• Home
  • »
  • News
  • »
  • jobs
  • »
  • Bangalore Job Alert: ಎಸ್​ಇಒ ಎಕ್ಸ್​ಪರ್ಟ್​ ನೀವಾದ್ರೆ ಬೆಂಗಳೂರಿನ ಬೌನ್ಸ್​ನಲ್ಲಿದೆ ಕೆಲಸ; ಇಲ್ಲಿದೆ ವೇತನ ಸೇರಿದಂತೆ ಸಂಪೂರ್ಣ ಮಾಹಿತಿ

Bangalore Job Alert: ಎಸ್​ಇಒ ಎಕ್ಸ್​ಪರ್ಟ್​ ನೀವಾದ್ರೆ ಬೆಂಗಳೂರಿನ ಬೌನ್ಸ್​ನಲ್ಲಿದೆ ಕೆಲಸ; ಇಲ್ಲಿದೆ ವೇತನ ಸೇರಿದಂತೆ ಸಂಪೂರ್ಣ ಮಾಹಿತಿ

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

ಸಂಸ್ಥೆಯಲ್ಲಿ ಈಗಾಗಲೇ ಸಾವಿರಾರು ಮಂದಿ ಉದ್ಯೋಗ ಕಂಡು ಕೊಂಡಿದ್ದಾರೆ. ಇದೀಗ ಮತ್ತಷ್ಟು ಜನರಿಗೆ ಸಂಸ್ಥೆ ಉದ್ಯೋಗ ನೀಡಲು ಮುಂದಾಗಿದೆ.

  • Share this:

    ಡಿಜಿಟಲ್​ ಯುಗದಲ್ಲಿ ಎಲ್ಲರದ್ದು ಬ್ಯುಸಿ ಲೈಫ್​​. ಈ ಓಡಾಟದ ಜೀವನವನ್ನು ಮತ್ತಷ್ಟು ಸುಗಮ ಮಾಡಲು ಜೊತೆಯಾದ ಸಂಸ್ಥೆಯೇ ಈ ಬೌನ್ಸ್ (Bounce- Rental Bike Service)​. ಬೆಂಗಳೂರಿನ ಟ್ರಾಫಿಕ್​ ಕಿರಿಕಿರಿಯಲ್ಲಿ ಜನರು ನಿಗದಿತ ಸ್ಥಳಕ್ಕೆ ಕಡಿಮೆ ವೆಚ್ಚದಲ್ಲಿ ತಲುಪಲು ಆರಂಭವಾದ ಈ ಬಾಡಿಗೆ ಬೈಕ್​ ಸೇವೆ ಸಿಲಿಕಾನ್​ ಸಿಟಿ ಜನರ ಮನ ಗೆದ್ದಿದೆ. ಮನೆಯಲ್ಲೇ ಕುಳಿತು ಗ್ರಾಹಕರು ಈ ಬೌನ್ಸ್​ ಬೈಕ್​ಗಳನ್ನು (Bounce Bike) ಬುಕ್​ ಮಾಡಬಹುದಾಗಿದೆ. ಈ ಸಂಸ್ಥೆ ಅನೇಕ ಜನರ ವಾಹನ​ ಸಮಸ್ಯೆಗೆ ಮಾತ್ರವಲ್ಲದೇ, ಉದ್ಯೋಗದ (Job) ಸಮಸ್ಯೆಗೂ ಪರಿಹಾರ ನೀಡಿದೆ. ಸಂಸ್ಥೆಯಲ್ಲಿ ಈಗಾಗಲೇ ಸಾವಿರಾರು ಮಂದಿ ಉದ್ಯೋಗ ಕಂಡು ಕೊಂಡಿದ್ದಾರೆ. ಇದೀಗ ಮತ್ತಷ್ಟು ಜನರಿಗೆ ಸಂಸ್ಥೆ ಉದ್ಯೋಗ ನೀಡಲು ಮುಂದಾಗಿದೆ.


    ಸಂಸ್ಥೆಯಲ್ಲಿ ಇದೀಗ ಎಸ್​ಇಒ (SEO) ನೌಕರರ ಭರ್ತಿಗೆ ಮುಂದಾಗಲಾಗಿದೆ. ಗ್ರಾಹಕರ ಸ್ನೇಹಿಯಾಗಿ ಬೌನ್ಸ್​ ವೆಬ್​ಸೈಟ್​, ಆ್ಯಪ್​ಗಳ ಸೇವೆಗಳನ್ನು ಇನ್ನಷ್ಟು ಉತ್ಕೃಷ್ಟಗೊಳಿಸುವ ಸಲುವಾಗಿ ಈ ಹುದ್ದೆ ನೇಮಕಾತಿಗೆ ಮುಂದಾಗಲಾಗಿದೆ. ಯಾವುದೇ ಪದವಿ ಓದಿರುವ ಎಸ್​ಇಒ ಬಗ್ಗೆ ತಿಳುವಳಿಕೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.


    ಸಂಸ್ಥೆ : ಬೌನ್ಸ್​ (Bounce)
    ಹುದ್ದೆಗಳು: ಮ್ಯಾನೇಜರ್ ಎಸ್​ಇಒ (Manger- SEO)
    ಒಟ್ಟು ಹುದ್ದೆಗಳು: 1
    ಕಾರ್ಯ ನಿರ್ವಹಣೆ ಸ್ಥಳ: ಬೆಂಗಳೂರು
    ವೇತನ: ಕಂಪನಿ ನಿಯಮ ಅನುಸಾರ

    ಹುದ್ದೆವಿಭಾಗವಿದ್ಯಾರ್ಹತೆಸೇವಾನುಭವ
    ಮ್ಯಾನೇಜರ್ ಎಸ್​ಇಒಎಸ್​ಇಒ ಮಾರ್ಕೆಟಿಂಗ್ಯಾವುದೇ ವಿಷಯದಲ್ಲಿ ಪದವಿ3 ವರ್ಷಗಳ ಸೇವಾ ಅನುಭವ

    ಅರ್ಜಿ ಸಲ್ಲಿಕೆ ವಿಧಾನ (Apply Method)
    ಇಮೇಲ್​ ಮೂಲಕ


    ಇಮೇಲ್​ ವಿಳಾಸ: careers@bounceshare.com
    ಅಧಿಕೃತ ವೆಬ್‌ಸೈಟ್: bounceshare.com


    ಇದನ್ನು ಓದಿ: ಬೌನ್ಸ್​ ಸಂಸ್ಥೆಯಲ್ಲಿದೆ ಉದ್ಯೋಗಾವಕಾಶ; ಇಲ್ಲಿದೆ ಸಂಪೂರ್ಣ ಮಾಹಿತಿ


    ಹುದ್ದೆಯ ಜವಾಬ್ದಾರಿ (Job Roles and Responsibility)
    -ಅಪ್ಟಿಮೈಸೇಶನ್​, ಎಸ್​ಇಒ, ಡೇಟಾ ವಿಶ್ಲೇಷಣೆಯನ್ನು ನಡೆಸಬೇಕು.
    -ಎಸ್‌ಇಒ ವರದಿಗಳನ್ನು ಟ್ರ್ಯಾಕ್ ಮಾಡಿ, ವರದಿ ತಯಾರು ಮಾಡಬೇಕು.
    -ಡೊಮೇನ್‌ಗಳು ಸರಿಯಾದ ಇಂಡೆಕ್ಸಿಂಗ್, ಎಎಂಪಿ ವಾಲಿಡೇಷನ್​ ನಡೆಸಬೇಕು.
    -ಲಿಂಕ್​ಗಳ ಕಾರ್ಯಗತಗೊಳಿಸುವುದು, ಡೇಟಾ ಪಾಯಿಂಟಿಗ್​ ಸೇರಿದಂತೆ ಹಲವು ವಿಷಯಗಳ ಮೌಲ್ಯ ಮಾಪನ ನಡೆಸಬೇಕು.


    ವಿಶೇಷ ಸೂಚನೆ (Special Instructions)
    ಅಭ್ಯರ್ಥಿಗಳು ಕಂಪನಿ ಮತ್ತು ಹುದ್ದೆಯ ಜವಾಬ್ದಾರಿಗಳ ಕುರಿತು ಸಂಪೂರ್ಣವಾಗಿ ತಿಳಿಯಬೇಕು.
    ಎಸ್‌ಇಒ ಉತ್ತಮ ಅಭ್ಯಾಸಗಳನ್ನು ಸರಿಯಾಗಿ ಅಳವಡಿಕೆ, ಹೊಸದಾಗಿ ಅಭಿವೃದ್ಧಿಪಡಿಸಿದ ಕೋಡ್​ಗಳ ಅಳವಡಿಕೆ ಸೇರಿದಂತೆ ತಂಡದೊಂದಿಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು.


    ಇದನ್ನು ಓದಿ: Job in Bounce: ಬೌನ್ಸ್​ ಕಂಪನಿಯಲ್ಲಿದೆ ಉದ್ಯೋಗ; ಡಿಗ್ರಿ ಆಗಿದ್ರೆ ಸಾಕು


    ಅರ್ಜಿ ಸಲ್ಲಿಕೆ ವಿಧಾನ (How To Apply)


    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.


    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.

    Published by:Seema R
    First published: