• ಹೋಂ
  • »
  • ನ್ಯೂಸ್
  • »
  • Jobs
  • »
  • RBI Jobs: ರಿಸರ್ವ್​ ಬ್ಯಾಂಕ್​​ನಲ್ಲಿ 291 ಗ್ರೇಡ್ ಬಿ ಆಫೀಸರ್ಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ- ತಿಂಗಳಿಗೆ 1 ಲಕ್ಷ ಸಂಬಳ

RBI Jobs: ರಿಸರ್ವ್​ ಬ್ಯಾಂಕ್​​ನಲ್ಲಿ 291 ಗ್ರೇಡ್ ಬಿ ಆಫೀಸರ್ಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ- ತಿಂಗಳಿಗೆ 1 ಲಕ್ಷ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೇ 9 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಜೂನ್ 9, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • News18 Kannada
  • 4-MIN READ
  • Last Updated :
  • New Delhi, India
  • Share this:

RBI Recruitment 2023: ಭಾರತೀಯ ರಿಸರ್ವ್​ ಬ್ಯಾಂಕ್(Reserve Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 291 ಆಫೀಸರ್ಸ್​ ಗ್ರೇಡ್ ಬಿ (Officers Grade B) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 9 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಜೂನ್ 9, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹೀಗಾಗಿ ಅಭ್ಯರ್ಥಿಗಳು ತಡಮಾಡದೇ ಅರ್ಜಿ ಹಾಕಿ.


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.rbi.org.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ರಿಸರ್ವ್ ಬ್ಯಾಂಕ್
ಹುದ್ದೆಆಫೀಸರ್ಸ್​ ಗ್ರೇಡ್ ಬಿ
ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ
ಒಟ್ಟು ಹುದ್ದೆ291
ವೇತನಮಾಸಿಕ ₹ 55,200-99,750
ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಸಲ್ಲಿಸಲು ಕೊನೆಯ ದಿನಜೂನ್ 9, 2023

ಹುದ್ದೆಯ ಮಾಹಿತಿ:
ಆಫೀಸರ್ ಇನ್ ಗ್ರೇಡ್ ಬಿ (ಡಿಆರ್​) ಜನರಲ್- 222
ಆಫೀಸರ್ ಇನ್ ಗ್ರೇಡ್ ಬಿ (ಡಿಆರ್) ಡಿಪಾರ್ಟ್​ಮೆಂಟ್ ಆಫ್ ಎಕನಾಮಿಕ್ಸ್​ & ಪಾಲಿಸಿ ರಿಸರ್ಚ್​- 38
ಆಫೀಸರ್ ಇನ್ ಗ್ರೇಡ್ ಬಿ (ಡಿಆರ್​) ಡಿಪಾರ್ಟ್​ಮೆಂಟ್ ಆಫ್ ಸ್ಟ್ಯಾಟಿಸ್ಟಿಕ್ಸ್​ & ಇನ್ಫರ್ಮೇಶನ್ ಮ್ಯಾನೇಜ್​ಮೆಂಟ್)- 31




ವಯೋಮಿತಿ:
ಭಾರತೀಯ ರಿಸರ್ವ್​ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 1, 2023ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PwBD (Gen/EWS) ಅಭ್ಯರ್ಥಿಗಳು-10 ವರ್ಷ
PwBD (OBC) ಅಭ್ಯರ್ಥಿಗಳು- 13 ವರ್ಷ
PwBD (SC/ST) ಅಭ್ಯರ್ಥಿಗಳು- 15 ವರ್ಷ


ಇದನ್ನೂ ಓದಿ:Job Alert: ತಿಂಗಳಿಗೆ 2 ಲಕ್ಷದವರೆಗೆ ಸಂಬಳ- ಬೆಂಗಳೂರಿನಲ್ಲಿ ಲೆಕ್ಚರರ್ ಹುದ್ದೆಗಳಿಗೆ ಅರ್ಜಿ ಹಾಕಿ


ಅರ್ಜಿ ಶುಲ್ಕ:
ಆರ್​​ಬಿಐ ಸ್ಟಾಫ್- ಅರ್ಜಿ ಶುಲ್ಕ ಇಲ್ಲ
SC/ST/PwBD ಅಭ್ಯರ್ಥಿಗಳು- 100 ರೂ.
GEN/OBC/EWS ಅಭ್ಯರ್ಥಿಗಳು- 850 ರೂ.
ಪಾವತಿಸುವ ಬಗೆ - ಆನ್​ಲೈನ್


ವಿದ್ಯಾರ್ಹತೆ:
ಆಫೀಸರ್ ಇನ್ ಗ್ರೇಡ್ ಬಿ (ಡಿಆರ್​) ಜನರಲ್- ಪದವಿ, ಸ್ನಾತಕೋತ್ತರ ಪದವಿ
ಆಫೀಸರ್ ಇನ್ ಗ್ರೇಡ್ ಬಿ (ಡಿಆರ್) ಡಿಪಾರ್ಟ್​ಮೆಂಟ್ ಆಫ್ ಎಕನಾಮಿಕ್ಸ್​ & ಪಾಲಿಸಿ ರಿಸರ್ಚ್​- ಎಕನಾಮಿಕ್ಸ್/ಫೈನಾನ್ಸ್​​ನಲ್ಲಿ ಸ್ನಾತಕೋತ್ತರ ಪದವಿ, ಎಂಎ, ಎಂ.ಎಸ್ಸಿ
ಆಫೀಸರ್ ಇನ್ ಗ್ರೇಡ್ ಬಿ (ಡಿಆರ್​) ಡಿಪಾರ್ಟ್​ಮೆಂಟ್ ಆಫ್ ಸ್ಟ್ಯಾಟಿಸ್ಟಿಕ್ಸ್​ & ಇನ್ಫರ್ಮೇಶನ್ ಮ್ಯಾನೇಜ್​ಮೆಂಟ್)- ಪದವಿ, ಸ್ಟಾಟಿಸ್ಟಿಕ್ಸ್/ ಮ್ಯಾಥಮೆಟಿಕಲ್ ಸ್ಟಾಟಿಸ್ಟಿಕ್ಸ್​/ ಎಕನಾಮೆಟ್ರಿಕ್ಸ್​​/ ಸ್ಟಾಟಿಸ್ಟಿಕ್ಸ್​ & ಇನ್ಫರ್ಮೆಟಿಕ್ಸ್​/ ಅಪ್ಲೈಡ್ ಸ್ಟಾಟಿಸ್ಟಿಕ್ಸ್​ & ಇನ್ಫರ್ಮಾಟಿಕ್ಸ್​, ಮ್ಯಾಥಮೆಟಿಕ್ಸ್​, ಡೇಟಾ ಸೈನ್ಸ್​/ ಆರ್ಟಿಫಿಸಿಯಲ್ ಇಂಟೆಲೆಜೆನ್ಸ್/ ಮೆಷಿನ್ ಲರ್ನಿಂಗ್/ ಬಿಗ್ ಡೇಟಾ ಅನಾಲಿಟಿಕ್ಸ್​ನಲ್ಲಿ ಸ್ನಾತಕೋತ್ತರ ಪದವಿ.


ಆಯ್ಕೆ ಪ್ರಕ್ರಿಯೆ:
ಆನ್​ಲೈನ್ ಪರೀಕ್ಷೆ
ಲಿಖಿತ ಪರೀಕ್ಷೆ
ಸಂದರ್ಶನ


ವೇತನ:
ಮಾಸಿಕ ₹ 55,200-99,750


ಇದನ್ನೂ ಓದಿ: Job Alert: 10ನೇ ಕ್ಲಾಸ್ ಪಾಸಾಗಿದ್ದೀರಾ? ಈ ಕೆಲಸಕ್ಕೆ ಅಪ್ಲೈ ಮಾಡಿದ್ರೆ 35 ಸಾವಿರ ಸಂಬಳ ಸಿಗುತ್ತೆ


ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ.


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಪರಿಶೀಲಿಸಿ.


RBI - ನೋಟಿಫಿಕೇಶನ್


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 9, 2023

top videos
    First published: