• ಹೋಂ
  • »
  • ನ್ಯೂಸ್
  • »
  • Jobs
  • »
  • DCC Bank: ಬೆಂಗಳೂರಿನ ಡಿಸಿಸಿ ಬ್ಯಾಂಕ್​​ನಲ್ಲಿ 96 ಹುದ್ದೆಗಳು ಖಾಲಿ- SSLC ಪಾಸಾದವರೂ ಅರ್ಜಿ ಹಾಕಿ

DCC Bank: ಬೆಂಗಳೂರಿನ ಡಿಸಿಸಿ ಬ್ಯಾಂಕ್​​ನಲ್ಲಿ 96 ಹುದ್ದೆಗಳು ಖಾಲಿ- SSLC ಪಾಸಾದವರೂ ಅರ್ಜಿ ಹಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫೆಬ್ರವರಿ 28, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್​(Online) ಮೂಲಕ ಅರ್ಜಿ ಹಾಕಿ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

DCC Bank Recruitment 2023: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಗುಡ್​ ನ್ಯೂಸ್. ಬೆಂಗಳೂರಿನ ಡಿಸಿಸಿ ಬ್ಯಾಂಕ್​ನಲ್ಲಿ(DCC Bank) ಅನೇಕ ಹುದ್ದೆಗಳು ಖಾಲಿ ಇದ್ದು, ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 96 ಸ್ಟೆನೋಗ್ರಾಫರ್(Stenographer), ಕಂಪ್ಯೂಟರ್ ಆಪರೇಟರ್(Computer Operator), ಡ್ರೈವರ್(Driver) ಹುದ್ದೆಗಳು ಖಾಲಿ ಇವೆ. ಡಿಸಿಸಿ ಬ್ಯಾಂಕ್​ನಲ್ಲಿ ಈ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಹೀಗಾಗಿ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಫೆಬ್ರವರಿ 28, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್​(Online) ಮೂಲಕ ಅರ್ಜಿ ಹಾಕಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬೆಂಗಳೂರು ಡಿಸಿಸಿ ಬ್ಯಾಂಕ್
ಹುದ್ದೆಬ್ರಾಂಚ್ ಮ್ಯಾನೇಜರ್, ಸ್ಟೆನೋಗ್ರಾಫರ್, ಡ್ರೈವರ್
ಒಟ್ಟು ಹುದ್ದೆ96
ವಿದ್ಯಾರ್ಹತೆಪದವಿ, ಡಿಪ್ಲೋಮಾ, 10ನೇ ತರಗತಿ, ಪಿಯುಸಿ
ವೇತನ ಮಾಸಿಕ ₹ 40,900-78,200
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 28, 2023

ಎಷ್ಟೆಷ್ಟು ಹುದ್ದೆಗಳಿವೆ?
ಬ್ರಾಂಚ್ ಮ್ಯಾನೇಜರ್- 4
ಸೀನಿಯರ್ ಅಸಿಸ್ಟೆಂಟ್- 19
ಸ್ಟೆನೋಗ್ರಾಫರ್-1
ಜೂನಿಯರ್ ಅಸಿಸ್ಟೆಂಟ್ಸ್​- 43
ಕಂಪ್ಯೂಟರ್ ಆಪರೇಟರ್- 2
ಡ್ರೈವರ್- 4
ಗ್ರೂಪ್​​ ಡಿ-23
ಒಟ್ಟು : 96 ಹುದ್ದೆಗಳು


ವಿದ್ಯಾರ್ಹತೆ:
ಬ್ರಾಂಚ್ ಮ್ಯಾನೇಜರ್, ಸೀನಿಯರ್ ಅಸಿಸ್ಟೆಂಟ್- ಯಾವುದೇ ಪದವಿ
ಸ್ಟೆನೋಗ್ರಾಫರ್- ಪಿಯುಸಿ, ಕಮರ್ಷಿಯಲ್ ಪ್ರಾಕ್ಟೀಸ್​ನಲ್ಲಿ ಡಿಪ್ಲೋಮಾ
ಜೂನಿಯರ್ ಅಸಿಸ್ಟೆಂಟ್ಸ್​- ಪಿಯುಸಿ
ಕಂಪ್ಯೂಟರ್ ಆಪರೇಟರ್- ಪಿಯುಸಿ, ಕಮರ್ಷಿಯಲ್ ಪ್ರಾಕ್ಟೀಸ್​ನಲ್ಲಿ ಡಿಪ್ಲೋಮಾ
ಡ್ರೈವರ್, ಗ್ರೂಪ್​​ ಡಿ-10 ನೇ ತರಗತಿ


ಇದನ್ನೂ ಓದಿ: Banking Jobs: ಕರೂರ್ ವೈಶ್ಯ ಬ್ಯಾಂಕ್​​ನಲ್ಲಿ ವಿವಿಧ ಹುದ್ದೆಗಳು ಖಾಲಿ, ಪದವೀಧರರು ಅರ್ಜಿ ಸಲ್ಲಿಸಿ


ವಯೋಮಿತಿ:
ಅಭ್ಯರ್ಥಿಗಳು ವಯಸ್ಸು ಫೆಬ್ರವರಿ 28, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
ಪ್ರವರ್ಗ-2ಎ/2ಬಿ/3ಎ & 3ಬಿ ಮತ್ತು ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ


ಅರ್ಜಿ ಶುಲ್ಕ:
ಜನರಲ್, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 1500 ರೂ.
SC/ST ಅಭ್ಯರ್ಥಿಗಳು- 750 ರೂ.
ಪಾವತಿಸುವ ಬಗೆ- ಆನ್​ಲೈನ್​


ವೇತನ:
ಬ್ರಾಂಚ್ ಮ್ಯಾನೇಜರ್- ಮಾಸಿಕ ₹ 40,900-78,200
ಸೀನಿಯರ್ ಅಸಿಸ್ಟೆಂಟ್- ಮಾಸಿಕ ₹ 37,900-70,850
ಸ್ಟೆನೋಗ್ರಾಫರ್- ಮಾಸಿಕ ₹ 37,900-70,850
ಜೂನಿಯರ್ ಅಸಿಸ್ಟೆಂಟ್ಸ್​- ಮಾಸಿಕ ₹ 30,350- 58,250
ಕಂಪ್ಯೂಟರ್ ಆಪರೇಟರ್- ಮಾಸಿಕ ₹ 30,350- 58,250
ಡ್ರೈವರ್- ಮಾಸಿಕ ₹ 27,650-52,650
ಗ್ರೂಪ್​​ ಡಿ- ಮಾಸಿಕ ₹ 23,500-47,650




ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/01/ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 28, 203


ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ- 9036377735 ಗೆ ಕರೆ ಮಾಡಿ.


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ನಿಗದಿತ ಅರ್ಹತಾ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು