Jobs in CredR: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ನೇಮಕಾತಿಗೆ ಮುಂದಾದ ಕ್ರೇಡ್​ಆರ್​​ ಸಂಸ್ಥೆ

ಎಸ್​ಎಸ್​ಎಲ್​ಸಿ ಮತ್ತು ಪದವಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

 ಕ್ರೇಡ್​ಆರ್​​

ಕ್ರೇಡ್​ಆರ್​​

  • Share this:
    ಬೆಂಗಳೂರಿನ ಕ್ರೇಡ್​ಆರ್ (CredR)​​ ಸಂಸ್ಥೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು ಸೇರಿದಂತೆ ಅಹಮದಬಾದ್​, ದೆಹಲಿ, ಹೈದ್ರಾಬಾದ್​ ಸೇರಿದಂತೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಟೋಮೊಬೈಲ್​ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಸ್​ಎಸ್​ಎಲ್​ಸಿ ಮತ್ತು ಪದವಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕುರಿತ ಮಾಹಿತಿ ಆಯ್ಕೆ ವಿಧಾನ, ಅರ್ಜಿ ಸಲ್ಲಿಕೆ ಸೇರಿದಂತೆ ವಿವಿಧ ಮಾಹಿತಿ ಈ ಕೆಳಗಿನಂತಿದೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಕ್ರೇಡ್​​ಆರ್​
    ಹುದ್ದೆಆಟೋ ಎಕ್ಸ್​ಪರ್ಟ್​, ಎಕ್ಸ್​ಚೆಂಚ್​ ಎಕ್ಸ್​ಪರ್ಟ್​​
    ಹುದ್ದೆ ಸಂಖ್ಯೆನಿಗದಿಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳಬೆಂಗಳೂರು, ಅಹಮದಾಬಾದ್​, ದೆಹಲಿ, ಜೈಪುರ, ಪುಣೆ
    ವೇತನಸಂಸ್ಥೆಯ ನಿಯಮ ಅನುಸಾರ

    ಶೈಕ್ಷಣಿಕ ಅರ್ಹತೆ:
    ಆಟೋ ಎಕ್ಸ್​ಪರ್ಟ್​​ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10 ನೇ ತರಗತಿ ಪಾಸ್​ ಆಗಿರಬೇಕು.
    ಎಕ್ಸ್​ಚೇಂಜ್​ ಎಕ್ಸ್​ಪರ್ಟ್​​ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು.

    ಇದನ್ನು ಓದಿ: ತುಮಕೂರಿನಲ್ಲಿ ಕಂಪ್ಯೂಟರ್​ ಆಪರೇಟರ್​, ಸಮಾಲೋಚಕರ ಹುದ್ದೆಗೆ ಅರ್ಜಿ ಅಹ್ವಾನ

    ಅನುಭವ: ಮೆಕಾನಿಕ್​ ಆಗಿ ಅಥವಾ ಮೋಟರ್​ ಸೈಕಲ್​ ಸರ್ವೀಸ್​ನಲ್ಲಿ ಕನಿಷ್ಠ 2 ವರ್ಷದ ಅನುಭವ ಹೊಂದಿರಬೇಕು.
    ವಾಹನದ ಸಮಸ್ಯೆಗಳ ಬಗ್ಗೆ ಅರಿವಿದ್ದು, ಅವುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು.
    ಗ್ರಾಹಕರೊಂದಿಗೆ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.

    ಅರ್ಜಿ ಸಲ್ಲಿಕೆ ವಿಧಾನ: ಇಮೇಲ್​ ಮುಖಾಂತರ
    ಇಮೇಲ್​ ವಿಳಾಸ: hr@credr.com.
    ಅಧಿಕೃತ ವೆಬ್​ಸೈಟ್​: credr.com

    ಹುದ್ದೆಯ ಜವಾಬ್ದಾರಿ (Jobs Roles And Responsibility)
    ಮೋಟಾರ್​ ಸೈಕಲ್​​ ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸಬೇಕು
    ಇಂಜಿನ್​ಗಳ ವ್ಯವಸ್ಥೆಗಳ ದುರಸ್ತಿ ಮಾಡುವ ಅನುಭವ ಇರಬೇಕು.
    ಸೇವಾ ಕೇಂದ್ರಗಳ ನಡುವೆ ಸಮನ್ವಯವನ್ನು ನಡೆಸಬೇಕು.
    ಆಟೋ ಮೊಬೈಲ್​ ಕ್ಷೇತ್ರದ ಬಗ್ಗೆ ತಿಳಿದಿರಬೇಕು.
    ಅಭ್ಯರ್ಥಿಯು ಮೋಟರ್​ ವಾಹನಗಳ ವಿನಿಮಯ ನಡೆಸುವ ಜೊತೆಗೆ ಅಗತ್ಯ ದಾಖಲೆ ಮತ್ತು ಸ್ವತುಗಳನ್ನು ಪರಿಶೀಲಸಬೇಕು.
    ಗ್ರಾಹಕರಿಂದ ಸಂಗ್ರಹಿಸಿದ ದಾಖಲಾತಿಗಳನ್ನು ಪರಿಶೀಲನೆ ಹಾಗೂ ಹಸ್ತಾಂತರ
    ಮಾರ್ಕೆಟಿಂಗ್​ ಚಟುವಟಿಕೆಯಲ್ಲಿ ಭಾಗಿಯಾಗಬೇಕು.
    ಸ್ಥಳೀಯ ಭಾಷೆಯ ಅರಿವಿರಬೇಕು.
    ಸೇಲ್ಸ್​ ಪರಿಕರಗಳ ಅಗತ್ಯ ಮಾಹಿತಿ ಹೊಂದಿರಬೇಕು.

    ಇದನ್ನು ಓದಿ: ರೈಲ್ ಇಂಡಿಯಾದಲ್ಲಿದೆ ಅಪ್ರೆಂಟಿಸ್​ ಹುದ್ದೆ; ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜು.31

    ವಿಶೇಷ ಸೂಚನೆ (Special Instruction)
    ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಹುದ್ದೆ ಹೆಸರು- ಸ್ಥಳದ ಹೆಸರಿನ ಬಗ್ಗೆ ಸ್ಪಷ್ಟವಾಗಿ ನಮೂದಿಸಿ, ನವೀಕರಿಸಿ ರೆಸ್ಯೂಮ್​ ಅನ್ನು ಮೇಲಿನ ಇಮೇಲ್​ ವಿಳಾಸಕ್ಕೆ ಸಲ್ಲಿಸಬೇಕು.

    ಅರ್ಜಿ ಸಲ್ಲಿಕೆ ವಿಧಾನ (How To Apply)

    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
    Published by:Seema R
    First published: