BOB Recruitment 2023: ಬ್ಯಾಂಕ್ ಆಫ್ ಬರೋಡಾ(Bank of Baroda) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಒಟ್ಟು 9 ಡೆಪ್ಯುಟಿ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್, ಮುಖ್ಯಸ್ಥರ (Chief) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 2, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಹಾಕಬೇಕು. ಉದ್ಯೋಗಾಂಕ್ಷಿಗಳು ತಡಮಾಡದೇ ಈ ಕೂಡಲೇ ಅಪ್ಲಿಕೇಶನ್ ಹಾಕಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಬ್ಯಾಂಕ್ ಆಫ್ ಬರೋಡಾ |
ಹುದ್ದೆ | ಡೆಪ್ಯುಟಿ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್, ಮುಖ್ಯಸ್ಥ |
ಒಟ್ಟು ಹುದ್ದೆ | 9 |
ವಿದ್ಯಾರ್ಹತೆ | ಪದವಿ, ಸ್ನಾತಕೋತ್ತರ ಪದವಿ |
ವೇತನ | 18 ಲಕ್ಷ (ವಾರ್ಷಿಕ ಪ್ಯಾಕೇಜ್) |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 2, 2023 (ನಾಳೆ) |
ಇದನ್ನೂ ಓದಿ: Kanara College Society Kumta Recruitment 2023: ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಇವತ್ತೇ ಅರ್ಜಿ ಹಾಕಿ
ವಿದ್ಯಾರ್ಹತೆ:
ಡೆಪ್ಯುಟಿ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ (DDBA)- ಪದವಿ
ಡಿಫೆನ್ಸ್ ರಿಲೇಶನ್ಶಿಪ್ ಮ್ಯಾನೇಜರ್ (DRM)- ಪದವಿ
ಚೀಫ್- HR ಅನಾಲಿಟಿಕ್ಸ್- ಪದವಿ, ಸ್ನಾತಕೋತ್ತರ ಪದವಿ
ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್- ಪದವಿ, ಸ್ನಾತಕೋತ್ತರ ಪದವಿ
ವಯೋಮಿತಿ:
ಡೆಪ್ಯುಟಿ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ (DDBA)- 57 ವರ್ಷ
ಡಿಫೆನ್ಸ್ ರಿಲೇಶನ್ಶಿಪ್ ಮ್ಯಾನೇಜರ್ (DRM)- 54 ವರ್ಷ
ಚೀಫ್- HR ಅನಾಲಿಟಿಕ್ಸ್- 29 ರಿಂದ 45 ವರ್ಷ
ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್- 27 ರಿಂದ 40 ವರ್ಷ
ವೇತನ:
ಡೆಪ್ಯುಟಿ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ (DDBA)- 18 ಲಕ್ಷ (ವಾರ್ಷಿಕ ಪ್ಯಾಕೇಜ್)
ಡಿಫೆನ್ಸ್ ರಿಲೇಶನ್ಶಿಪ್ ಮ್ಯಾನೇಜರ್ (DRM)- 9 ಲಕ್ಷ (ವಾರ್ಷಿಕ ಪ್ಯಾಕೇಜ್)
ಚೀಫ್- HR ಅನಾಲಿಟಿಕ್ಸ್- ನಿಗದಿಪಡಿಸಿಲ್ಲ
ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್- ನಿಗದಿಪಡಿಸಿಲ್ಲ
ಇದನ್ನೂ ಓದಿ: Ambika Vidyalaya Recruitment 2023: ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ:
ಚೀಫ್- HR ಅನಾಲಿಟಿಕ್ಸ್, ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್ ಹುದ್ದೆಗಳಿಗೆ
SC/ST/PWD & ಮಹಿಳಾ ಅಭ್ಯರ್ಥಿಗಳು- 100 ರೂ.
ಸಾಮಾನ್ಯ/EWS & OBC ಅಭ್ಯರ್ಥಿಗಳು- 600 ರೂ.
ಪಾವತಿಸುವ ವಿಧಾನ- ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಗ್ರೂಪ್ ಡಿಸ್ಕಶನ್
ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್ಗಳ ಮೇಲೆ ಕ್ಲಿಕ್ ಮಾಡಿ.
DDBA, DRM ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/02/2023
ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಮಾರ್ಚ್ 2, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ