• Home
  • »
  • News
  • »
  • jobs
  • »
  • Jobs in Bangalore: ಮೆಕ್ಯಾನಿಕ್​ ಕೆಲಸ ಗೊತ್ತಿದ್ರೆ ಬೆಂಗಳೂರಿನ ಕ್ರೇಡ್​​ಆರ್ ​ಸಂಸ್ಥೆಯಲ್ಲಿದೆ ಉದ್ಯೋಗ; ಬೇಗ ಅರ್ಜಿ ಸಲ್ಲಿಸಿ

Jobs in Bangalore: ಮೆಕ್ಯಾನಿಕ್​ ಕೆಲಸ ಗೊತ್ತಿದ್ರೆ ಬೆಂಗಳೂರಿನ ಕ್ರೇಡ್​​ಆರ್ ​ಸಂಸ್ಥೆಯಲ್ಲಿದೆ ಉದ್ಯೋಗ; ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

ಮೋಟರ್​ ಬೈಕ್​ಗಳ ಕಾರ್ಯಾಚರಣೆ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಕೌಶಲ್ಯದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.

  • Share this:

    ಮೋಟರ್​ ಬೈಕ್​ಗಳ ಮಾರಾಟ ಮತ್ತು ಕೊಳ್ಳುವಿಕೆಯ ಜನಪ್ರಿಯ ಸಂಸ್ಥೆಯಾಗಿರುವ ಕ್ರೇಡ್​​ಆರ್ (CredR)​ ಇದೀಗ ಉದ್ಯೋಗ ನೇಮಕಾತಿಗೆ ಮುಂದಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಮೆಕಾನಿಕ್ (Mechanic)​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಮೆಕಾನಿಕ್​ ಆಗಿ ಕಾರ್ಯ ನಿರ್ವಹಿಸಿ, ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂಬ ಇಚ್ಛೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ.


    ಈಗಾಗಲೇ ಮೆಕಾನಿಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮೋಟರ್​ ಬೈಕ್​ಗಳ ಕಾರ್ಯಾಚರಣೆ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಕೌಶಲ್ಯದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.

    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆCredR
    ಹುದ್ದೆಮೆಕಾನಿಕ್​​
    ಒಟ್ಟು ಹುದ್ದೆನಿಗದಿಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳಬೆಂಗಳೂರು
    ವೇತನಕಂಪನಿಯ ನಿಯಮ ಅನುಸಾರ

    ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು 10ನೇ ತರಗತಿ ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
    ಟ್ರೇಡ್​ ಸ್ಕೂಲ್​ ಅಥವಾ ಮೆಕಾನಿಕ್​ ಶಿಕ್ಷಣ ಕುರಿತ ಔಪಚಾರಿಕ ಶಿಕ್ಷಣ ಪಡೆದ ಸಂಸ್ಥೆಯ ಸರ್ಟಿಫಿಕೆಟ್​ ಇದ್ದವರಿಗೆ ಆದ್ಯತೆ.


    ಹುದ್ದೆಯ ಜವಾಬ್ದಾರಿ (Jobs Roles And Responsibility)
    -ಅಭ್ಯರ್ಥಿಗಳು ಮೋಟರ್​ಸೈಕಲ್​ ಸರ್ವೀಸ್​ ಟೆಕ್ನಿಕ್​ ಬಗ್ಗೆ ತಿಳಿದಿರಬೇಕು.
    -ಬೈಕ್​ಗಳ ಇಂಜಿನ್​ ಮತ್ತು ಟ್ರಾನ್ಸ್​ಮಿಷನ್​ ಸಿಸ್ಟಮ್​ಗಳನ್ನು ರಿಪೇರಿ ಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು.
    -ಬೈಕ್​ ಕಾರ್ಯಾಚರಣೆಯ ಬಗ್ಗೆ ಅಲ್ಪ ಅರಿವಿರಬೇಕು.
    -ಎರಡು ವರ್ಷಗಳ ಕಾಲ ಮೆಕಾನಿಕ್​ ಆಗಿ ಸೇವೆ ಸಲ್ಲಿಸಿದ ಅನುಭವ ಇರಬೇಕು
    -ವಾಹನದ ಸಮಸ್ಯೆಗಳ ಶೀಘ್ರದಲ್ಲೇ ಪರಿಹರಿಸುವ ಸಾಮರ್ಥ್ಯ ಇರಬೇಕು
    ಪ್ರತಿನಿತ್ಯ ಕ್ರೇಡ್​ಆರ್​ ಸರ್ವಿಸ್​ ಹೆಡ್​ಗೆ ಪ್ರತಿನಿತ್ಯದ ಸರ್ವಿಸ್​ ವರದಿಯನ್ನು ನೀಡಬೇಕು.
    -ಗ್ರಾಹಕರೊಂದಿಗೆ ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು.


    ಇದನ್ನು ಓದಿ: 10ನೇ ತರಗತಿ ಆಗಿದ್ರೆ CredRನಲ್ಲಿದೆ ಕೆಲಸ; ಹುದ್ದೆ ಸಂಪೂರ್ಣ ಮಾಹಿತಿ ಇಲ್ಲಿದೆ


    ಅರ್ಜಿ ಸಲ್ಲಿಕೆ ವಿಧಾನ: ಇಮೇಲ್​ ಮುಖಾಂತರ
    ಇಮೇಲ್​ ವಿಳಾಸ: hr@credr.com
    ಅಧಿಕೃತ ವೆಬ್​ಸೈಟ್​: credr.com


    ವಿಶೇಷ ಸೂಚನೆ (Special Instruction)
    ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಹುದ್ದೆ ಹೆಸರು- ಸ್ಥಳದ ಹೆಸರಿನ ಬಗ್ಗೆ ಸ್ಪಷ್ಟವಾಗಿ ನಮೂದಿಸಿ, ನವೀಕರಿಸಿ ರೆಸ್ಯೂಮ್​ ಅನ್ನು ಮೇಲಿನ ಇಮೇಲ್​ ವಿಳಾಸಕ್ಕೆ ಸಲ್ಲಿಸಬೇಕು.


    ಅರ್ಜಿ ಸಲ್ಲಿಕೆ ವಿಧಾನ (How To Apply)


    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.


    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು

    Published by:Seema R
    First published: