Federal Bank Recruitment 2023: ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾದ ಫೆಡರಲ್ ಬ್ಯಾಂಕ್ (Federal Bank) ಸದ್ಯ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಅನೇಕ ಫೈನಾನ್ಸಿಯಲ್ ಕ್ರೈಮ್ ಕಾಂಪ್ಲಿಯೆನ್ಸ್ ಸ್ಪೆಷಲಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಏಪ್ರಿಲ್ 27, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಇದನ್ನೂ ಓದಿ:ITI Limited Recruitment 2023: ಟೆಲಿಫೋನ್ ಇಂಡಸ್ಟ್ರೀಸ್ನಲ್ಲಿ ಕೆಲಸ ಮಾಡುವ ಅವಕಾಶ- ಸಂಜೆಯೊಳಗೆ ಅರ್ಜಿ ಹಾಕಿ
ವಿದ್ಯಾರ್ಹತೆ:
ಫೆಡರಲ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಕಾನೂನು ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಎಂಬಿಎ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಫೆಡರಲ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 1, 2023ಕ್ಕೆ ಗರಿಷ್ಠ 27 ವರ್ಷ ಮೀರಿರಬಾರದು. SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು- 100 ರೂ.
ಸಾಮಾನ್ಯ & ಒಬಿಸಿ ಅಭ್ಯರ್ಥಿಗಳು- 500 ರೂ.
ಪಾವತಿಸುವ ಬಗೆ- ಆನ್ಲೈನ್
ಇದನ್ನೂ ಓದಿ: RailTel Recruitment 2023: ರೈಲ್ಟೆಲ್ ಕಾರ್ಪೊರೇಷನ್ನಲ್ಲಿ ಎಂಜಿನಿಯರ್ ಹುದ್ದೆಗಳು ಖಾಲಿ ಇವೆ- ಆಸಕ್ತರು ಅಪ್ಲೈ ಮಾಡಿ
ವೇತನ:
ಮಾಸಿಕ ₹ 27,500
ಉದ್ಯೋಗದ ಸ್ಥಳ:
ಭಾರತ
ಆಯ್ಕೆ ಪ್ರಕ್ರಿಯೆ:
ಮಾಕ್ ಅಸೆಸ್ಮೆಂಟ್
ಆಪ್ಟಿಟ್ಯೂಡ್ ಅಸೆಸ್ಮೆಂಟ್
ಗುಂಪು ಚರ್ಚೆ
ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಫೆಡರಲ್ ಬ್ಯಾಂಕ್ |
ಹುದ್ದೆ | ಫೈನಾನ್ಸಿಯಲ್ ಕ್ರೈಮ್ ಕಾಂಪ್ಲಿಯೆನ್ಸ್ ಸ್ಪೆಷಲಿಸ್ಟ್ |
ವಿದ್ಯಾರ್ಹತೆ | ಪದವಿ, ಸ್ನಾತಕೋತ್ತರ ಪದವಿ, ಎಂಬಿಎ |
ವೇತನ | ಮಾಸಿಕ ₹ 27,500 |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 27, 2023 (ಇಂದು) |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 27, 2023 (ಇಂದು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ