Bangalore University: ಬೆಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾ ಸಕ ಹುದ್ದೆಗೆ ಅರ್ಜಿ ಆಹ್ವಾನ

ವಿವಿಯಲ್ಲಿ ರಾಜಕೀಯ ವಿಜ್ಞಾನ, ಸಮಾಜ ಶಾಸ್ತ್ರ, ಕಾನೂನು, ಕನ್ನಡ, ಇಂಗ್ಲೀಷ್​ ಮತ್ತು ಅರ್ಥಶಾಸ್ತ್ರ ವಿಭಾಗದಲ್ಲಿನ ಅರೆಕಾಲಿಕ ಮತ್ತು ಪೂರ್ಣ ಪ್ರಮಾಣದ ಅತಿಥಿ ಉಪನ್ಯಾಸಕರಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ವಿವಿ

ಬೆಂಗಳೂರು ವಿವಿ

  • Share this:
    ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ (Bangalore University)  ಅರೆಕಾಲಿಕ ಹಾಗೂ ಪೂರ್ಣ ಪ್ರಮಾಣದ ಅತಿಥಿ ಉಪನ್ಯಾಸಕರ  (Guest Faculties )ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವುದೇ ಮಾನ್ಯತೆ ಪಡೆದ ವಿವಿಯಿಂದ ಸ್ನಾತಕೋತ್ತರ ಪದವಿ (Master Degree) ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್​ 27ರ ಒಳಗೆ ಅರ್ಜಿಯನ್ನು ದಾಖಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುವುದು.

    ಯಾವ ವಿಭಾಗದಲ್ಲಿ ಹುದ್ದೆ ಖಾಲಿ
    ಬೆಂಗಳೂರು ವಿವಿಯಲ್ಲಿ ರಾಜಕೀಯ ವಿಜ್ಞಾನ (political Science), ಸಮಾಜ ಶಾಸ್ತ್ರ (sociology) , ಕಾನೂನು (Law), ಕನ್ನಡ (Kannada), ಇಂಗ್ಲೀಷ್ (English)​ ಮತ್ತು ಅರ್ಥಶಾಸ್ತ್ರ (Econamics) ವಿಭಾಗದಲ್ಲಿನ ಅರೆಕಾಲಿಕ ಮತ್ತು ಪೂರ್ಣ ಪ್ರಮಾಣದ ಅತಿಥಿ ಉಪನ್ಯಾಸಕರಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಪ್ರಸಕ್ತ ಸಾಲಿನ 2021 ಮತ್ತು 22 ನೇ ಶೈಕ್ಷಣಿಕ ವರ್ಷಕ್ಕೆ ನೇಮಕಾತಿ ನಡೆಸಲಾಗುವುದು. ಆಸಕ್ತ ವಿದ್ಯಾರ್ಥಿಗಳು ಬೆಂಗಳೂರು ವಿವಿಯ ಅಧಿಕೃತ ವೆಬ್​ತಾಣದಲ್ಲಿ ಅರ್ಜಿ ಡೌನ್​ಲೋಡ್​ ಮಾಡಿಕೊಂಡು ಸಲ್ಲಿಸಬಹುದಾಗಿದೆ.

    ಅರ್ಜಿ ಸಲ್ಲಿಸುವ ವಿಧಾನ
    ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಭರ್ತಿ ಮಾಡಿ ಕಳುಹಿಸಬೇಕಿದೆ. ಬೆಂಗಳೂರು ವಿವಿಯ ಅಧಿಕೃತ ಜಾಲತಾಣ eng.bangaloreuniversity.ac.ink ಕ್ಕೆ ಭೇಟಿ ನೀಡಿ ಅರ್ಜಿ ಪಡೆಯಬಹುದು. ಈ ಅರ್ಜಿ ಭರ್ತಿ ಮಾಡಿದ ಬಳಿಕ ಅದನ್ನು ಪ್ರಿನ್ಸಿಪಲ್​, ಕಾನೂನು ವಿವಿ ಕಾಲೇಜ್​, ಬೆಂಗಳೂರು ವಿವಿ, ಜ್ಞಾನ ಭಾರತಿ ಕ್ಯಾಂಪಸ್​, ಬೆಂಗಳೂರು 560056ಕ್ಕೆ ಕಳುಹಿಸಬೇಕು. ಸೆ, 27ಕ್ಕೆ ಮೊದಲು ತಮ್ಮ ಅರ್ಜಿ ತಲುವುವಂತೆ ಅಭ್ಯರ್ಥಿಗಳು ನೋಡಿಕೊಳ್ಳಬೇಕು.

    ಅರ್ಜಿ ಸಲ್ಲಿಸುವ ಅಗತ್ಯವಾಗಿ ಗಮನಿಸಬೇಕಾದ ಅಂಶ
    ಅರ್ಜಿ ಡೌನ್​ ಲೋಡ್​ ಮಾಡಿಕೊಂಡ ತಕ್ಷಣ ಅದನ್ನು ಸರಿಯಾಗಿ ಅಭ್ಯರ್ಥಿಗಳು ಓದಬೇಕು.
    ಅದರಲ್ಲಿ ಕೇಳಿರುವ ಇ -ಮೇಲ್​​ ಐಡಿ, ಮೊಬೈಲ್​ ನಂಬರ್​ ಅನ್ನು ಸರಿಯಾಗಿ ದಾಖಲಿಸಬೇಕು. ಜೊತೆಗೆ ತಮ್ಮ ವಯಸ್ಸು, ಶಿಕ್ಷಣದ ಅಗತ್ಯ ದಾಖಲೆ ನೀಡಬೇಕು. ಜೊತೆಗೆ ತಮ್ಮ ಇತ್ತೀಚಿನ ಭಾವಚಿತ್ರ ಮತ್ತು ರೆಸ್ಯೂಮ್​ ಅನ್ನು ಕಳುಹಿಸಬೇಕು.

    ಇದನ್ನು ಓದಿ: UPSC, KAS, RRB ಸೇರಿದಂತೆ ಹಲವು ಪರೀಕ್ಷೆಗಳಿಗೆ ಸರ್ಕಾರದಿಂದಲೇ ತರಬೇತಿ; ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆ. 30

    ವಿಶೇಷ ಸೂಚನೆ
    ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಮೇಲ್ಕಂಡ ವಿಳಾಸಕ್ಕೆ ರಿಜಿಸ್ಟರ್​ ಪೋಸ್ಟ್​, ಸ್ಪೀಡ್​ ಪೋಸ್ಟ್​ ಅಥವಾ ಇನ್ನಿತರ ಸೇವೆ ಮೂಲಕ ಕಳುಹಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಇರುವುದಿಲ್ಲ.

    ಇದನ್ನು ಓದಿ: ಸೇನೆ ಸೇರಬೇಕು ಎಂಬ ಮಹಿಳೆಯರಿಗೆ Good News​: ಮೇನಲ್ಲಿ ನಡೆಯಲಿದೆ NDA Exam

    ವಯೋಮಿತಿ- ಸಂಬಳ
    ಬೆಂಗಳೂರು ವಿವಿ ನಿಯಮವಾಳಿಯ ವಯೋಮಿತಿಯಂತೆ ಆಯ್ಕೆ ನಡೆಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿ ನಿಯಮಾವಳಿಯಂತೆ ವೇತನವನ್ನು ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ

    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

    ಅತಿಥಿ ಉಪನ್ಯಾಸಕ ಕುರಿತು ಬೆಂಗಳೂರು ವಿವಿ ಹೊರಡಿಸಿರುವ ನೋಟಿಫೀಕಶನ್​ಗೆ ಇಲ್ಲಿ ಕ್ಲಿಕ್​ ಮಾಡಿ
    Published by:Seema R
    First published: