• ಹೋಂ
 • »
 • ನ್ಯೂಸ್
 • »
 • Jobs
 • »
 • Indian Bank Jobs: ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಉದ್ಯೋಗ ಬೇಕಾ? ಇಲ್ಲಿ ಅಪ್ಲೈ ಮಾಡಿ

Indian Bank Jobs: ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಉದ್ಯೋಗ ಬೇಕಾ? ಇಲ್ಲಿ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೇ ಮೇ 29, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆಫ್​​ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

Indian Bank Recruitment 2023: ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಉದ್ಯೋಗ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಇಂಡಿಯನ್ ಬ್ಯಾಂಕ್(Indian Bank ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 18 ಪ್ರಾಡಕ್ಟ್​ ಮ್ಯಾನೇಜರ್, ಟೀಮ್ ಲೀಡ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಮೇ 29, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆಫ್​​ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಬೆಂಗಳೂರಿನಲ್ಲಿಯೂ ಪೋಸ್ಟಿಂಗ್ ಖಾಲಿ ಇವೆ. ಆಸಕ್ತರು ತಡಮಾಡದೇ ಬೇಗನೇ ಅಪ್ಲೈ ಮಾಡಿ.


ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಇಂಡಿಯನ್ ಬ್ಯಾಂಕ್
ಹುದ್ದೆಪ್ರಾಡಕ್ಟ್​ ಮ್ಯಾನೇಜರ್, ಟೀಮ್ ಲೀಡ್
ಒಟ್ಟು ಹುದ್ದೆ18
ವಿದ್ಯಾರ್ಹತೆಎಂ.ಟೆಕ್, ಎಂಬಿಎ
ವೇತನನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಮೇ 29, 2023

ಹುದ್ದೆಯ ಮಾಹಿತಿ:
ಪ್ರಾಡಕ್ಟ್​ ಮ್ಯಾನೇಜರ್- 5
ಟೀಮ್ ಲೀಡ್- 7
ಚಾರ್ಟರ್ಡ್​ ಅಕೌಂಟೆಂಟ್ಸ್​- 6
ವಿದ್ಯಾರ್ಹತೆ:
ಪ್ರಾಡಕ್ಟ್​ ಮ್ಯಾನೇಜರ್- ಸಿಎ, ಬಿಇ/ ಬಿ.ಟೆಕ್, ಎಂ.ಎಸ್ಸಿ, ಎಂಸಿಎ
ಟೀಮ್ ಲೀಡ್- ಎಂ.ಟೆಕ್, ಎಂಬಿಎ
ಚಾರ್ಟರ್ಡ್​ ಅಕೌಂಟೆಂಟ್ಸ್​- ಸಿಎ


ಇದನ್ನೂ ಓದಿ:Job Search: ತಿಂಗಳಿಗೆ 45,000 ಸಂಬಳ- ಕೃಷಿ ವಿಜ್ಞಾನ ಯೂನಿವರ್ಸಿಟಿಯಲ್ಲಿ ಕೆಲಸ ಖಾಲಿ ಇದೆ


ವಯೋಮಿತಿ:
ಇಂಡಿಯನ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 1, 2023ಕ್ಕೆ ಕನಿಷ್ಠ 25 ವರ್ಷ & ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಉದ್ಯೋಗದ ಸ್ಥಳ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚೆನ್ನೈ, ಮುಂಬೈ, ಲಕ್ನೋ & ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ವೇತನ:
ನಿಗದಿಪಡಿಸಿಲ್ಲ. ಆದರೆ ಕಾರ್ಯಾನುಭವ & ಕ್ಷಮತೆ ಆಧಾರದ ಮೇಲೆ ಇಂತಿಷ್ಟು ವೇತನ ಎಂದು ಕೊಡಲಾಗುತ್ತದೆ.


ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಪಾವತಿಸುವ ಬಗೆ- ಆನ್​ಲೈನ್


ಆಯ್ಕೆ ಪ್ರಕ್ರಿಯೆ:
ಕ್ವಾಲಿಫಿಕೇಶನ್
ಅನುಭವ
ಸಂದರ್ಶನ


ಇದನ್ನೂ ಓದಿ:Job Opportunity: ನಬಾರ್ಡ್​​ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ- ಈಗಲೇ ಅರ್ಜಿ ಹಾಕಿ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಮುಖ್ಯ ಜನರಲ್ ಮ್ಯಾನೇಜರ್ (CDO & CLO)
ಇಂಡಿಯನ್ ಬ್ಯಾಂಕ್ ಕಾರ್ಪೊರೇಟ್ ಕಚೇರಿ
HRM ಇಲಾಖೆ
ನೇಮಕಾತಿ ವಿಭಾಗ 254-260
ಅವ್ವೈ ಷಣ್ಮುಗಂ ಸಲೈ
ರಾಯಪೆಟ್ಟಾ
ಚೆನ್ನೈ
ಪಿನ್ - 600014
ತಮಿಳುನಾಡು


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 29, 2023

First published: