Canara Bank Recruitment 2023: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆದ ಕೆನರಾ ಬ್ಯಾಂಕ್ನಲ್ಲಿ (Canara Bank) ಅನೇಕ ಗೋಲ್ಡ್ ಅಪ್ರೈಸರ್ (Gold Appraiser) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 30, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಜಯನಗರದಲ್ಲಿ (Vijayanagara) ಪೋಸ್ಟಿಂಗ್ ನೀಡಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗದ ಹುಡುಕಾಟದಲ್ಲಿದ್ದರೆ ಈಗಲೇ ಅರ್ಜಿ ಹಾಕಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೆನರಾ ಬ್ಯಾಂಕ್ |
ಹುದ್ದೆ | ಗೋಲ್ಡ್ ಅಪ್ರೈಸರ್ |
ವಿದ್ಯಾರ್ಹತೆ | 10ನೇ ತರಗತಿ |
ವೇತನ | ನಿಗದಿಪಡಿಸಿಲ್ಲ |
ಉದ್ಯೋಗದ ಸ್ಥಳ | ವಿಜಯನಗರ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 30, 2023 |
ಇದನ್ನೂ ಓದಿ: NWDA Recruitment 2023: ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯಲ್ಲಿ 40 ಹುದ್ದೆಗಳಿಗೆ ಅರ್ಜಿ ಹಾಕಿ
ಅನುಭವ:
ಅಭ್ಯರ್ಥಿಗಳು ಚಿನ್ನಾಭರಣ ನಿರ್ವಹಣೆಯಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 30, 2023
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಪ್ರಾದೇಶಿಕ ವ್ಯವಸ್ಥಾಪಕರು
ಪ್ರಾದೇಶಿಕ ಕಚೇರಿ
ಕೆನರಾ ಬ್ಯಾಂಕ್
ದಾವಣಗೆರೆ
ಇದನ್ನೂ ಓದಿ: BMRCL Recruitment 2023: ಬೆಂಗಳೂರು ಮೆಟ್ರೋ ನೇಮಕಾತಿ- ಅರ್ಜಿ ಹಾಕೋಕೆ ಇವತ್ತೇ ಲಾಸ್ಟ್ ಡೇಟ್
ಅಗತ್ಯ ದಾಖಲಾತಿಗಳು:
ಪ್ರತಿಷ್ಠಿತ ಖ್ಯಾತಿ ಇರುವ ಇಬ್ಬರು ವ್ಯಕ್ತಿಗಳಿಂದ ಪ್ರಮಾಣಿಕರಿಸಿರಬೇಕು.
ಪೊಲೀಸ್ ಪರಿಶೀಲನಾ ವರದಿ
ಶೈಕ್ಷಣಿಕ ವಿದ್ಯಾರ್ಹತೆ ಸಾಬೀತುಪಡಿಸುವ ದಾಖಲೆಗಳು
ಹಿಂದೆ ಕೆಲಸ ಮಾಡಿರುವ ಅನುಭವ ಪ್ರಮಾಣ ಪತ್ರ
ಅಭ್ಯರ್ಥಿಯ ಹಾಗೂ ಅಭ್ಯರ್ಥಿಯ ಇಬ್ಬರು ಹತ್ತಿರ ಸಂಬಂಧಿಗಳ KYC ವಿವರಗಳು
ಜಿಎಸ್ಟಿಎನ್ ಪ್ರತಿ (ಇದ್ದಲ್ಲಿ)
2 ಪಾಸ್ಪೋರ್ಟ್ ಸೈಜಿನ ಫೋಟೋ
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬ್ರಾಂಚ್ ಇನ್-ಚಾರ್ಚ್ ಕಾಂಟ್ಯಾಕ್ಟ್ ನಂಬರ್ಗಳಿಗೆ ಸಂಪರ್ಕಿಸಬಹುದು.
ಗುಂಡಗತ್ತಿ ಬ್ರಾಂಚ್- 9880709097
ಸಾಸ್ವಿಹಳ್ಳಿ ಬ್ರಾಂಚ್- 9901318065
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ