Merchants Pattina Sahakari Sangha Kerur Recruitment 2023: ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ಕೆರೂರ್ನಲ್ಲಿ (Merchants Pattina Sahakari Sangha Kerur) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಒಟ್ಟು 8 ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್(SDA), ಸೆಪಾಯ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 3, 2023 ಅಂದರೆ ಇಂದು ಸಂಜೆಯೊಳಗೆ ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತರು ತಡಮಾಡದೇ ಈ ಕೂಡಲೇ ಅರ್ಜಿ ಹಾಕಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬಾಗಲಕೋಟೆಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ಕೆರೂರ್ |
ಹುದ್ದೆ | ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್(SDA), ಸೆಪಾಯ್ |
ಒಟ್ಟು ಹುದ್ದೆ | 8 |
ವಿದ್ಯಾರ್ಹತೆ | 10ನೇ ತರಗತಿ, ಪದವಿ |
ವೇತನ | ಮಾಸಿಕ ₹ 16,000-29,600 |
ಉದ್ಯೋಗದ ಸ್ಥಳ | ಬಾಗಲಕೋಟೆ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 3, 2023 (ಇಂದು) |
ವಿದ್ಯಾರ್ಹತೆ:
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್(SDA)- ಪದವಿ
ಸೆಪಾಯ್- ಎಸ್ಎಸ್ಎಲ್ಸಿ
ಇದನ್ನೂ ಓದಿ: Belagavi District Court Recruitment 2023: ಸ್ಟೆನೋಗ್ರಾಫರ್ ಹುದ್ದೆಗಳಿಗೆ ಇಲ್ಲಿ ಅರ್ಜಿ ಹಾಕಿ- ಇವತ್ತೇ ಲಾಸ್ಟ್ ಡೇಟ್
ವಯೋಮಿತಿ:
ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ಕೆರೂರ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 3, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
OBC ಅಭ್ಯರ್ಥಿಗಳು- 3 ವರ್ಷ
ವೇತನ:
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್(SDA)- ಮಾಸಿಕ ₹ 16,000-29,600
ಸೆಪಾಯ್- ಮಾಸಿಕ ₹10,400-16,400
ಉದ್ಯೋಗದ ಸ್ಥಳ:
ಬಾಗಲಕೋಟೆ
ಇದನ್ನೂ ಓದಿ: KMF SHIMUL Recruitment 2023: ಕೆಎಂಎಫ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಾಳೆಯೊಳಗೆ ಅರ್ಜಿ ಹಾಕಿ
ಅರ್ಜಿ ಶುಲ್ಕ:
SDA ಹುದ್ದೆಗಳಿಗೆ
SC/ST/ಪ್ರವರ್ಗ-1 ಅಭ್ಯರ್ಥಿಗಳು- 500 ರೂ.
ಸಾಮಾನ್ಯ/ OBC ಅಭ್ಯರ್ಥಿಗಳು- 1000 ರೂ.
ಸೆಪಾಯ್ ಹುದ್ದೆಗಳಿಗೆ
SC/ST/ಪ್ರವರ್ಗ-1 ಅಭ್ಯರ್ಥಿಗಳು- 250 ರೂ.
ಸಾಮಾನ್ಯ/ OBC ಅಭ್ಯರ್ಥಿಗಳು- 500 ರೂ.
ಪಾವತಿಸುವ ವಿಧಾನ: ಡಿಮ್ಯಾಂಡ್ ಡ್ರಾಫ್ಟ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ನಿಯಮಿತ ಕೆರೂರು
ಬಾದಾಮಿ ತಾಲೂಕು
ಬಾಗಲಕೋಟ ಜಿಲ್ಲೆ
ಪಿನ್‌ಕೋಡ್-587206
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 3, 2023 (ಇಂದು)
ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ನಂಬರ್ 9535941855 ಗೆ ಕರೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ