• ಹೋಂ
  • »
  • ನ್ಯೂಸ್
  • »
  • Jobs
  • »
  • Indbank Recruitment 2023: ಇಂಡ್​ ಬ್ಯಾಂಕ್​​ನಲ್ಲಿ ಕೆಲಸಕ್ಕೆ ಅರ್ಜಿ ಹಾಕಿ- ನಾಳೆಯೇ ಲಾಸ್ಟ್ ಡೇಟ್

Indbank Recruitment 2023: ಇಂಡ್​ ಬ್ಯಾಂಕ್​​ನಲ್ಲಿ ಕೆಲಸಕ್ಕೆ ಅರ್ಜಿ ಹಾಕಿ- ನಾಳೆಯೇ ಲಾಸ್ಟ್ ಡೇಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಟ್ಟು 12 ಡೀಲರ್ (Dealer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಏಪ್ರಿಲ್ 22, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

  • News18 Kannada
  • 4-MIN READ
  • Last Updated :
  • New Delhi, India
  • Share this:

Indbank Recruitment 2023: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಬಂಪರ್ ಜಾಬ್ ಇದೆ. ಇಂಡ್​ಬ್ಯಾಂಕ್ ಮರ್ಚೆಂಟ್​ ಬ್ಯಾಂಕಿಂಗ್ ಸರ್ವೀಸಸ್​ ಲಿಮಿಟೆಡ್ (Indbank Merchant Banking Services Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 12 ಡೀಲರ್ (Dealer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಏಪ್ರಿಲ್ 22, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date).


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಇಂಡ್ ಬ್ಯಾಂಕ್
ಹುದ್ದೆಡೀಲರ್
ಒಟ್ಟು ಹುದ್ದೆ12
ವಿದ್ಯಾರ್ಹತೆಪದವಿ
ವೇತನ3.50 ಲಕ್ಷ
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 22, 2023 (ನಾಳೆ)

ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.


ವಿದ್ಯಾರ್ಹತೆ:
ಅಭ್ಯರ್ಥಿಗಳು ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. NISM / NCFM ವಿದ್ಯಾರ್ಹತೆ ಪಡೆದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಅನುಭವ ಹೊಂದಿರಬೇಕು.



ವೇತನ:
3.50 ಲಕ್ಷ ವಾರ್ಷಿಕ ಪ್ಯಾಕೇಜ್


ಉದ್ಯೋಗದ ಸ್ಥಳ:
ಕೊಲ್ಕತ್ತಾ, ವಾರಣಾಸಿ, ಕಾನ್ಪುರ, ಭುವನೇಶ್ವರ, ಜೈಪುರ, ಚಂಡೀಗಢ, ಇಂದೋರ್, ಸೂರತ್, ಲಕ್ನೋ, ಪುಣೆ, ಸಿಕಂದರಾಬಾದ್, ಪಂಜಾಬಿ ಬಾಘ್


ಆಯ್ಕೆ ಪ್ರಕ್ರಿಯೆ:
ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.


ಇದನ್ನೂ ಓದಿ: IIT Dharwad Recruitment 2023: ಧಾರವಾಡದಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 31 ಸಾವಿರ ಸಂಬಳ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


480, 1ನೇ ಮಹಡಿ
ಖಿವರಾಜ್ ಕಾಂಪ್ಲೆಕ್ಸ್ 1
ಅಣ್ಣಾ ಸಲೈ
ನಂದನಂ
ಚೆನ್ನೈ - 600035

First published: