Jobs In Bangalore: ಬೆಂಗಳೂರಿನ ಕ್ರೇಡ್​ಆರ್​ನಲ್ಲಿದೆ ವಿವಿಧ ಉದ್ಯೋಗ; ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಟೋ ಮೊಬೈಲ್​ ಕ್ಷೇತ್ರದ ಬಗ್ಗೆ ಜ್ಞಾನ ಹೊಂದಿರುವುದು ಕಡ್ಡಾಯವಾಗಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ದ್ವಿಚಕ್ರ ವಾಹನಗಳ ಮಾರುವಿಕೆ ಮತ್ತು ಕೊಳ್ಳುವಿಕೆಗೆ ಹೆಸರಾಗಿರುವ ಕ್ರೇಡ್​ಆರ್ (CredR)​ ಸಂಸ್ಥೆ ಇದೀಗ ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಸಂಸ್ಥೆಯ ವಿವಿಧ ವಿಭಾಗದಲ್ಲಿ ಖಾಲಿ ಇರುವ ಅನೇಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಪದವಿ, ಎಸ್ಎಸ್​ಎಲ್​ಸಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಇಮೇಲ್​ ಮೂಲಕ ಸಲ್ಲಿಸಬಹುದಾಗಿದೆ.

    ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಟೋ ಮೊಬೈಲ್​ ಕ್ಷೇತ್ರದ ಬಗ್ಗೆ ಜ್ಞಾನ ಹೊಂದಿರುವುದು ಕಡ್ಡಾಯವಾಗಿದೆ. ಈ ಹುದ್ದೆ ನೇಮಕಾತಿ ಅರ್ಜಿ ಸಲ್ಲಿಕೆ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರೆ ವಿವರ ಈ ಕೆಳಗಿನಂತೆ ಇದೆ.

    ಸಂಸ್ಥೆ:  CredR
    ಹುದ್ದೆ: ಆಟೋ ಎಕ್ಸ್​ಪರ್ಟ್​, ಎಕ್ಸ್​ಚೇಂಜ್​ ಎಕ್ಸ್​ಪರ್ಟ್​, ಮೆಕಾನಿಕ್​, ಲಾಜಿಸ್ಟಿಕ್​​​ ಎಕ್ಸ್​ಪರ್ಟ್
    ಒಟ್ಟು ಹುದ್ದೆ: ನಿಗದಿಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳ: ಬೆಂಗಳೂರು​
    ವೇತನ: ಕಂಪನಿಯ ನಿಯಮ ಅನುಸಾರ























    ಹುದ್ದೆವಿದ್ಯಾರ್ಹತೆ
    ಆಟೋ ಎಕ್ಸ್​ಪರ್ಟ್​ಎಸ್​ಎಸ್​ಎಲ್​ಸಿ
    ಎಕ್ಸ್​ಚೇಜ್​ ಎಕ್ಸ್​ಪರ್ಟ್ಯಾವುದೇ ವಿಷಯದಲ್ಲಿ ಪದವಿ
    ಲಾಜಿಸ್ಟಿಕ್​ ಎಕ್ಸ್​ಪರ್ಟ್ಎಸ್​ಎಸ್​ಎಲ್​ಸಿ
    ಮೆಕಾನಿಕ್ಎಸ್​ಎಸ್​ಎಲ್​ಸಿ

    ಹುದ್ದೆಯ ಜವಾಬ್ದಾರಿ (Jobs Roles And Responsibility)
    -ಅಭ್ಯರ್ಥಿಗಳು ಆಟೋ ಮೊಬೈಲ್​​ ಕ್ಷೇತ್ರದ ಬಗ್ಗೆ ಅಗತ್ಯ ಜ್ಞಾನವನ್ನು ಹೊಂದಿರಬೇಕು.
    -ಉತ್ತಮ ಕೌಶಲ್ಯ ಮತ್ತು ಸಂವಹನವನ್ನು ಹೊಂದಿರಬೇಕು.
    -ಬೈಕ್​ ಕಾರ್ಯಾಚರಣೆಯ ಸಮಸ್ಯೆ ಬಗ್ಗೆ ಅಲ್ಪ ಅರಿವಿರಬೇಕು.
    -ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ಕೆಲಸವನ್ನು ಪೂರೈಸಬೇಕು.
    -ಅಭ್ಯರ್ಥಿಗಳು ಗ್ರಾಹಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು.

    ಇದನ್ನು ಓದಿ: ಉಡುಪಿ ಜಿಲ್ಲೆಯಲ್ಲಿ 25 ಅಂಗನವಾಡಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

    ಅರ್ಜಿ ಸಲ್ಲಿಕೆ ವಿಧಾನ: ಇಮೇಲ್​ ಮುಖಾಂತರ
    ಇಮೇಲ್​ ವಿಳಾಸ: hr@credr.com
    ಅಧಿಕೃತ ವೆಬ್​ಸೈಟ್​: credr.com

    ವಿಶೇಷ ಸೂಚನೆ (Special Instruction)
    ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಹುದ್ದೆ ಹೆಸರು- ಸ್ಥಳದ ಹೆಸರಿನ ಬಗ್ಗೆ ಸ್ಪಷ್ಟವಾಗಿ ನಮೂದಿಸಿ, ನವೀಕರಿಸಿ ರೆಸ್ಯೂಮ್​ ಅನ್ನು ಮೇಲಿನ ಇಮೇಲ್​ ವಿಳಾಸಕ್ಕೆ ಸಲ್ಲಿಸಬೇಕು.

    ಇದನ್ನು ಓದಿ: ದಾವಣೆಗೆರೆಯಲ್ಲಿ 82 ಅಂಗನವಾಡಿ ಕಾರ್ಯಕರ್ತರ ಹುದ್ದೆ; ಜು. 29 ಅರ್ಜಿ ಸಲ್ಲಿಕೆಗೆ ಕಡೆಯ ದಿನ

    ಅರ್ಜಿ ಸಲ್ಲಿಕೆ ವಿಧಾನ (How To Apply)

    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
    Published by:Seema R
    First published: