Karnataka Bank Recruitment 2023: ಬ್ಯಾಂಕಿಂಗ್ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಕರ್ನಾಟಕ ಬ್ಯಾಂಕ್ನಲ್ಲಿ(Karnataka Bank ) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅನೇಕ ಆಫೀಸರ್(ಸ್ಕೇಲ್-1) ಹುದ್ದೆಗಳು ಖಾಲಿ ಇವೆ. ನೀವು ಎಂಬಿಎ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರೆ ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ಜನವರಿ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಈಗಲೇ ಆನ್ಲೈನ್(Online) ಮೂಲಕ ಅರ್ಜಿ ಹಾಕಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕರ್ನಾಟಕ ಬ್ಯಾಂಕ್ |
ಹುದ್ದೆ | ಆಫೀಸರ್(ಸ್ಕೇಲ್-1) |
ವಿದ್ಯಾರ್ಹತೆ | ಎಂಬಿಎ, ಪಿಜಿ |
ವೇತನ | ಮಾಸಿಕ ₹ 84,000 |
ಉದ್ಯೋಗದ ಸ್ಥಳ | ಕರ್ನಾಟಕ |
ಅರ್ಜಿ ಸಲ್ಲಿಕೆ ಬಗೆ | ಆನ್ಲೈನ್ |
ಇದನ್ನೂ ಓದಿ: IISc Recruitment 2023: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಡಿಗ್ರಿ ಪಾಸಾದವರಿಗೆ ಉದ್ಯೋಗ- 69 ಸಾವಿರ ಸಂಬಳ
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ-800 ರೂ.
SC/ST/ಮಾಜಿ ಸೈನಿಕ ಅಭ್ಯರ್ಥಿಗಳಿಗೆ- 700 ರೂ.
ಪಾವತಿಸುವ ಬಗೆ: ಪರೀಕ್ಷಾ ಶುಲ್ಕವನ್ನು ಡೆಬಿಡ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಆಫ್ಲೈನ್ ಮೂಲಕ ಅಂದ್ರೆ ಇ-ಚಲನ್ ಮೂಲಕ ಪಾವತಿಸಬಹುದು.
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು- ಡಿಸೆಂಬರ್ 1, 2022ಕ್ಕೆ ಗರಿಷ್ಠ 28 ವರ್ಷ ಮೀರಿರಬಾರದು.
SC/ST ಅಭ್ಯರ್ಥಿಗಳಿಗೆ 5 ವರ್ಷ & OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವಿದ್ಯಾರ್ಹತೆ ಏನಿರಬೇಕು?
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಬಿಎ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳು ತಮ್ಮ ಪಿಜಿ ಕೋರ್ಸ್ನ್ನು ಡಿಸೆಂಬರ್ 1, 2022ರೊಳಗೆ ಮುಗಿಸಿರಬೇಕು. ಫಲಿತಾಂಶಕ್ಕಾಗಿ ಕಾಯುತ್ತಿರುವ ಹಾಗೂ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಹಾಕಲು ಅರ್ಹರಲ್ಲ.
ಇದನ್ನೂ ಓದಿ: Anganwadi Jobs: 500 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ-10th ಪಾಸಾದವರು ಅಪ್ಲೈ ಮಾಡಿ
ವೇತನ ಎಷ್ಟು?
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 84,000 ಸಂಬಳ ಕೊಡಲಾಗುತ್ತದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. ಇಂದಿನಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ