• ಹೋಂ
  • »
  • ನ್ಯೂಸ್
  • »
  • Jobs
  • »
  • SSLC ಪಾಸಾದವರಿಗೆ RBIನಲ್ಲಿದೆ ಬಂಪರ್ ಉದ್ಯೋಗ- ತಿಂಗಳಿಗೆ 37,000 ಸಂಬಳ

SSLC ಪಾಸಾದವರಿಗೆ RBIನಲ್ಲಿದೆ ಬಂಪರ್ ಉದ್ಯೋಗ- ತಿಂಗಳಿಗೆ 37,000 ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಏಪ್ರಿಲ್ 16, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕ್ಲಾಸ್ 4 ಕೇಡರ್​​ನಲ್ಲಿ 5 ಡ್ರೈವರ್ ಹುದ್ದೆಗಳು ಖಾಲಿ ಇವೆ.

  • News18 Kannada
  • 3-MIN READ
  • Last Updated :
  • Mumbai, India
  • Share this:

RBI Recruitment 2023: ಭಾರತೀಯ ರಿಸರ್ವ್​ ಬ್ಯಾಂಕ್(Reserve Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಡ್ರೈವರ್ (Driver) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 16, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕ್ಲಾಸ್ 4 ಕೇಡರ್​​ನಲ್ಲಿ 5 ಡ್ರೈವರ್ ಹುದ್ದೆಗಳು ಖಾಲಿ ಇವೆ.


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.rbi.org.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ರಿಸರ್ವ್​ ಬ್ಯಾಂಕ್
ಹುದ್ದೆಡ್ರೈವರ್
ಒಟ್ಟು ಹುದ್ದೆ5
ವಿದ್ಯಾರ್ಹತೆ10ನೇ ತರಗತಿ
ವೇತನಮಾಸಿಕ ₹ 37,770
ಉದ್ಯೋಗದ ಸ್ಥಳಮುಂಬೈ
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 16, 2023

ವಿದ್ಯಾರ್ಹತೆ:
ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.


ವಯೋಮಿತಿ:
ಅಭ್ಯರ್ಥಿಗಳ ವಯಸ್ಸು 28- 35 ವರ್ಷದೊಳಗಿರಬೇಕು. ಅಂದರೆ, ಅಭ್ಯರ್ಥಿಗಳು 01/03/1995 ರಿಂದ 02/03/1998 ರೊಳಗೆ ಜನಿಸಿರಬೇಕು.


ಇದನ್ನೂ ಓದಿ:Bank Jobs: ಬ್ಯಾಂಕಿಂಗ್ ಉದ್ಯೋಗ ಖಾಲಿ ಇದೆ- 3.50 ಲಕ್ಷ ಸಂಬಳ, ಆಸಕ್ತರು ಕೂಡಲೇ ಅರ್ಜಿ ಹಾಕಿ


ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
35 ವರ್ಷದೊಳಗಿನ ವಿಧವಾ/ ವಿಚ್ಛೇದಿತ ಮಹಿಳೆಯರು ಅರ್ಜಿ ಹಾಕಬಹುದು.


ವೇತನ:
ಮಾಸಿಕ ₹ 37,770


ಅರ್ಜಿ ಶುಲ್ಕ:
SC/ST/EXS ಅಭ್ಯರ್ಥಿಗಳಿಗೆ 50 ರೂ.
ಒಬಿಸಿ/ ಸಾಮಾನ್ಯ & EWS ಅಭ್ಯರ್ಥಿಗಳಿಗೆ 450 ರೂ.
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.


ಇದನ್ನೂ ಓದಿ:KAPL Recruitment 2023: ಕರ್ನಾಟಕ ಸರ್ಕಾರದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಮಾಸಿಕ ವೇತನ 65,000




ಅರ್ಜಿ ಸಲ್ಲಿಸುವುದು ಹೇಗೆ?


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಜೊತೆಗೆ ಕೇಳಲಾಗಿರುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಅಪ್​ಲೋಡ್ ಮಾಡಿ.


ಆಯ್ಕೆ ಪ್ರಕ್ರಿಯೆ:
ಆನ್​ಲೈನ್ ಟೆಸ್ಟ್​
ಸ್ಕಿಲ್ ಟೆಸ್ಟ್
ಡ್ರೈವಿಂಗ್​ ಟೆಸ್ಟ್

First published: