Bank of Maharashtra Recruitment 2022: ಬ್ಯಾಂಕ್ ಆಫ್ ಮಹಾರಾಷ್ಟ್ರ(Bank of Maharashtra) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 314 ಅಪ್ರೆಂಟಿಸ್(Apprentice) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಬ್ಯಾಂಕಿಂಗ್ ಕ್ಷೇತ್ರ(Banking Sector)ದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಹಾಕಲು ಡಿಸೆಂಬರ್ 23, 2022 ಕೊನೆಯ ದಿನವಾಗಿದೆ.
ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅಪ್ಲೈ ಮಾಡಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಬ್ಯಾಂಕ್ ಆಫ್ ಮಹಾರಾಷ್ಟ್ರ |
ಹುದ್ದೆ | ಅಪ್ರೆಂಟಿಸ್ |
ಒಟ್ಟು ಹುದ್ದೆ | 314 |
ವೇತನ | ತಿಂಗಳಿಗೆ 9000 ರೂ. |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಆಂಧ್ರ ಪ್ರದೇಶ- 10
ಚಂಡೀಗರ್- 2
ಛತ್ತೀಸ್ಗಢ-2
ದೆಹಲಿ-10
ಗೋವಾ-4
ಗುಜರಾತ್-6
ಕರ್ನಾಟಕ-8
ಮಧ್ಯ ಪ್ರದೇಶ -22
ಮಹಾರಾಷ್ಟ್ರ- 207
ಪಂಜಾಬ್-5
ರಾಜಸ್ಥಾನ-3
ತಮಿಳುನಾಡು-10
ಉತ್ತರ ಪ್ರದೇಶ- 20
ಪಶ್ಚಿಮ ಬಂಗಾಳ-5
ವಿದ್ಯಾರ್ಹತೆ:
ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ, ಪದವಿ ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: Jobs: ಬಳ್ಳಾರಿಯಲ್ಲಿ ಲೈಬ್ರರಿ ಸೂಪರ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನ : ನಾಳೆಯೇ ಕೊನೆ ದಿನ
ವಯೋಮಿತಿ:
ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 31, 2022ಕ್ಕೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ(NCL) ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PWD (UR/EWS) ಅಭ್ಯರ್ಥಿಗಳು- 10 ವರ್ಷ
PWD (OBC) ಅಭ್ಯರ್ಥಿಗಳು- 13 ವರ್ಷ
PWD (SC/ST) ಅಭ್ಯರ್ಥಿಗಳು- 15 ವರ್ಷ
ಅರ್ಜಿ ಶುಲ್ಕ:
PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
SC/ST ಅಭ್ಯರ್ಥಿಗಳು- 100 ರೂ.
UR/EWS/OBC ಅಭ್ಯರ್ಥಿಗಳು-150 ರೂ.
ಪಾವತಿಸುವ ಬಗೆ- ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 23/12/2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ