Job Alert: ಪದವಿ ಆಗಿದ್ರೆ ಖಾಸಗಿ ಕಂಪನಿಯಲ್ಲಿದೆ ಕೆಲಸ; CredR​ ನೀಡುತ್ತಿದೆ ಅವಕಾಶ

ಈಗಾಗಲೇ ಉಪಯೋಗಿಸಿದ ಬೈಕ್​ಗಳ ವಹಿವಾಟಿನಲ್ಲಿ ಬೆಂಗಳೂರು ಸೇರಿದಂತೆ ದೇಶದ ನಾನಾ ನಗರದಲ್ಲಿ ಕ್ರೇಡ್​ಆರ್ (CredR)​ ಹೆಸರು ಮಾಡಿದೆ.

CredR​

CredR​

  • Share this:
    ಪದವಿ ಆಗಿ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂಬ ನಿಮ್ಮ ಕನಸಿಗೆ ಇದೀಗ ಕ್ರೇಡ್​​ಆರ್​ ಸಂಸ್ಥೆ ಅವಕಾಶ ನೀಡಿದೆ. ಆಟೋ ಮೊಬೈಲ್​ ಕ್ಷೇತ್ರದ ಬಗ್ಗೆ ಕೊಂಚ ಜ್ಞಾನವನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಉಪಯೋಗಿಸಿದ ಬೈಕ್​ಗಳ ವಹಿವಾಟಿನಲ್ಲಿ ಬೆಂಗಳೂರು ಸೇರಿದಂತೆ ದೇಶದ ನಾನಾ ನಗರದಲ್ಲಿ ಕ್ರೇಡ್​ಆರ್ (CredR)​ ಹೆಸರು ಮಾಡಿದೆ. ಈ ಸಂಸ್ಥೆಯಲ್ಲಿ ಇದೀಗ ಎಕ್ಸ್​ಚೆಂಜ್​ ಎಕ್ಸ್​ಪರ್ಟ್ (Exchange Expert)​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಇಮೇಲ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

    ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಕೆಳಗಿನಂತಿವೆ.




    ಸಂಸ್ಥೆ: ಕ್ರೇಡ್​ಆರ್​​ (CredR)
    ಹುದ್ದೆ: ಎಕ್ಸ್​ಚೇಂಜ್​ ಎಕ್ಸ್​ಪರ್ಟ್​​
    ಒಟ್ಟು ಹುದ್ದೆ: ನಿಗದಿಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳ: ಅಹ್ಮದಾಬಾದ್​, ದೆಹಲಿ, ಹೈದ್ರಾಬಾದ್​, ಜೈಪುರ್​, ಪುಣೆ
    ವೇತನ: ಕಂಪನಿಯ ನಿಯಮ ಅನುಸಾರ















    ಹುದ್ದೆವಿಭಾಗವಿದ್ಯಾರ್ಹತೆಅನುಭವ
    ಎಕ್ಸ್​ಚೇಂಜ್​ ಎಕ್ಸಿಕ್ಯುಟಿವ್​​​​​ಪೂರೈಕೆಯಾವುದೇ ವಿಷಯದಲ್ಲಿ ಪದವಿಸೇಲ್ಸ್​ನಲ್ಲಿ ಎರಡು ವರ್ಷದ ಅನುಭವ

    ಅರ್ಜಿ ಸಲ್ಲಿಕೆ ವಿಧಾನ: ಇಮೇಲ್​ ಮುಖಾಂತರ
    ಇಮೇಲ್​ ವಿಳಾಸ: hr@credr.com.
    ಅಧಿಕೃತ ವೆಬ್​ಸೈಟ್​: credr.com

    ಹುದ್ದೆಯ ಜವಾಬ್ದಾರಿ (Jobs Roles And Responsibility)
    ಆಟೋ ಮೊಬೈಲ್​ ಕ್ಷೇತ್ರದ ಬಗ್ಗೆ ತಿಳಿದಿರಬೇಕು.
    ಅಭ್ಯರ್ಥಿಯು ಮೋಟರ್​ ವಾಹನಗಳ ವಿನಿಮಯ ನಡೆಸುವ ಜೊತೆಗೆ ಅಗತ್ಯ ದಾಖಲೆ ಮತ್ತು ಸ್ವತುಗಳನ್ನು ಪರಿಶೀಲಸಬೇಕು.
    ಗ್ರಾಹಕರಿಂದ ಸಂಗ್ರಹಿಸಿದ ದಾಖಲಾತಿಗಳನ್ನು ಪರಿಶೀಲನೆ ಹಾಗೂ ಹಸ್ತಾಂತರ
    ಮಾರ್ಕೆಟಿಂಗ್​ ಚಟುವಟಿಕೆಯಲ್ಲಿ ಭಾಗಿಯಾಗಬೇಕು.
    ಸ್ಥಳೀಯ ಭಾಷೆಯ ಅರಿವಿರಬೇಕು.
    ಸೇಲ್ಸ್​ ಪರಿಕರಗಳ ಅಗತ್ಯ ಮಾಹಿತಿ ಹೊಂದಿರಬೇಕು.

    ಇದನ್ನು ಓದಿ: ಕೆಇಎನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಲ್ಲಿದೆ ವಿವರ

    ವಿಶೇಷ ಸೂಚನೆ (Special Instruction)
    ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಹುದ್ದೆ ಹೆಸರು- ಸ್ಥಳದ ಹೆಸರಿನ ಬಗ್ಗೆ ಸ್ಪಷ್ಟವಾಗಿ ನಮೂದಿಸಿ, ನವೀಕರಿಸಿ ರೆಸ್ಯೂಮ್​ ಅನ್ನು ಮೇಲಿನ ಇಮೇಲ್​ ವಿಳಾಸಕ್ಕೆ ಸಲ್ಲಿಸಬೇಕು.

    ಬೆಂಗಳೂರು ಸೇರಿದಂತೆ ಮೇಲೆ ಉಲ್ಲೇಖಿಸಿದ ನಗರಗಳಲ್ಲೂ ಈ ಹುದ್ದೆಗಳು ಖಾಲಿ ಇದ್ದು, ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ನೇರ ಸಂದರ್ಶನದ ಮೂಲಕ ಹುದ್ದೆ ಆಯ್ಕೆ ನಡೆಯಲಿದೆ.

    ಇದನ್ನು ಓದಿ: ಆಟೋ ಮೊಬೈಲ್​ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇದ್ರೆ; ಇಲ್ಲಿದೆ ಭರಪೂರ ಅವಕಾಶ

    ಅರ್ಜಿ ಸಲ್ಲಿಕೆ ವಿಧಾನ (How To Apply)

    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
    Published by:Seema R
    First published: