City Union Bank Recruitment 2023: ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking Sector) ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್ನ್ಯೂಸ್ (Good News) ಇದೆ. ಖಾಸಗಿ ವಲಯದ ಬ್ಯಾಂಕ್ ಆದ ಸಿಟಿ ಯೂನಿಯನ್ ಬ್ಯಾಂಕ್ (City Union Bank) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ(Apply) ಸಲ್ಲಿಸಬಹುದು. ಇದೇ ಏಪ್ರಿಲ್ 30, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಂದರೆ ಇನ್ನೆರಡು ದಿನಗಳಲ್ಲಿ ಅಪ್ಲಿಕೇಶನ್ ಡೇಟ್ ಕ್ಲೋಸ್ ಆಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಈ ಕೂಡಲೇ ಆನ್ಲೈನ್ (Online) ಮೂಲಕ ಅರ್ಜಿ ಹಾಕಿ.
ಹುದ್ದೆಗಳು:
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್
ಸೀನಿಯರ್ ಮ್ಯಾನೇಜರ್/ ಚೀಫ್ ಮ್ಯಾನೇಜರ್
ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್
ಅಸಿಸ್ಟೆಂಟ್ ಮ್ಯಾನೇಜರ್
ಸಂಸ್ಥೆ | ಸಿಟಿ ಯೂನಿಯನ್ ಬ್ಯಾಂಕ್ |
ಹುದ್ದೆ | ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ |
ವಿದ್ಯಾರ್ಹತೆ | ಪದವಿ, ಸ್ನಾತಕೋತ್ತರ ಪದವಿ |
ವೇತನ | ನಿಗದಿಪಡಿಸಿಲ್ಲ |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 30, 2023 |
ಇದನ್ನೂ ಓದಿ:AAI Recruitment 2023: ಕರ್ನಾಟಕದಲ್ಲಿ ಏರ್ಪೋರ್ಟ್ ಜಾಬ್ ಖಾಲಿ ಇದೆ- ತಿಂಗಳಿಗೆ 75 ಸಾವಿರ ಸಂಬಳ
ವಯೋಮಿತಿ:
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 40 ರಿಂದ 50 ವರ್ಷ
ಸೀನಿಯರ್ ಮ್ಯಾನೇಜರ್/ ಚೀಫ್ ಮ್ಯಾನೇಜರ್- 35 ರಿಂದ 50 ವರ್ಷ
ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್- 25ರಿಂದ 40 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್- 24ರಿಂದ 30 ವರ್ಷ
ಅಭ್ಯರ್ಥಿಗಳಿಗೆ ಮೀಸಲಾತಿ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಜೊತೆಗೆ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ವೇತನ:
ನಿಗದಿಪಡಿಸಿಲ್ಲ,
ಇದನ್ನೂ ಓದಿ: KFD Recruitment 2023: ಫಾರೆಸ್ಟ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಸಿಗಬೇಕಾ? ನಾಳೆಯೊಳಗೆ ಅಪ್ಲೈ ಮಾಡಿ
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 30, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ