ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶ ಬಂದಿದೆ. ಆದಾಯ ತೆರಿಗೆ ಇಲಾಖೆ ಸಹಕಾರಿ ಬ್ಯಾಂಕ್ ಲಿಮಿಟೆಡ್ (Income Tax Department Cooperative Bank Limited) ಎಕ್ಸಿಕ್ಯೂಟಿವ್ ಆಫೀಸರ್ ಮತ್ತು ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿಯನ್ನು ಪ್ರಕಟಿಸಿದೆ. ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಯನ್ನು ಅಧಿಕೃತ ವೆಬ್‌ಸೈಟ್ incometaxbank.co.in ಗೆ ಭೇಟಿ ನೀಡುವ ಮೂಲಕ ಭರ್ತಿ ಮಾಡಬೇಕು. ಅರ್ಜಿ ಪ್ರಕ್ರಿಯೆಯು ಮಾರ್ಚ್ 13 ರಿಂದ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28 ಮಾರ್ಚ್ 2023.
ಸಂಸ್ಥೆ: | ಆದಾಯ ತೆರಿಗೆ ಇಲಾಖೆ ಸಹಕಾರಿ ಬ್ಯಾಂಕ್ |
ಹುದ್ದೆಗಳು: | ಲಿಮಿಟೆಡ್ ಎಕ್ಸಿಕ್ಯೂಟಿವ್ ಆಫೀಸರ್ ಮತ್ತು ಕ್ಲರ್ಕ್ |
ವಿದ್ಯಾರ್ಹತೆ: | ಯಾವುದೇ ಪದವಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: | 28-03-2023 |
ಅನುಭವ: | ಬ್ಯಾಂಕ್ ನಲ್ಲಿ 3 ವರ್ಷ ಕೆಲಸ ಮಾಡಿರಬೇಕು |
ಸಂಬಳ: | 35,000 ರೂ. |
ವಯೋಮಿತಿ: | 35 ವರ್ಷಗಳನ್ನು ಮೀರಿರಬಾರದು |
ಅಧಿಕೃತ ವೆಬ್ ಸೈಟ್: | www.incometaxbank.co.in |
ಸಂಪೂರ್ಣ ಮಾಹಿತಿ: | ನೋಟಿಫಿಕೇಷನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಶುಲ್ಕ: | 1,000 ರೂ. |
ಕಾರ್ಯನಿರ್ವಾಹಕ ಅಧಿಕಾರಿಗೆ ಎಷ್ಟು ಸಂಬಳ ಸಿಗುತ್ತದೆ?
ಎಕ್ಸಿಕ್ಯೂಟಿವ್ ಆಫೀಸರ್ ಹುದ್ದೆಗೆ ಸೇರಿದ ನಂತರ ನಿಮಗೆ ತಿಂಗಳಿಗೆ 35000 ರೂಪಾಯಿ ಸಂಬಳ ಸಿಗುತ್ತದೆ.
ವಯಸ್ಸಿನ ಮಿತಿ
ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇಮಕಾತಿಗೆ ವಯೋಮಿತಿ 21 ರಿಂದ 35 ವರ್ಷಗಳು. ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
ಇದನ್ನೂ ಓದಿ: Banking Jobs: ಬೆಂಗಳೂರಿನ ಇಂಡಸ್ಇಂಡ್ ಬ್ಯಾಂಕ್ನಲ್ಲಿ 4 ಲಕ್ಷ ಸಂಬಳದ ಉದ್ಯೋಗ- ಸಂದರ್ಶನದಲ್ಲಿ ಪಾಲ್ಗೊಳ್ಳಿ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13-03-2023
ಅರ್ಜಿ ಸಲ್ಲಿಕೆ ಕೊನೆ ದಿನಾಂಕ : 28-03-2023
ಪರೀಕ್ಷಾ ಶುಲ್ಕಗಳು
ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇಮಕಾತಿಗೆ ಅರ್ಜಿ ಶುಲ್ಕ 1000 ರೂ.
ಆಯ್ಕೆ ಹೇಗೆ ಇರುತ್ತದೆ?
ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇಮಕಾತಿಗಾಗಿ ವಸ್ತುನಿಷ್ಠ ಮಾದರಿ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ ಇರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ