ್ಯಾಂಕ್​​ ಆಫೀಸರ್ಸ್​/ಸ್ಟಾಫ್​ ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಬಹುದು. ಜನವರಿ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಆನ್​ಲೈನ್ ಮೂಲಕ ಅಪ್ಲೈ ಮಾಡಿ. ಒಟ್ಟು 1438 ಹುದ್ದೆಗಳು ಖಾಲಿ ಇವೆ.

  • News18 Kannada
  • Last Updated :
  • New Delhi, India
  • Share this:

SBI Recruitment 2023: ಭಾರತೀಯ ಸ್ಟೇಟ್​ ಬ್ಯಾಂಕ್(State Bank of India)​ ಶೀಘ್ರದಲ್ಲೇ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಸಲಿದೆ. ಅದಕ್ಕಾಗಿ ಈಗಾಗಲೇ ಅಧಿಸೂಚನೆಯನ್ನು(Notification) ಬಿಡುಗಡೆ ಮಾಡಿದೆ. ಎಸ್​ಬಿಐನಲ್ಲಿ ನಿವೃತ್ತ ಬ್ಯಾಂಕ್​​ ಆಫೀಸರ್ಸ್​/ಸ್ಟಾಫ್(Retired Bank Officers/Staff)​ ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಬಹುದು. ಜನವರಿ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಆನ್​ಲೈನ್(Online) ಮೂಲಕ ಅಪ್ಲೈ ಮಾಡಿ. ಒಟ್ಟು 1438 ಹುದ್ದೆಗಳು ಖಾಲಿ ಇವೆ.


ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ಸ್ಟೇಟ್​ ಬ್ಯಾಂಕ್​
ಹುದ್ದೆನಿವೃತ್ತ ಬ್ಯಾಂಕ್​​ ಅಧಿಕಾರಿಗಳು/ ಸ್ಟಾಫ್
ಒಟ್ಟು ಹುದ್ದೆ1438
ವೇತನತಿಂಗಳಿಗೆ 25,000-40,000 ರೂ.
ಉದ್ಯೋಗದ ಸ್ಥಳಭಾರತ


ವಿದ್ಯಾರ್ಹತೆ ಮತ್ತು ಅನುಭವ:


ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ/ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.


ಇದರ ಜೊತೆಗೆ ಅಭ್ಯರ್ಥಿಗಳು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ನಿವೃತ್ತ ಬ್ಯಾಂಕ್ ಆಫೀಸರ್ ಅಥವಾ ನೌಕರರಾಗಿರಬೇಕು.


ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಅನುಭವವನ್ನು ಹೊಂದಿರಬೇಕು.


ನೇಮಕಾತಿಯ ಎಲ್ಲಾ ಷರತ್ತು ಮತ್ತು ನಿಯಮಗಳನ್ನು ಅಭ್ಯರ್ಥಿಗಳು ಒಪ್ಪಿಕೊಳ್ಳಬೇಕು.


ಹುದ್ದೆಯ ಕುರಿತಾದ ವಿಸ್ತೃತ ನೋಟಿಫಿಕೇಶನ್ ಇಲ್ಲಿದೆ:


SBI new


ಸಂಬಳ ಎಷ್ಟು?


ನಿವೃತ್ತ ಬ್ಯಾಂಕ್​ ಆಫೀಸರ್ಸ್​/ಸ್ಟಾಫ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 25,000-40,000 ರೂ. ವೇತನ ಕೊಡಲಾಗುತ್ತದೆ.


ಇದನ್ನೂ ಓದಿ: Railway Jobs: 4000 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ಕ್ಲಾಸ್ ಪಾಸಾದವರು ಅಪ್ಲೈ ಮಾಡಿ


ಅರ್ಜಿ ಸಲ್ಲಿಸಲು ಯಾವ್ಯಾವ ದಾಖಲಾತಿ ಬೇಕು?


ರೆಸ್ಯೂಮ್​
10ನೇ ತರಗತಿ, ಪಿಯುಸಿ ಮಾರ್ಕ್ಸ್​ ಕಾರ್ಡ್​
ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್
ಜಾತಿ ಪ್ರಮಾಣ ಪತ್ರ
ಗುರುತಿನ ಕಾರ್ಡ್​​(ಆಧಾರ್ ಕಾರ್ಡ್​, ಲೈಸೆನ್ಸ್​)
ಪಾಸ್​​ಪೋರ್ಟ್​ ಸೈಜಿನ ಫೋಟೋ


ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 10, 2023

Published by:Latha CG
First published: