Indian Bank Recruitment 2023: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಬೇಕಾ? ಹಾಗಿದ್ರೆ ಇಲ್ಲಿ ಅಪ್ಲೈ ಮಾಡಿ. ಇಂಡಿಯನ್ ಬ್ಯಾಂಕ್ (Indian Bank) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ವರ್ಟಿಕಲ್ ಹೆಡ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಗ್ರಿ ಪಾಸಾದವರು (Degree Pass Students) ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಮೇ 10 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಮೇ 17 ರೊಳಗೆ ಅಭ್ಯರ್ಥಿಗಳು ಅರ್ಜಿ ಹಾಕಬೇಕು. ಆಫ್ಲೈನ್ ಮೂಲಕ ಅರ್ಜಿ ಹಾಕಬೇಕೆಂದು ನೋಟಿಫಿಕೇಶನ್ನಲ್ಲಿ (Notification) ತಿಳಿಸಲಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಇಂಡಿಯನ್ ಬ್ಯಾಂಕ್ |
ಹುದ್ದೆ | ವರ್ಟಿಕಲ್ ಹೆಡ್ |
ವಿದ್ಯಾರ್ಹತೆ | ಪದವಿ |
ವೇತನ | ನಿಗದಿಪಡಿಸಿಲ್ಲ |
ಉದ್ಯೋಗದ ಸ್ಥಳ | ಚೆನ್ನೈ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮೇ 17, 2023 |
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಗರಿಷ್ಠ 62 ವರ್ಷ ಮೀರಿರಬಾರದು.
ಇದನ್ನೂ ಓದಿ: Railway Jobs: ರೈಲ್ ವಿಕಾಸ್ ನಿಗಮದಲ್ಲಿ ಬಂಪರ್ ಉದ್ಯೋಗ- ತಿಂಗಳಿಗೆ 2.80 ಲಕ್ಷ ಸಂಬಳ
ಉದ್ಯೋಗದ ಸ್ಥಳ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಮಿಳುನಾಡಿನ ಚೆನ್ನೈನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ವೇತನ:
ನಿಗದಿಪಡಿಸಿಲ್ಲ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ಸಂದರ್ಶನ
ಇದನ್ನೂ ಓದಿ: CEE Recruitment 2023: ತಿಂಗಳಿಗೆ 50,000 ಸಂಬಳ- ಬೆಂಗಳೂರಿನಲ್ಲಿದೆ ಬಂಪರ್ ಉದ್ಯೋಗ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಮುಖ್ಯ ಜನರಲ್ ಮ್ಯಾನೇಜರ್ (CDO & CLO)
ಇಂಡಿಯನ್ ಬ್ಯಾಂಕ್ ಕಾರ್ಪೊರೇಟ್ ಕಛೇರಿ
HRM ಇಲಾಖೆ
ನೇಮಕಾತಿ ವಿಭಾಗ 254-260
ಅವ್ವೈ ಷಣ್ಮುಖಂ ಸಲೈ
ರಾಯಪೆಟ್ಟಾ
ಚೆನ್ನೈ
ಪಿನ್-600 014
ತಮಿಳುನಾಡು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ